ಸಾಹಸಪ್ರಿಯ ಬೈಕ್ ಸವಾರರಿಗೆ 2021 ಕಾವಾಸಾಕಿ ಜೆಡ್ 650 ಬೈಕ್ ಸೆಪ್ಟಂಬರ್ನಲ್ಲಿ ಸಿಗಲಿದೆ
ಕಂಪನಿಗಳ ಮೂಲಗಳ ಪ್ರಕಾರ ಕಾವಾಸಾಕಿ ಜೆಡ್ 650 ಬೈಕ್ ಸ್ಪೋರ್ಟ್ಸ್ ಸೂಪರ್ ಬೈಕ್ ಆವೃತ್ತಿಯೂ ಗ್ರಾಹಕರಿಗೆ ಲಭ್ಯವಾಗಲಿದೆ. ಕಾವಾಸಾಕಿ ಜೆಡ್ ಸರಣಿ ಬೈಕ್ಗಳು ನಿಸ್ಸಂದೇಹವಾಗಿ ಸಾಹಸಪ್ರಿಯರಿಗೆ ವಿನ್ಯಾಸಗೊಂಡಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬೈಕ್ ಸೆಗ್ಮೆಂಟ್ನಲ್ಲಿ ಜೆಡ್ ಬ್ರ್ಯಾಂಡಿನ ಪಾರುಪತ್ಯ ಹಿನ್ನೆಲೆಯಲ್ಲಿ ಅದರ ಮಧ್ಯಮ ತೂಕದ ಸೋದರ ಸಂಬಂಧಿ 2021 ಕಾವಾಸಾಕಿ ಜೆಡ್ 650 ಬೈಕ್ ಅನ್ನು ಕಾವಾಸಾಕಿ ಮೋಟಾರ್ಸ್ ಲಾಂಚ್ ಮಾಡಿದೆ. ಸದರಿ ಬೈಕ್ಗಳ ಡೆಲಿವರಿ ಸೆಪ್ಟೆಂಬರ್ 2021 ರಿಂದ ಆರಭವಾಗಲಿದೆ ಎಂದು ಕಂಪನಿ ಮೂಲಗಳು ಹೇಳಿವೆ. ಕಾವಾಸಾಕಿ ಜೆಡ್ 650 ಬೈಕ್ ಕ್ಯಾಂಡಿ ಲೈಮ್ ಗ್ರೀನ್ ಟೈಪ್ 3 ಬಣ್ಣದ ಸ್ಕೀಮ್ನಲ್ಲಿ ಲಭ್ಯವಾಗಲಿದೆ. ಕಲರ್ ಸ್ಕೀಮಿನ ಹೊರತಾಗಿ ಕಾವಾಸಾಕಿ ಜೆಡ್ 650 ಬೈಕ್ ಇದರ ಹಳೆಯ ಮಾಡೆಲ್ಗಳಂತೆಯೇ ಇರಲಿದ್ದು ಹೆಚ್ಚಿನ ಬದಲಾವಣೆಗಳನ್ನು ಮಾಡುವ ಗೋಜಿಗೆ ಕಂಪನಿ ಹೋಗಿಲ್ಲ.
ಅಂದಹಾಗೆ, ಭಾರತದಲ್ಲಿ ಕಾವಾಸಾಕಿ ಜೆಡ್ 650 ಬೈಕ್ ಎಕ್ಸ್ ಶೋರೂಮ್ ಬೆಲೆ ರೂ 6.24 ಲಕ್ಷ ಆಗಿರಲಿದೆ. ಈ ಬೈಕ್ 6 ಸ್ಪೀಟ್ ಗೇರ್ಗಳನ್ನು ಹೊಂದಿದೆ ಮತ್ತು ಅದಕ್ಕೆ ಸ್ಲಿಪ್ಪರ್ ಕ್ಲಚ್ ಅಳವಡಿಸಲಾಗಿದೆ. ಕಾವಾಸಾಕಿ ಜೆಡ್ 650 ಬೈಕ್ ಭಾರ 41 ಎಮ್ ಎಮ್ ಟೆಲಿಸ್ಕೋಪಿಕ್ ಪೋರ್ಕ್ಗಳ ಮೇಲಿರುತ್ತದೆ ಮತ್ತು ಪ್ರೀಲೋಡ್-ಅಡ್ಜಸ್ಟೇಬಲ್ ಮೊನೊಶಾಕ್ನೊಂದಿಗೆ ಬರುತ್ತದೆ.
ಕಂಪನಿಗಳ ಮೂಲಗಳ ಪ್ರಕಾರ ಕಾವಾಸಾಕಿ ಜೆಡ್ 650 ಬೈಕ್ ಸ್ಪೋರ್ಟ್ಸ್ ಸೂಪರ್ ಬೈಕ್ ಆವೃತ್ತಿಯೂ ಗ್ರಾಹಕರಿಗೆ ಲಭ್ಯವಾಗಲಿದೆ. ಕಾವಾಸಾಕಿ ಜೆಡ್ ಸರಣಿ ಬೈಕ್ಗಳು ನಿಸ್ಸಂದೇಹವಾಗಿ ಸಾಹಸಪ್ರಿಯರಿಗೆ ವಿನ್ಯಾಸಗೊಂಡಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾರುಗಳಿಗೆ ಬೇಡಿಕೆ ದಿನೇದಿನೆ ಹೆಚ್ಚುತ್ತಿದ್ದರೂ ಬೈಕ್ಗಳ ಬೇಡಿಕೆ ಮಾತ್ರ ತಗ್ಗುತ್ತಿಲ್ಲ. ಹೊಸ ವಿನ್ಯಾಸಗಳು, ಹೊಸ-ಹೊಸ ಮಾಡಲ್ಗಳು ಮಾರುಕಟ್ಟೆಗೆ ಲಗ್ಗೆಯಿಡುವುದು ನಿಂತಿಲ್ಲ.
ಆದರೆ ಗಮನಿಸಬೇಕಾದ ಸಂಗತಿಯೆಂದರೆ, ಎಲೆಕ್ಟ್ರಿಕ್ ವಾಹನಗಳ ಶಕೆ ಈಗ ಆರಂಭಗೊಂಡಿದೆ. ಮುಂದೆ ಎಷ್ಟು ದಿನಗಳವರೆಗೆ ಪೆಟ್ರೋಲ್ನಿಂದ ಓಡುವ ವಾಹನಗಳು ಜನರಿಗೆ ಇಷ್ಟವಾಗಲಿವೆ ಎನ್ನುವುದು ಕಾದುನೋಡಬೇಕಿರುವ ಸಂಗತಿ.
ಇದನ್ನೂ ಓದಿ: ತೆಂಗಿನ ಮರ ಏರಿ ರೈತನ ಪ್ರತಿಭಟನೆ; ತಾಲೂಕು ಆಡಳಿತದ ವಿರುದ್ಧ ಆಕ್ರೋಶ: ವಿಡಿಯೋ ವೈರಲ್