ಶಮಿತಾ ಶೆಟ್ಟಿಯನ್ನು ಅಮ್ಮ ಎಂದು ಕರೆಯುವವರೆಲ್ಲರೂ ಹೋಗಿ ಮಕ್ಕಳ ‘ಬೋರ್ನ್ವಿಟಾ ಕ್ವಿಜ್ನಲ್ಲಿ ಭಾಗವಹಿಸಲಿ’: ಶಾರ್ದೂಲ್
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಬಿಗ್ಬಾಸ್ ಒಟಿಟಿಯಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಇತ್ತೀಚೆಗೆ ಸಹಸ್ಪರ್ಧಿಗಳು ಶಮಿತಾಗೆ ಅಮ್ಮನಷ್ಟು ವಯಸ್ಸಾದವಳು ಎಂದು ಆಡಿಕೊಂಡದ್ದಕ್ಕೆ ಪರವಿರೋಧ ವ್ಯಕ್ತವಾಗುತ್ತಿರುವಾಗಲೇ ಮಾಜಿ ಬಿಗ್ಬಾಸ್ ಸ್ಪರ್ಧಿ ಶಾರ್ದೂಲ್ ಶಮಿತಾ ಪರ ನಿಂತಿದ್ದಾರೆ.
ಮಾಜಿ ಬಿಗ್ಬಾಸ್ ಸ್ಪರ್ಧಿ ಶಾರ್ದೂಲ್ ಪಂಡಿತ್ ನಟಿ ಶಮಿತಾ ಶೆಟ್ಟಿ ಪರ ಬ್ಯಾಟ್ ಬೀಸಿದ್ದಾರೆ. ಬಿಗ್ಬಾಸ್ ಒಟಿಟಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಯವರನ್ನು ಸಹಸ್ಪರ್ಧಿಗಳು ವಯಸ್ಸಿನ ಅಂತರಕ್ಕೋಸ್ಕರ ಗೇಲಿ ಮಾಡುವುದನ್ನು ಕೇಳಿ ಶಾರ್ದೂಲ್ ಸಿಟ್ಟಾಗಿದ್ದಾರೆ. ಬಿಗ್ಬಾಸ್ ಸ್ಪರ್ಧಿಗಳಲ್ಲೊಬ್ಬರಾದ ಅಕ್ಷರಾ ಸಿಂಗ್ ಶಮಿತಾ ಶೆಟ್ಟಿಯನ್ನು ‘ಮಮ್ಮಿ’ ಎಂದು ಕರೆದಿದ್ದು ವೈರಲ್ ಆಗಿತ್ತು. ಇದಕ್ಕೆ ತೀವ್ರ ಪರವಿರೋಧ ಅಭಿಪ್ರಾಯ ವ್ಯಕ್ತವಾದ ಬೆನ್ನಲ್ಲೇ ಶಾರ್ದೂಲ್ ಶಮಿತಾ ಪರ ನಿಂತಿದ್ದಾರೆ. ಶಮಿತಾರನ್ನು ಅಮ್ಮ ಎಂದು ಕರೆಯುವವರೆಲ್ಲರೂ ಹೋಗಿ ‘ಬೋರ್ನ್ವಿಟಾ ಕ್ವಿಜ್ನಲ್ಲಿ ಭಾಗವಹಿಸಲಿ’ ಎಂದು ಅವರು ಹರಿಹಾಯ್ದಿದ್ದಾರೆ.
ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಶಾರ್ದೂಲ್, ‘‘ಸ್ಪರ್ಧೆಯಲ್ಲಿ ಶಮಿತಾ ಶೆಟ್ಟಿಯನ್ನು ಇತರ ಸ್ಪರ್ಧಿಗಳು ಅಮ್ಮ ಎಂದು ರೇಗಿಸುತ್ತಿರುವುದನ್ನು ನೋಡಿದೆ. ಅವಳಿಗೆ ಅಮ್ಮನಷ್ಟು ವಯಸ್ಸಾಗಿದೆಯೆಂದೂ ಹಾಗೂ ಅಮ್ಮ ಈ ತರಹ ಮಾಡುತ್ತಾರಾ? ಎಂದು ಕೇಳುವುದನ್ನೂ ವೀಕ್ಷಿಸಿದೆ. ಇತರರು ಶಮಿತಾಗಿಂತ ಅಷ್ಟು ಚಿಕ್ಕವರಾಗಿದ್ದರೆ ಹೋಗಿ ಬೋರ್ನ್ವಿಟಾ ಕ್ವಿಜ್ ಸ್ಪೃರ್ಧೆಯಲ್ಲಿ ಭಾಗವಹಿಸಲಿ’’ ಎಂದು ಶಾರ್ದುಲ್ ಕುಟುಕಿದ್ದಾರೆ.
ಶಾರ್ದುಲ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
What’s with age shaming @ShamitaShetty . Saw a clip where contestants are making fun of her and saying “mummy ki umr ki hai” to? Someone said “mummy aisa karti kya”? Arey itne jawan ho to bournvita quiz contest mai jao na sab. #BiggBoss15OTT #shamitashetty
— Shardul Pandit (@shardulpandit11) August 19, 2021
ಬಿಗ್ಬಾಸ್ ಮನೆಯಲ್ಲಿ ಅಕ್ಷರಾ ಸಿಂಗ್ರಿಂದ ಅಮ್ಮನಷ್ಟು ವಯಸ್ಸಾದವಳು ಹೇಳಿಸಿಕೊಂಡಿದ್ದ ಶಮಿತಾ ಶೆಟ್ಟಿ:
ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಕಿರಿಕ್ ಆಗುತ್ತದೆ. ಇತ್ತೀಚೆಗೆ ಕೇವಲ ಒಂದು ಉಪ್ಪಿನ ಡಬ್ಬಿಗಾಗಿ ಅಕ್ಷರಾ ಸಿಂಗ್ ಮತ್ತು ಶಮಿತಾ ಶೆಟ್ಟಿ ನಡುವೆ ಜಗಳ ಆಗಿದೆ. ಶಮಿತಾ ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆ ಎಂಬುದು ಕೂಡ ಅಕ್ಷರಾಗೆ ಸಿಟ್ಟು ತರಿಸಿದೆ. ‘ಈ ಹೆಂಗಸಿಗೆ ಅಮ್ಮನಷ್ಟು ವಯಸ್ಸಾಗಿದೆ. ಆದರೂ ಕೂಡ ಯಾರ ಜೊತೆ ಹೇಗೆ ಮಾತನಾಡಬೇಕು ಎಂಬಷ್ಟು ಬುದ್ಧಿ ಇಲ್ಲ’ ಎಂದು ಅಕ್ಷರಾ ಕೂಗಾಡಿದ್ದರು.
ಇದನ್ನೂ ಓದಿ:
ಮದುವೆ ನಂತರ ಬಿಕಿನಿ ತೊಟ್ಟ ಕಾಜಲ್ ಅಗರ್ವಾಲ್; ಆದರೆ, ಇದರ ಬಗ್ಗೆ ಅಭಿಮಾನಿಗಳು ಮಾತನಾಡುವಂತಿಲ್ಲ
(former Big Boss contestant Shardul Pandit supports Shamitha Shetty when others are shaming her for age)