ಸುಖಾಸುಮ್ಮನೆ ವದಂತಿ ಹರಡಬೇಡಿ; ಟೆಸ್ಟ್ ವೃತ್ತಿ ಬದುಕಿನ ಗಾಳಿಸುದ್ದಿಗೆ ಖಾರವಾಗಿ ಪ್ರತಿಕ್ರಿಯಿಸಿದ ಭುವನೇಶ್ವರ್
ನಿಮಗೊಂದು ಸಲಹೆ; ದಯವಿಟ್ಟು ನಿಮ್ಮ ಊಹೆಗಳನ್ನು ಆಧರಿಸಿ ವರದಿಗಳನ್ನು ಬರೆಯಬೇಡಿ ಎಂದು ಬರೆದುಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ತಂಡದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಬಿಸಿಸಿಐ ಆಯ್ಕೆ ಮಾಡದ ಕಾರಣ ಹಲವು ವದಂತಿಗಳು ಬರುತ್ತಿವೆ. ಈ ನಿರ್ಧಾರದ ಹಿಂದಿನ ಕಾರಣ ಭುವಿಯ ಫಿಟ್‌ನೆಸ್ ಕಾರಣ ಎಂದು ಬಿಸಿಸಿಐ ಉಲ್ಲೇಖಿಸಿದರೆ, ಕೆಲವು ವರದಿಗಳು ಭುವಿ ಇನ್ನು ಮುಂದೆ ಟೆಸ್ಟ್ ಆಡಲು ಬಯಸುವುದಿಲ್ಲ ಮತ್ತು ಅದಕ್ಕಾಗಿಯೇ ಅವರಿಗೆ ಅವಕಾಶ ಸಿಗಲಿಲ್ಲ ಎಂದು ಹೇಳಿದ್ದಾರೆ. ಈಗ ಈ ವಿಷಯದ ಬಗ್ಗೆ ಭುವನೇಶ್ವರ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಎಲ್ಲ ಸಂಗತಿಗಳನ್ನು ತಳ್ಳಿಹಾಕುವ ಮೂಲಕ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಭುವಿ ಈಗ ತನ್ನ ಎಲ್ಲ ಗಮನವನ್ನು ಸೀಮಿತ ಓವರ್‌ಗಳ ಸ್ವರೂಪಕ್ಕೆ ಕೇಂದ್ರೀಕರಿಸಲು ಬಯಸುತ್ತಾರೆ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಲು ಸಿದ್ಧರಿಲ್ಲ ಎಂದು ಗಾಸಿಪ್ಗಳು ಹರಿದಾಡಿದ್ದವು. ಕೆಲವು ಸಮಯದಿಂದ ಅವರ ಕೆಲಸದ ಡ್ರಿಲ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಮತ್ತು ಅವರ ಆಪ್ತರಿಗೆ ಈ ಬಗ್ಗೆ ಚೆನ್ನಾಗಿ ತಿಳಿದಿದೆ. ಇದಲ್ಲದೆ, ಅವರು ದೀರ್ಘಕಾಲದವರೆಗೆ ಟೆಸ್ಟ್ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ ಮತ್ತು ವೈಟ್ ಬಾಲ್ ಕ್ರಿಕೆಟ್‌ನ ಮೆಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಭುವಿ ಈ ಎಲ್ಲಾ ಗಾಸಿಪ್ಗಳಿಗೆ ತೆರೆ ಎಳಿದಿದ್ದು ನನಗೆ ಟೆಸ್ಟ್ ಕ್ರಿಕೆಟ್ ಬಿಡುವ ಯಾವುದೇ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ.
ಭುವಿ ಟ್ವೀಟ್ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸ್ಪಷ್ಟೀಕರಣ ನೀಡಿ ಭುವಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಜನರು ತಮ್ಮ ಬಗ್ಗೆ ತಪ್ಪು ಸಂದೇಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬರೆಯುತ್ತಿದ್ದಾರೆ. ಈಗಾಗಲೇ ಇಂತಹ ಅನೇಕ ಲೇಖನಗಳನ್ನು ಬರೆಯಲಾಗಿದೆ, ಅದರಲ್ಲಿ ನಾನು ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ಆಡಲು ಬಯಸುವುದಿಲ್ಲ ಎಂದು ಹೇಳಲಾಗಿದೆ. ಆದರೆ ಎಲ್ಲಾ ಮೂರು ಸ್ವರೂಪಗಳಿಗೆ ನಾನು ನನ್ನನ್ನು ಸಿದ್ಧಪಡಿಸುತ್ತೇನೆ ಮತ್ತು ಅದನ್ನು ಮುಂದುವರಿಸುತ್ತೇನೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಿಮಗೊಂದು ಸಲಹೆ; ದಯವಿಟ್ಟು ನಿಮ್ಮ ಊಹೆಗಳನ್ನು ಆಧರಿಸಿ ವರದಿಗಳನ್ನು ಬರೆಯಬೇಡಿ ಎಂದು ಬರೆದುಕೊಂಡಿದ್ದಾರೆ.
There have been articles about me not wanting to play Test cricket. Just to clarify, I have always prepared myself for all three formats irrespective of the team selection and will continue to do the same. Suggestion – please don’t write your assumptions based on “sources”!
— Bhuvneshwar Kumar (@BhuviOfficial) May 15, 2021
ಈ ಸುದ್ದಿ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಏಕೆಂದರೆ ಭುವಿ ಭಾರತಕ್ಕಾಗಿ ಜೋಹಾನ್ಸ್‌ಬರ್ಗ್‌ನಲ್ಲಿ 2018 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದರ ನಂತರ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವಕಾಶ ಸಿಗಲಿಲ್ಲ, ಜೊತೆಗೆ ಶಸ್ತ್ರಚಿಕಿತ್ಸೆಯ ನಂತರ ಇದು ಅವರ ಫಿಟ್‌ನೆಸ್ ಮೇಲೂ ಪರಿಣಾಮ ಬೀರಿತು.