IND vs ENG: ಸಿರಾಜ್ ಶಿಳ್ಳೆ, ಬೆನ್ತಟ್ಟಿದ ಕೋಚ್.. ಅದ್ಭುತ ಇನ್ನಿಂಗ್ಸ್ ಆಡಿದ ಶಮಿ- ಬುಮ್ರಾಗೆ ಸಿಕ್ಕಿದ್ದು ಅದೆಂಥಾ ಗೌರವ! ವಿಡಿಯೋ

IND vs ENG: ಊಟದ ಹೊತ್ತಿಗೆ ಭಾರತ ಎಂಟು ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತ್ತು. ಶಮಿ ತಮ್ಮ ಐವತ್ತನ್ನು ಪೂರೈಸಿದ್ದರು. ಊಟದ ವಿರಾಮಕ್ಕೆ ಇಬ್ಬರೂ ಡ್ರೆಸ್ಸಿಂಗ್ ಕೋಣೆಗೆ ಹೋದ ತಕ್ಷಣ, ಇಬ್ಬರಿಗೂ ಭವ್ಯವಾದ ಸ್ವಾಗತವನ್ನು ನೀಡಲಾಯಿತು.

IND vs ENG: ಸಿರಾಜ್ ಶಿಳ್ಳೆ, ಬೆನ್ತಟ್ಟಿದ ಕೋಚ್.. ಅದ್ಭುತ ಇನ್ನಿಂಗ್ಸ್ ಆಡಿದ ಶಮಿ- ಬುಮ್ರಾಗೆ ಸಿಕ್ಕಿದ್ದು ಅದೆಂಥಾ ಗೌರವ! ವಿಡಿಯೋ
ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ
Follow us
TV9 Web
| Updated By: ಪೃಥ್ವಿಶಂಕರ

Updated on: Aug 16, 2021 | 8:20 PM

ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇಂತಹ ಅದ್ಭುತ ಪ್ರದರ್ಶನಕ್ಕೆ ಗೌರವ ನೀಡಲು ಇಢಿ ತಂಡವು ಅವರನ್ನು ಸ್ವಾಗತಿಸಲು ಡ್ರೆಸ್ಸಿಂಗ್ ರೂಂನಲ್ಲಿ ನಿಂತಿತು. ಇಂದು ಅಂದರೆ ಸೋಮವಾರ ಪಂದ್ಯದ ಕೊನೆಯ ದಿನ. ಭಾರತವು ದಿನದಾಟ ಆರಂಭಿಸಿದ್ದು ಆರು ವಿಕೆಟ್ ನಷ್ಟಕ್ಕೆ 181 ರನ್​ನಿಂದ. ಭಾರತ 154 ರನ್​ಗಳ ಮುನ್ನಡೆ ಹೊಂದಿತ್ತು. ರಿಷಭ್ ಪಂತ್ ಮೈದಾನಕ್ಕೆ ಇಳಿದರು ಆದರೆ ಕೇವಲ ಆರು ರನ್ ಸೇರಿಸಿದ ನಂತರ ಔಟಾದರು. ಅವರೊಂದಿಗೆ ಬಂದ ಇಶಾಂತ್ ಶರ್ಮಾ ಕೂಡ ಒಟ್ಟು 209 ರನ್ ಗಳಿಸಿ ಔಟಾದರು. ಇದರ ನಂತರ ಭಾರತವು ಆಲೌಟ್ ಆಗುವ ಅಪಾಯವಿತ್ತು ಆದರೆ ನಂತರ ಶಮಿ ಮತ್ತು ಬುಮ್ರಾ ತಮ್ಮ ಅದ್ಭುತ ಆಟವನ್ನು ತೋರಿಸಿದರು. ಈ ಬಾರಿ ಚೆಂಡಿನಿಂದಲ್ಲ ಆದರೆ ಬ್ಯಾಟಿನಿಂದ.

ಭಾರತ ಇಂಗ್ಲೆಂಡ್ ಮೇಲೆ ದೊಡ್ಡ ಮುನ್ನಡೆ ಸಾಧಿಸಬೇಕಾಗಿತ್ತು. ಆದರೆ ಪಂತ್ ನಿರ್ಗಮನದ ನಂತರ ಇದು ಸಂಭವಿಸಿದಂತೆ ಕಾಣಲಿಲ್ಲ. ಶಮಿ ಮತ್ತು ಬುಮ್ರಾ ಮತ್ತೊಮ್ಮೆ ಮುನ್ನಡೆ ಸಾಧಿಸಿದರು ಮತ್ತು ಯಾರೂ ನಿರೀಕ್ಷಿಸದ ಕೆಲಸವನ್ನು ಮಾಡಿದರು. ಇವರಿಬ್ಬರು ಒಂಬತ್ತನೇ ವಿಕೆಟ್​ಗೆ 89 ರನ್​ಗಳ ಜೊತೆಯಾಟವನ್ನು ಹಂಚಿಕೊಂಡರು, ಇದು ಇಂಗ್ಲೆಂಡ್​ನಲ್ಲಿ ಭಾರತಕ್ಕೆ ಒಂಬತ್ತನೇ ವಿಕೆಟ್​ಗೆ ಇದುವರೆಗಿನ ಗರಿಷ್ಠ ಜೊತೆಯಾಟವಾಗಿದೆ. ಜೇಮ್ಸ್ ಆಂಡರ್ಸನ್ ನಂತಹ ಬೌಲರ್ ಅನ್ನು ಈ ಇಬ್ಬರು ಎದುರಿಸಿದ ರೀತಿ ಎಲ್ಲರನ್ನೂ ಆಕರ್ಷಿಸಿತು. ಈ ಅವಧಿಯಲ್ಲಿ ಶಮಿ ಅರ್ಧ ಶತಕ ಗಳಿಸಿದರು. ಊಟದ ಹೊತ್ತಿಗೆ ಭಾರತ ಎಂಟು ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತ್ತು. ಶಮಿ ತಮ್ಮ ಐವತ್ತನ್ನು ಪೂರೈಸಿದ್ದರು. ಊಟದ ವಿರಾಮಕ್ಕೆ ಇಬ್ಬರೂ ಡ್ರೆಸ್ಸಿಂಗ್ ಕೋಣೆಗೆ ಹೋದ ತಕ್ಷಣ, ಇಬ್ಬರಿಗೂ ಭವ್ಯವಾದ ಸ್ವಾಗತವನ್ನು ನೀಡಲಾಯಿತು.

ಬಿಸಿಸಿಐ ಈ ವಿಡಿಯೋವನ್ನು ಟ್ವೀಟ್ ಮಾಡಿದೆ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಲಾರ್ಡ್ಸ್‌ನಲ್ಲಿ ಊಟಕೆಂದು ಡ್ರೆಸ್ಸಿಂಗ್ ರೂಂ ತಲುಪಿದಾಗ, ಇಡೀ ತಂಡವು ಎದ್ದು ನಿಂತು ಚಪ್ಪಾಳೆಗಳಿಂದ ಸ್ವಾಗತಿಸಲ್ಪಟ್ಟಿತು. ಲಾರ್ಡ್ಸ್‌ ಡ್ರೆಸ್ಸಿಂಗ್ ಕೋಣೆಗೆ ಹೋಗುವ ದಾರಿ ಉದ್ದವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಆಟಗಾರರು ಗೇಟ್‌ಗೆ ಬಂದು ಇಬ್ಬರಿಗೂ ಚಪ್ಪಾಳೆ ತಟ್ಟಲಾರಂಭಿಸಿದರು. ಈ ಸಮಯದಲ್ಲಿ, ಮೊಹಮ್ಮದ್ ಸಿರಾಜ್ ಕೂಡ ಈ ಇಬ್ಬರ ಪ್ರವೇಶ ಕಂಡು ಶಿಳ್ಳೆ ಹೊಡೆದರು. ಕೋಚ್ ರವಿಶಾಸ್ತ್ರಿ ಗೇಟ್ ಪ್ರವೇಶಿಸಿದ ತಕ್ಷಣ ಇಬ್ಬರ ಭುಜ ತಟ್ಟಿದರು.

ಊಟದ ನಂತರ ಇನ್ನಿಂಗ್ಸ್ ಘೋಷಿಸಲಾಗಿದೆ ಊಟದ ನಂತರ, ಶಮಿ ನಾಲ್ಕು ರನ್ ಹೆಚ್ಚಿಸಿದರು ಮತ್ತು ಬುಮ್ರಾ ಕೂಡ ನಾಲ್ಕು ರನ್ ಸೇರಿಸಿದರು. ಶಮಿ ತಮ್ಮ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ 70 ಎಸೆತಗಳನ್ನು ಎದುರಿಸಿದರು ಮತ್ತು ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ ಮತ್ತು ಅಜೇಯ 56 ರನ್ ಗಳಿಸಿದರು. 64 ಎಸೆತಗಳನ್ನು ಎದುರಿಸಿದ ಬುಮ್ರಾ ಔಟಾಗದೆ 34 ರನ್ ಗಳಿಸಿದರು. ಇಂಗ್ಲೆಂಡಿನ ಆಟಗಾರರು ಇಬ್ಬರನ್ನೂ ತೀವ್ರವಾಗಿ ನಿಂದಿಸಿದರು, ಇಬ್ಬರೂ ಅದನ್ನು ಎದುರಿಸಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಇಬ್ಬರ ಒಂಬತ್ತನೇ ವಿಕೆಟ್​ಗೆ ಅತ್ಯುತ್ತಮ ಜೊತೆಯಾಟದ ಆಧಾರದ ಮೇಲೆ, ಇಂಗ್ಲೆಂಡ್ 272 ರನ್​ಗಳ ಗುರಿ ಪಡೆದಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ