AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪೆಷೆಲ್​​ ಶೇಂಗಾ ಭಾಜಿ ಮಾಡುವ ವಿಧಾನ ಗೊತ್ತೇ? ಕೇವಲ 5 ನಿಮಿಷ ಸಾಕು ದಿಢೀರ್​ ತಿಂಡಿ ತಯಾರಿಸಲು

ಸ್ಪೆಷೆಲ್​​ ಶೇಂಗಾ ಭಾಜಿ ಮಾಡುವ ವಿಧಾನ ಗೊತ್ತೇ? ಕೇವಲ 5 ನಿಮಿಷ ಸಾಕು ದಿಢೀರ್​ ತಿಂಡಿ ತಯಾರಿಸಲು

TV9 Web
| Updated By: shruti hegde

Updated on: Aug 19, 2021 | 10:19 AM

ಇಂದು ಯಾವುದಾದ್ರೂ ಹೊಸ ರೆಸಿಪಿ ಮಾಡ್ಬೇಕಲ್ವಾ .. ಎಂದು ಯೋಚಿಸ್ತಾ ಇದ್ರೆ ನಿಮಗೊಂದು ರುಚಿಕರವಾದ ಹೊಸ ರೆಸಿಪಿಯನ್ನು ಹೇಳಿದ್ದೇವೆ. ಒಮ್ಮೆ ಮನೆಯಲ್ಲಿ ತಯಾರಿಸಿ ರುಚಿ ಸವಿಯಿರಿ.

ಹೊಸ ಹೊಸ ಖಾದ್ಯಗಳನ್ನು ಮನೆಯಲ್ಲೇ ಮಾಡಿ ಸವಿದರೆ ಮನಸ್ಸಿಗೇನೋ ಸಂತೋಷ, ನೆಮ್ಮದಿ. ರುಚಿಕರವಾದ ತಿನಿಸನ್ನು ಮನೆಯವರಿಗೆಲ್ಲಾ ಮಾಡಿ ಸವಿದ ಬಳಿಕ.. ತುಂಬಾ ಚೆನ್ನಾಗಿದೆ! ಎಂಬ ಮನೆಯವರ ಒಂದೇ ಒಂದು ಮಾತಿಗೆ ಮಹಿಳೆಯರೆಲ್ಲಾ ಕಾದು ಕುಳಿತಿರೋದು. ಹಾಗಿರುವಾಗ ಇಂದು ಯಾವುದಾದ್ರೂ ಹೊಸ ರೆಸಿಪಿ ಮಾಡ್ಬೇಕಲ್ವಾ .. ಎಂದು ಯೋಚಿಸ್ತಾ ಇದ್ರೆ ನಿಮಗೊಂದು ರುಚಿಕರವಾದ ಹೊಸ ರೆಸಿಪಿಯನ್ನು ಹೇಳಿದ್ದೇವೆ. ಒಮ್ಮೆ ಮನೆಯಲ್ಲಿ ತಯಾರಿಸಿ ರುಚಿ ಸವಿಯಿರಿ.

ಎಂದಾದರೂ ಶೇಂಗಾ ಭಾಜಿ ಮಾಡಿದ್ದೀರಾ? ಹೆಸರು ಅಲ್ಲೆಲ್ಲೋ ಕೇಳಿದಂತೆ ಅನಿಸ್ತಾ ಇರಬಹುದು. ಆದರೆ ಇದರ ರುಚಿ ಸವಿದರೆ ಪದೆ ಪದೇ ಸವಿಯಬೇಕು ಅನಿಸುತ್ತೆ. ಶೇಂಗಾ ಭಾಜಿ ತಯಾರಿಸುವ ಸಂಪೂರ್ಣ ವಿಧಾನ ಇಲ್ಲಿದೆ. ಉತ್ತರಕರ್ನಾಟಕ ಸ್ಟೈಲ್​ನ ಶೇಂಗಾ ಭಾಜೀ ತಯಾರಿಸಲು ಶೇಂಗಾ, ಮೊಸರು, ಸಕ್ಕರೆ, ಅರಿಶಿಣ, ಜೀರಿಗೆ, ಉಪ್ಪು, ಕರಿಬೇವು, ಸಾಸಿವೆ, ಎಣ್ಣೆ, ಹಸಿ ಮೆಣಸು, ಗರಂ ಮಸಾಲಾ, ಕೊತ್ತಂಬರಿ, ಮಸಾಲಾ ಖಾರ, ಈರುಳ್ಳಿ, ಟೊಮೆಟೋ ಇಷ್ಟೇ ಪದಾರ್ಥಗಳು ಸಾಕು. ಚಪಾತಿ, ರೊಟ್ಟಿ ಜತೆ ಸವಿಯಬಹುದು. ಕೇವಲ 5 ನಿಮಿಷದಲ್ಲಿ ಧಿಡೀರನೆ ತಯಾರಸಬಹುದಾದ ಶೇಂಗಾ ಭಾಜಿಯನ್ನು ಒಮ್ಮೆ ತಯಾರಿಸಿ ರುಚಿ ಸವಿಯಿರಿ.

ಇದನ್ನೂ ಓದಿ:

ಡ್ರೈ ಫ್ರೂಟ್ಸ್ ಉಂಡೆ; ರುಚಿಕರವಾದ ತಿಂಡಿ ಮಾಡಿ ಸವಿಯಿರಿ

ಉತ್ತರ ಕರ್ನಾಟಕ ಸ್ಪೆಷಲ್ ಎಣ್ಣೆ ಬದನೆಕಾಯಿ; ಸರಳ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ