ಉದಯ ಟಿವಿಯಲ್ಲಿ ‘ಕಾದಂಬರಿ’ ಮತ್ತು ‘ನಿನ್ನಿಂದಲೇ’; ಮಸ್ತ್​ ಮನರಂಜನೆಗೆ 2 ಹೊಸ ಸೀರಿಯಲ್​

‘ಕಾದಂಬರಿ’ ಮತ್ತು ‘ನಿನ್ನಿಂದಲೇ’ ಧಾರಾವಾಹಿಗಳ ಪ್ರಸಾರಕ್ಕೆ ಉದಯ ಟಿವಿ ಸಜ್ಜಾಗಿದೆ. ಆ.23ರಿಂದ ಬಿತ್ತರವಾಗಲಿರುವ ಈ ಸೀರಿಯಲ್​ಗಳಲ್ಲಿ ಡಿಫರೆಂಟ್​ ಕಥಾಹಂದರ ಇದೆ.

ಉದಯ ಟಿವಿಯಲ್ಲಿ ‘ಕಾದಂಬರಿ’ ಮತ್ತು ‘ನಿನ್ನಿಂದಲೇ’; ಮಸ್ತ್​ ಮನರಂಜನೆಗೆ 2 ಹೊಸ ಸೀರಿಯಲ್​
ಉದಯ ಟಿವಿಯಲ್ಲಿ ‘ಕಾದಂಬರಿ’ ಮತ್ತು ‘ನಿನ್ನಿಂದಲೇ’; ಮಸ್ತ್​ ಮನರಂಜನೆಗೆ 2 ಹೊಸ ಸೀರಿಯಲ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 19, 2021 | 7:12 PM

ದೈನಂದಿನ ಧಾರಾವಾಹಿಗಳ ಮೂಲಕ ಮನರಂಜನೆ ನೀಡುತ್ತ ಬಂದಿರುವ ಉದಯ ವಾಹಿನಿಗೆ ದಶಕಗಳ ಇತಿಹಾಸವಿದೆ. ಈವರೆಗೂ ನೂರಾರು ಸೀರಿಯಲ್​ಗಳು ಈ ವಾಹಿನಿಯಲ್ಲಿ ಪ್ರಸಾರ ಕಂಡಿವೆ. ಹೊಸ ಹೊಸ ಧಾರಾವಾಹಿಗಳ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವ ಉದಯ ವಾಹಿನಿ ಈಗ ಇನ್ನೆರಡು ಹೊಸ ಸೀರಿಯಲ್​ಗಳನ್ನು ಪರಿಚಯಿಸುತ್ತಿದೆ. ‘ಕಾದಂಬರಿ’ ಮತ್ತು ‘ನಿನ್ನಿಂದಲೇ’ ಶೀರ್ಷಿಕೆಯ ಎರಡು ಸೀರಿಯಲ್​ಗಳು ಮಧ್ಯಾಹ್ನದ ಮನರಂಜನೆಗೆ ಸಜ್ಜಾಗಿವೆ. ಆ.23ರಿಂದ ‘ಕಾದಂಬರಿ’ ಧಾರಾವಾಹಿ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದ್ದು, 2.30ಕ್ಕೆ ‘ನಿನ್ನಿಂದಲೇ’ ಬಿತ್ತರವಾಗಲಿದೆ.

ಏನು ಕಾದಂಬರಿಯ ಕಹಾನಿ?

ಶ್ರೀದುರ್ಗಾ ಕ್ರಿಯೇಷನ್ಸ್‌ ಮೂಲಕ ‘ಕಾದಂಬರಿ’ ಸೀರಿಯಲ್ ಮೂಡಿಬರಲಿದೆ. ಇದರ ಕಥಾನಾಯಕಿ ಕಾದಂಬರಿಯು ಕೆಳಮಧ್ಯಮ ವರ್ಗದ ಹುಡುಗಿ. ದುಡಿಯಲು ವಿದೇಶಕ್ಕೆ ಹೋದ ಅಪ್ಪನ ಸುಳಿವಿಲ್ಲ. ಇದ್ದ ಒಬ್ಬ ಪ್ರೀತಿಯ ಅಣ್ಣ ಜೀವನದಲ್ಲಿ ಸೋತು ಮದ್ಯವ್ಯಸನಿ ಆಗಿದ್ದಾನೆ. ಹೀಗಿರುವಾಗ ತುಂಬು ಕುಟುಂಬಕ್ಕೆ ಆಧಾರವಾಗಿ ಇವಳೊಬ್ಬಳದೇ ದುಡಿಮೆ. ಮನೆಯನ್ನು ನಿಭಾಯಿಸಲು ಹಗಲಿರುಳು ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವಳ ಶ್ರದ್ಧೆ, ಪರಿಶ್ರಮ ಕಂಡು ಇವಳ ಬಾಸ್‌ ಸುದರ್ಶನ್‌ ಚಕ್ರವರ್ತಿಗೆ ಇವಳ ಮೇಲೆ ಅಭಿಮಾನ, ಅಪಾರ ನಂಬಿಕೆ.

ಮನೆ ಮಗನಂತೆ ದುಡಿತಿರೋ ಕಾದಂಬರಿಗೆ ತನ್ನದೇ ಪುಟ್ಟ ಕನಸಿನ ಗೂಡಿದೆ. ಈಗಿನ ಕಾಲದ ಹುಡುಗಿಯರಿಗೆಲ್ಲಾ ಬಣ್ಣ-ಬಣ್ಣದ ಕನಸುಗಳಿದ್ದರೆ, ಕಾದಂಬರಿಗೆ ಇರುವುದು ಒಂದೇ ಆಸೆ. ಇವಳ ಮನಸನ್ನು ಅರ್ಥ ಮಾಡಿಕೊಳ್ಳುವ ಒಬ್ಬ ಸಂಗಾತಿಯ ಕೈಹಿಡಿದು, ಮುದ್ದಾದ ಮಕ್ಕಳನ್ನು ಹೆತ್ತು ಗೃಹಿಣಿಯಾಗಿ ಸಂಸಾರ ತೂಗಿಸಬೇಕು ಅಂತ. ಆದರೆ ಬೆನ್ನೇರಿರೋ ಮನೆ ಜವಾಬ್ದಾರಿ ಇವಳ ಕನಸನ್ನು ನನಸು ಮಾಡುತ್ತಾ ಎಂಬುದು ‘ಕಾದಂಬರಿ’ ಧಾರಾವಾಹಿಯ ಕೌತುಕ. ‘ಎಲ್ಲಾ ಧಾರಾವಾಹಿಗಳಲ್ಲಿ ತೋರಿಸುವ ದ್ವೇಷ ಅಸೂಯೆಗಳ ಕಿತ್ತಾಟವಿಲ್ಲದೆ, ಮಮತೆಗೆ ಕರಗುವ ಮಿಡ್ಲ್‌ ಕ್ಲಾಸ್‌ ಫ್ಯಾಮಿಲಿಯ ಹೈಕ್ಲಾಸ್‌ ಕಥೆ ಇದು’ ಎಂದು ನಿರ್ದೇಶಕ ದರ್ಶಿತ್‌ ಭಟ್ ಹೇಳಿದ್ದಾರೆ.

ಗಣಪತಿ ಭಟ್‌ ಇದರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸುನಾದ್‌ ಗೌತಮ್ ಸಂಗೀತ ಸಂಯೋಜನೆ, ಕೃಷ್ಣ ಕಂಚನಹಳ್ಳಿ ಛಾಯಾಗ್ರಹಣ, ಗಿರೀಶ್‌ ಚಿತ್ರಕಥೆ ಮತ್ತು ತುರುವೆಕೆರೆ ಪ್ರಸಾದ್‌ ಸಂಭಾಷಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ನಾಯಕಿಯಾಗಿ ಪವಿತ್ರ ನಾಯಕ್ ಮತ್ತು ನಾಯಕನಾಗಿ ರಕ್ಷಿತ್‌ ನಟಿಸುತ್ತಿದ್ದಾರೆ. ನಾಗೇಂದ್ರ ಶಾ, ಮಾಲತಿ, ಸುರೇಶ್ ರೈ, ಗಾಯಿತ್ರಿ ಪ್ರಭಾಕರ್, ಪ್ರಥಮಾ ರಾವ್, ನಿರಂಜನ್, ಶ್ವೇತಾ, ಪ್ರಗತಿ, ಅರ್ಪಿತಾ, ಪೃಥ್ವಿ ಯುವ ಸಾಗರ್, ಲಿಖಿತ, ಅಶೋಕ್ ಬಿ.ಎ, ರಾಧಿಕಾ ಶೆಟ್ಟಿ, ಆನಂದ್ ಹೀಗೆ ಹಲವಾರು ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸ್ನೇಹ-ಪ್ರೇಮಗಳ ‘ನಿನ್ನಿಂದಲೇ’

ಜನಪ್ರಿಯ ಕಲಾವಿದ ರಾಜೇಶ್​ ನಟರಂಗ ಅವರು ‘ನಿನ್ನಿಂದಲೇ’ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಇದು ಸುಂದರವಾದ ಲವ್​ಸ್ಟೋರಿಯನ್ನು ಒಳಗೊಂಡಿರುವ ಸೀರಿಯಲ್​. ಧ್ವನಿ ಕ್ರಿಯೇಷನ್ಸ್​ ಲಾಂಚನದಲ್ಲಿ ಇದೇ ಮೊದಲ ಬಾರಿಗೆ ಧಾರಾವಾಹಿ ನಿರ್ಮಾಣ ಆರಂಭಿಸಿರುವ ರಾಜೇಶ್​ ಅವರು ಈ ಪ್ರೇಮಕಥೆಯ ಮೂಲಕ ಅನೇಕ ಕೌಟುಂಬಿಕ ಆಂಶಗಳನ್ನು ವೀಕ್ಷಕರಿಗೆ ತೋರಿಸಲಿದ್ದಾರೆ.

ರಾಜಲಕ್ಷ್ಮಿಯದು ದೊಡ್ಡ ಕುಟುಂಬ. ಅಳಿಯನ ಮನೆಯವರ ಜೊತೆಗೆ ಆದ ಮನಸ್ತಾಪದಿಂದ ಎರಡೂ ಕುಟುಂಬ ದೂರ ಆಗಿವೆ. ಈ ಸಂಬಂಧಗಳನ್ನ ಮತ್ತೆ ಬೆಸೆಯೋಕೆ ಇರುವ ದಾರಿ ಎಂದರೆ ತನ್ನ ಮೊಮ್ಮಕ್ಕಳಾದ ಅನನ್ಯ ಮತ್ತು ವರುಣ್​ ಮದುವೆ ಮಾಡುವುದು. ಅನನ್ಯಾಳಿಗೆ ವರುಣ್‌ ತುಂಬಾ ಇಷ್ಟ. ಇಬ್ಬರ ನಡುವಿನ ಪವಿತ್ರ ಸ್ನೇಹದಲ್ಲಿ ಪ್ರೀತಿಯ ಅಲೆ ಹೊಮ್ಮಲಿದೆಯಾ ಎಂಬುದನ್ನು ತಿಳಿಯಲು ಈ ಧಾರಾವಾಹಿಯ ನೋಡಬೇಕು.

ಶರತ್‌ ಪರ್ವತವಾಣಿ ಬರೆದ ಕಥೆಗೆ ವಿನೋದ್‌ ಸಂಭಾಷಣೆ ಬರೆಯುತ್ತಿದ್ದಾರೆ. ದಿಲೀಪ್‌ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಚಿತ್ರಶ್ರೀ, ನಾಯಕನ ಪಾತ್ರದಲ್ಲಿ ದೀಪಕ್‌ ನಟಿಸುತ್ತಿದ್ದಾರೆ. ಜಯಶ್ರೀ, ಲಲಿತಾಂಜಲಿ, ನಮಿತಾ ದೇಸಾಯಿ, ಪ್ರಶಾಂತ್‌, ನಂದೀಶ್​, ಶೋಭಿತಾ ಮುಖ್ಯ ಪಾತ್ರಗಳನ್ನ ನಿಭಾಯಿಸುತ್ತಿದ್ದಾರೆ. ಇದರ ಶೀರ್ಷಿಕೆ ಗೀತೆಗೆ ಜಯಂತ್‌ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ವಸಂತ್‌ ಸಂಗೀತ ಸಂಯೋಜನೆ ಮಾಡಿದ್ದು, ಮಾನಸಾ ಹೊಳ್ಳಾ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ:

ಬಾಲಿವುಡ್​ನಲ್ಲಿ ಸ್ಟಾರ್​ ಆದಮೇಲೂ ಸುಶಾಂತ್​ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ