ಮೃಗಾಲಯ ಸಿಬ್ಬಂದಿ ಹೆಬ್ಬಾವು ದಾಳಿಯಿಂದ ಎರಡು ಬಾರಿ ತಪ್ಪಿಸಿಕೊಂಡ, ಅವನ ಪತ್ನಿಯ ತಾಳಿ ಗಟ್ಟಿಯಾಗಿದೆ!
ಹೆಬ್ಬಾವುಗಳು ಮಾನವರನ್ನು ನುಂಗುತ್ತವೆ ಅಂತ ಕೆಲವರು ಹೇಳುತ್ತಾರೆ. ಆದರೆ ವಿಜ್ಞಾನಿಗಳ ಪ್ರಕಾರ ಅದಕ್ಕೆ ಅದು ಸಾಧ್ಯವಾಗಲಾರದು. ಹೆಬ್ಬಾವು ಸಾಕಷ್ಟು ಅಗಲವಾಗಿ ಮಾಯಿ ತೆರೆಯಬಲ್ಲದು, ಆದರೆ ಅದಕ್ಕೆ ಕೇವಲ ಮಾನವನ ರುಂಡ ಮಾತ್ರ ನುಂಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.
ಹಾವು ಕಂಡರೆ ಭಯಭೀತರಾಗುವವರ ಪೈಕಿ ನೀವೂ ಒಬ್ಬರಾಗಿದ್ದರೆ ದಯವಿಟ್ಟು ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋವನ್ನು ನೋಡುವ ಸಾಹಸ ಸರ್ವಥಾ ಮಾಡಬೇಡಿ. ಇದು ನಿಶ್ಚಿತವಾಗಿಯೂ ನಿಮ್ಮಲ್ಲಿ ಮತ್ತಷ್ಟು ಹೆದರಿಕೆಯನ್ನು ಹುಟ್ಟಿಸುತ್ತದೆ. ಓಕೆ, ದೈರ್ಯಮಾಡಿ ನೋಡುವವರಿಗೆ ಈ ಕತೆ ಹೇಳುತ್ತೇವೆ. ಹಾವುಗಳಿಗೆಂದೇ ಮಾಡಿರುವ ಕ್ಯಾಲೊಪೋರ್ನಿಯಾದ ಝೂವೊಂದರಲ್ಲಿ ಸೆರೆಹಿಡಿದಿರುವ ವಿಡಿಯೋ ಇದಾಗಿದೆ. ವಿಡಿಯೋನಲ್ಲಿ ಒಂದು ಭಾರಿ ಗಾತ್ರದ ಹೆಬ್ಬಾವು ನಿಮಗೆ ಕಾಣುತ್ತಿದೆ. ನೀವಂದುಕೊಳ್ಳುವ ಹಾಗೆ ಅದು ಮಲಗಿ ನಿದ್ರಿಸುತ್ತಿಲ್ಲ. ಇಲ್ಲೊಬ್ಬ ಮೃಗಾಲಯದ ಸಿಬ್ಬಂದಿಯೂ ಇದ್ದಾನೆ.. ಹಾವಿಗೆ ಅವನ ಮೇಲೆ ಅದೇನು ಕೋಪವೋ? ಅವನ ಮೇಲೆ ಒಮ್ಮೆಯಲ್ಲ ಎರಡು ಬಾರಿ ಆಕ್ರಮಣ ನಡೆಸುವ ಪ್ರಯತ್ನ ಅದು ಮಾಡಿದೆ. ಅದೃಷ್ಟವಶಾತ್ ಕೂದಲೆಳೆಯ ಅಂತರದಿಂದ ಅವನು ಪಾರಾಗಿದ್ದಾನೆ. ವಿಡಿಯೋವನ್ನು ಸದರಿ ಝೂನ ಸಂಸ್ಥಾಪಕರಾಗಿರುವ ಜೇ ಬ್ರಿವರ್ ಪೋಸ್ಟ್ ಮಾಡಿದ್ದಾರೆ.
ಬ್ರಿವರ್ ತಮ್ಮ ಮೃಗಾಲುದಲ್ಲಿರುವ ಹಾವುಗಳು ಮತ್ತು ಇತರ ಪ್ರಾಣಿಗಳ ಕೆಲ ಕೌತುಕಮಯ ವಿಡಿಯೋಗಳನ್ನು ಆಗಾಗ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಿರುತ್ತಾರೆ. ಇಲ್ಲಿ ವಿಡಿಯೋನಲ್ಲಿರೋದು ಹೆಣ್ಣು ಹಾವಾಗಿದ್ದು ಸದ್ಯಕ್ಕೆ ತನ್ನ ಮೊಟ್ಟೆಗಳನ್ನು ಇನ್ಕ್ಯುಬೇಟ್ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಮೊಟ್ಟೆ ತೆಗೆದುಕೊಳ್ಳಲೆಂದು ಮೃಗಾಲಯದ ಸಿಬ್ಬಂದಿ ಬಂದಿರಬಹುದೆಂದು ಭಾವಿಸಿ ಅವನ ಮೇಲೆ ಅದು ಆಕ್ರಮಣ ನಡೆಸುವ ಪ್ರಯತ್ನ ಮಾಡಿರಬಹುದೆಂದು ಬ್ರಿವರ್ ಹೇಳಿದ್ದಾರೆ.
View this post on Instagram
ಈ ವಿಡಿಯೋವನ್ನು 10 ಲಕ್ಷಕ್ಕಿಂತ ಜಾಸ್ತಿ ಜನ ನೋಡಿದ್ದಾರೆ.
ಹೆಬ್ಬಾವುಗಳು ಮಾನವರನ್ನು ನುಂಗುತ್ತವೆ ಅಂತ ಕೆಲವರು ಹೇಳುತ್ತಾರೆ. ಆದರೆ ವಿಜ್ಞಾನಿಗಳ ಪ್ರಕಾರ ಅದಕ್ಕೆ ಅದು ಸಾಧ್ಯವಾಗಲಾರದು. ಹೆಬ್ಬಾವು ಸಾಕಷ್ಟು ಅಗಲವಾಗಿ ಮಾಯಿ ತೆರೆಯಬಲ್ಲದು, ಆದರೆ ಅದಕ್ಕೆ ಕೇವಲ ಮಾನವನ ರುಂಡ ಮಾತ್ರ ನುಂಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಹೆಬ್ಬಾವು ಕುರಿ, ಜಿಂಕೆ ಮುಂತಾದ ಚಿಕ್ಕ ಗಾತ್ರದ ಪ್ರಾಣಿಗಳನ್ನು ಅನಾಮತ್ತಾಗಿ ನುಂಗಬಲ್ಲದು.