ಅಫ್ಘಾನಿಸ್ತಾನದ ಮೇಲೆ ಭಾರತ ಹೂಡಿಕೆ ಮಾಡಿದ ಹಣವೆಷ್ಟು ಗೊತ್ತೇ?

ಅಫ್ಘಾನಿಸ್ತಾನದ ಮೇಲೆ ಭಾರತ ಹೂಡಿಕೆ ಮಾಡಿದ ಹಣವೆಷ್ಟು ಗೊತ್ತೇ?

TV9 Web
| Updated By: Digi Tech Desk

Updated on:Aug 18, 2021 | 4:44 PM

ಅಫಘಾನಿಸ್ತಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾರತ ಸುಮಾರು 24,000 ಕೋಟಿ ರೂಪಾಯಿಗಳನ್ನು ತೊಡಗಿಸಿದೆ. ದೆಲಾರಮ್ ಮತ್ತು ಝರಂಜ್ ಸಲ್ಮಾ ಡ್ಯಾಂ ನಡುವಿನ 218-ಕಿಮೀ ಉದ್ದದ ರಸ್ತೆ ನಿರ್ಮಿಸಿದ್ದು ಭಾರತ ಅಂತ ಬಹಳಷ್ಟು ಜನಕ್ಕೆ ಗೊತ್ತಿರಲಾರದು.

ಆಧುನಿಕ ಅಫಘಾನಿಸ್ತಾನ ನಿರ್ಮಾಣಗೊಳ್ಳಲು ಕಳೆದ ಎರಡು ದಶಕಗಳಲ್ಲಿ ಭಾರತ ನೀಡಿರುವ ಕೊಡುಗೆ ಸಾಮಾನ್ಯವಾದುದ್ದೇನಲ್ಲ. ಆದರೆ ತಾಲಿಬಾನ್ ಆ ದೇಶವನ್ನು ಪುನಃ ವಶಡಿಸಿಕೊಂಡಿರುವುದರಿಂದ ಈ ಪ್ರಾಂತ್ಯದ ಬೆಳವಣಿಗೆಗೆಗೆ ಭಾರತ ಪಟ್ಟ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗುವ ಸಂಶಯ ಹುಟ್ಟಿಕೊಂಡಿದೆ. ಯಾಕೆಂದರೆ, ತಾಲಿಬಾನ್ ಬಂಡುಕೋರರ ಸಂಘಟನೆಯಲ್ಲಿ ಸಾವಿರಾರು ಪಾಕಿಸ್ತಾನಿಗಳು ಸೇರಿಕೊಂಡಿದ್ದಾರೆ. ಅವರು ಪಾಕಿಸ್ತಾನದ ಆಂತರಿಕ ಗುಪ್ತಚರ ಸೇವೆ (ಐಎಸ್ಐ) ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಾರೆ. ಭಾರತದ ಸಹಾಯದಿಂದ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ಟಾರ್ಗೆಟ್ ಮಾಡುವಂತೆ ಆವರಿಗೆ ಐಎಸ್ಐ ಸೂಚಿಸಿದರೆ ಆಶ್ಚರ್ಯವಿಲ್ಲ.

ಅಫಘಾನಿಸ್ತಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾರತ ಸುಮಾರು 24,000 ಕೋಟಿ ರೂಪಾಯಿಗಳನ್ನು ತೊಡಗಿಸಿದೆ. ದೆಲಾರಮ್ ಮತ್ತು ಝರಂಜ್ ಸಲ್ಮಾ ಡ್ಯಾಂ ನಡುವಿನ 218-ಕಿಮೀ ಉದ್ದದ ರಸ್ತೆ ನಿರ್ಮಿಸಿದ್ದು ಭಾರತ ಅಂತ ಬಹಳಷ್ಟು ಜನಕ್ಕೆ ಗೊತ್ತಿರಲಾರದು. ಗೆಳೆತನದ ಕೊಡುಗೆಯಾಗಿ ಅಫಘಾನಿಸ್ತಾನದ ಸಂಸತ್ ಭವನವನ್ನು ಭಾರತ 669 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದೆ.

ಕಾಬೂಲ್ ನಗರದಲ್ಲಿರುವ ಶತಮಾನಗಳಷ್ಟು ಹಳೆಯ ಸ್ತೋರ್ ಅರಮನೆಯ ಜೀರ್ಣೋದ್ಧಾರ ಕಾರ್ಯವನ್ನು ಭಾರತ ರೂ 51 ಕೋಟಿಗಳ ವೆಚ್ಚದಲ್ಲಿ ಮಾಡಿಕೊಟ್ಟಿದೆ. ನಿರಂತರ ಯುದ್ಧಗಳಿಂದ ಜರ್ಝರಿತಗೊಂಡಿರುವ ಅಫಘಾನಿಸ್ತಾನದಲ್ಲಿ ಸಾಮಾಜಿಕ-ಅರ್ಥಿಕ ಬೆಳವಣಿಗೆಗೆ ಭಾರತ ರೂ.15,000 ಕೋಟಿಗಳನ್ನು ಇನ್ವೆಸ್ಟ್ ಮಾಡಿದೆ.

ಅಫಫಾನಿಸ್ತಾನದ ಅನೇಕ ಗಣ್ಯರು ಓದಿರುವ ಕಾಬೂಲ ನಗರದಲ್ಲಿರುವ ಹಬೀಬಿಯಾ ಶಾಲೆಯ ಪುನಶ್ಚೇತನಕ್ಕೆ ಭಾರತ ಕೋಟಿಗಳನ್ನು ಸುರಿದಿದೆ. ಹಾಗೆಯೇ 1985ರಲ್ಲಿ ನಿರ್ಮಿಸಲಾಗಿದ್ದ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಕೇಂದ್ರದ ಪುನಶ್ಚೇತನ ಕೆಲಸವನ್ನು ಭಾರತವೇ ಮಾಡಿಕೊಟ್ಟಿದೆ.

ಭಾರತ, ಇರಾನ್, ಅಫಘಾನಿಸ್ತಾನ, ಅರ್ಮೇನಿಯಾ, ಅಜರ್ಬೈಜಾನ್, ರಷ್ಯಾ, ಕೆಂದ್ರೀಯ ಏಷ್ಯಾ ಮತ್ತು ಯುರೋಪ್ ಭಾಗಗಳಲ್ಲಿ ಸರಕು ಸಾಗಣೆ ನಿರ್ಮಿಸಲಾಗುತ್ತಿರುವ 7,200 ಕಿಮೀ ಉದ್ದದ ಅಂತರರಾಷ್ಟ್ರೀಯ ರಸ್ತೆ ಬಹುಕೋಟಿ ಯೋಜನೆಯಲ್ಲೂ ಭಾರತ ಕೋಟ್ಯಾಂತರ ಹಣ ಹೂಡಿದೆ.

ಇದನ್ನೂ ಓದಿ:  ಅಫಘಾನಿಸ್ತಾನದ ಮಹಿಳೆಯರು ಇನ್ನು ತಾಲಿಬಾನಿಗಳ ಕೈಗೆ ಸಿಕ್ಕು ನಲುಗಲಿದ್ದಾರೆ, ಲೈಂಗಿಕ ಜೀತದಾಳುಗಳಂತೆ ಅವರನ್ನು ನಡೆಸಿಕೊಳ್ಳಲಾಗುತ್ತದೆ

Published on: Aug 18, 2021 04:38 PM