ಅಮಿತಾಭ್ ಬಚ್ಚನ್ ನನ್ನ ಪಾತ್ರ ಮೆಚ್ಚಿದ್ದರು, ಅದೇ ನನಗೆ ದೊಡ್ಡ ಪ್ರಶಸ್ತಿ; ವೈಜನಾಥ್ ಬಿರಾದಾರ್
ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬ ಕುದುರೆಯನ್ನೇರಿ’ ಸಿನಿಮಾದಲ್ಲಿ ಗಂಭೀರ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ವೈಜನಾಥ್ ನಟನೆ ನೋಡಿ ಅಮಿತಾಭ್ ಹೊಗಳಿದ್ದರು ಅನ್ನೋದು ವಿಶೇಷ.
ವೈಜನಾಥ್ ಬಿರಾದಾರ್ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕನ್ನಡದಲ್ಲಿ ಅವರು ಸಾಕಷ್ಟು ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬ ಕುದುರೆಯನ್ನೇರಿ’ ಸಿನಿಮಾದಲ್ಲಿ ಗಂಭೀರ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ವೈಜನಾಥ್ ನಟನೆ ನೋಡಿ ಅಮಿತಾಭ್ ಹೊಗಳಿದ್ದರು ಅನ್ನೋದು ವಿಶೇಷ.
‘ಗಿರೀಶ್ ಕಾಸರವಳ್ಳಿ ಅವರು ನನಗೆ ಒಂದು ಗಂಭೀರ ಪಾತ್ರ ಕೊಟ್ಟರು. ಆರಂಭದಲ್ಲಿ ನನಗೆ ಭಯ ಆಯ್ತು. ಹಾಸ್ಯ ಪಾತ್ರ ಮಾಡುತ್ತಿದ್ದವನಿಗೆ ಗಂಭೀರ ಪಾತ್ರ ಮಾಡೋದು ಹೇಗೆ ಎಂದು ಅನಿಸಿತ್ತು. ನಾನು ಹೇಳಿದ್ದನ್ನು ಮಾಡಿ ಅಷ್ಟೇ ಸಾಕು ಎಂದಿದ್ದರು ಗಿರೀಶ್ ಕಾಸರವಳ್ಳಿ. ಗಂಭೀರ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದೆ. ಈ ಪಾತ್ರವನ್ನು ಅಮಿತಾಭ್ ಹೊಗಳಿದ್ದರು’ ಎಂದಿದ್ದಾರೆ ವೈಜನಾಥ್.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಮನೆ ಹಾಗೂ ಮುಂಬೈನ 3 ರೈಲ್ವೇ ನಿಲ್ದಾಣಗಳಲ್ಲಿ ಬಾಂಬ್ ಇರಿಸಿರುವುದಾಗಿ ಪೊಲೀಸರಿಗೆ ಕರೆ ಮಾಡಿದ ಅನಾಮಿಕ