ಇಂಗ್ಲೆಂಡ್ ಅಳವಡಿಸಿದ ತಂತ್ರಗಾರಿಕೆ ಆಘಾತಕಾರಿಯಾಗಿದೆ, ಟೆಸ್ಟ್ ಗೆಲ್ಲಲು ಕೇವಲ ಇಂಡಿಯಾಗೆ ಮಾತ್ರ ಚಾನ್ಸಿದೆ: ವಾರ್ನ್

ಇಂಗ್ಲೆಂಡ್ ತಂಡದ ತಂತ್ರಗಾರಿಕೆ ಕುರಿತು ಲೆಜೆಂಡರಿ ಸ್ಪಿನ್ನರ್ ಮತ್ತು ಸ್ಕೈ ಸ್ಪೋರ್ಟ್ಸ್ ಚ್ಯಾನೆಲ್​ನಲ್ಲಿ ಟಿವಿ ವೀಕ್ಷಕ ವಿವರಣೆಕಾರನಾಗಿ ಕೆಲಸ ಮಾಡುತ್ತಿರುವ ಶೇನ್ ವಾರ್ನ್ ಅವರರು ಸೋಜಿಗ ವ್ಯಕ್ತಪಡಿಸಿದ್ದಾರೆ. ರೂಟ್ ಅವರ ತಂತ್ರಗಾರಿಕೆಯನ್ನು ‘ಹಾರಿಬಲ್’ ಎಂದು ಪ್ರತಿಕ್ರಿಯಿಸಿರುವ ವಾರ್ನ್ ಪಂದ್ಯ ಗೆಲ್ಲುವ ಅವಕಾಶ ಭಾರತಕ್ಕಿದೆ ಎಂದಿದ್ದಾರೆ.

ಇಂಗ್ಲೆಂಡ್ ಅಳವಡಿಸಿದ ತಂತ್ರಗಾರಿಕೆ ಆಘಾತಕಾರಿಯಾಗಿದೆ, ಟೆಸ್ಟ್ ಗೆಲ್ಲಲು ಕೇವಲ ಇಂಡಿಯಾಗೆ ಮಾತ್ರ ಚಾನ್ಸಿದೆ: ವಾರ್ನ್
ವೀರೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಮಿ ಮತ್ತು ಬುಮ್ರಾ
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 16, 2021 | 9:56 PM

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನ ಭಾರತ 209 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದಾಗ ಅತಿಥೇಯ ತಂಡದ ಕ್ಯಾಪ್ಟನ್ ಜೋ ರೂಟ್ ಅಳವಡಿಸಿದ ತಂತ್ರಗಾರಿಕೆ ತೀವ್ರ ಖಂಡನೆಗೆ ಗುರಿಯಾಗಿದೆ. ಪ್ರವಾಸಿ ತಂಡದ ಟೇಲ್ಎಂಡರ್​ಗಳಾಗಿರಿವ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಮುರಿಯದ 9 ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ ಮ್ಯಾಚ್ ಸೇವಿಂಗ್ ಮಾತ್ರವಲ್ಲದೆ ಮ್ಯಾಚ್ ವಿನ್ನಿಂಗ್ 89 ರನ್​ಗಳನ್ನು ಸೇರಿಸಿದರು.

ಇಂಗ್ಲೆಂಡ್ ತಂಡದ ತಂತ್ರಗಾರಿಕೆ ಕುರಿತು ಲೆಜೆಂಡರಿ ಸ್ಪಿನ್ನರ್ ಮತ್ತು ಸ್ಕೈ ಸ್ಪೋರ್ಟ್ಸ್ ಚ್ಯಾನೆಲ್​ನಲ್ಲಿ ಟಿವಿ ವೀಕ್ಷಕ ವಿವರಣೆಕಾರನಾಗಿ ಕೆಲಸ ಮಾಡುತ್ತಿರುವ ಶೇನ್ ವಾರ್ನ್ ಅವರರು ಸೋಜಿಗ ವ್ಯಕ್ತಪಡಿಸಿದ್ದಾರೆ. ರೂಟ್ ಅವರ ತಂತ್ರಗಾರಿಕೆಯನ್ನು ‘ಹಾರಿಬಲ್’ ಎಂದು ಪ್ರತಿಕ್ರಿಯಿಸಿರುವ ವಾರ್ನ್ ಪಂದ್ಯ ಗೆಲ್ಲುವ ಅವಕಾಶ ಭಾರತಕ್ಕಿದೆ ಎಂದಿದ್ದಾರೆ.

‘ಇಂಗ್ಲೆಂಡ್ ಅನುಸರಿಸಿದ ತಂತ್ರಗಾರಿಕೆ ಆಘಾತಕಾರಿಯಾಗಿದೆ. ನನಗೆ 5-6 ಫೀಲ್ಡರ್ಗಳು ಬೌಂಡರಿ ಗೆರೆ ಮೇಲೆ ಬೇಡ, ಇವರನ್ನ ಔಟ್ ಮಾಡಲು ಆಕ್ರಮಣಕಾರಿ ಫೀಲ್ಡ್ ಸೆಟ್ಟಿಂಗ್ ಬೇಕು ಅಂತ ಬೌಲರ್ಗಳು ಯಾಕೆ ಹೇಳಲಿಲ್ಲವೋ? ಇಂಗ್ಲೆಂಡ್ ಗೆಲ್ಲುವ ಪ್ರಯತ್ನ ಮಾಡುವುದೇ? ನಿಮಗೆ ನೆನಪಿರಲಿ; ಗೆಲ್ಲಲು 75 ಓವರ್ಗಳಲ್ಲಿ 270 ರನ್ ಟಾರ್ಗೆಟ್ ನ್ಯೂಜಿಲೆಂಡ್ ನೀಡಿದ್ದಾಗ ಇಂಗ್ಲೆಂಡ್ ಚೇಸ್ ಮಾಡುವ ಪ್ರಯತ್ನ ಮಾಡಲೇ ಇಲ್ಲ. ಈ ಪಂದ್ಯವನ್ನು ಇಂಡಿಯ ಗೆಲ್ಲಲಿದೆ ಇಲ್ಲವೇ ಡ್ರಾ ಆಗುತ್ತದೆ,’ ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.

ಆಸ್ಟ್ರೇಲಿಯದ ಮತ್ತೊಬ್ಬ ಮಾಜಿ ಅಟಗಾರ ಟಾಮ್ ಮೂಡಿ ಸಹ ರೂಟ್ ಅವರ ತಂತ್ರಗಾರಿಕೆಯನ್ನು ಟೀಕಿಸಿದ್ದಾರೆ

ಶಮಿ ಮತ್ತು ಬುಮ್ರಾ-ಇವರಿಬ್ಬರ ದಿಟ್ಟತನದ ಬ್ಯಾಟಿಂಗ್ ಪ್ರದರ್ಶನವನ್ನು ಅನೇಕರು ಪ್ರಶಂಸಿದ್ದಾರೆ. ಭಾರತದ ಮಾಜಿ ಆರಂಭ ಆಟಗಾರ ವಾಸಿಮ್ ಜಾಫರ್ ಅವರು ತಮ್ಮ ಟ್ವೀಟ್ನಲ್ಲಿ ಕೆಲ ಮೀಮ್ಗಳನ್ನು ಹಾಕಿ ಶಮಿ ಮತ್ತು ಬುಮ್ರಾಗೆ ಶಹಬ್ಬಾಸ್ಗಿರಿ ನೀಡಿದ್ದಾರೆ.

ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಭಾರತದ ಲೋಯರ್ ಆರ್ಡರ್ ಬ್ಯಾಟ್ಸ್ಮನ್ಗಳು ಸ್ವೀಪ್ ಶಾಟ್ ಆಡಬಲ್ಲರು, ಪುಲ್ ಶಾಟ್ ಬಾರಿಸಬಲ್ಲರು, ಬಾಲನ್ನು ಡ್ರೈವ್ ಮಾಡಬಲ್ಲರು ಮತ್ತು ಲೆಗ್ ಸೈಡ್ನ ಎಸೆತವನ್ನು ಆಫ್ಸೈಡ್ ಕಡೆ ಬಾರಿಸಬಲ್ಲರು ಎಂದು ಹೇಳಿದ್ದಾರೆ.

ಭಾರತದ ಮಾಜಿ ಆರಂಭಿಕ ಮತ್ತು ಸ್ಫೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಅವರು, ‘ಬಹಳ ಖುಷಿ ಪಡಿಸಿದಿರಿ ಶಮಿ ಮತ್ತು ಬುಮ್ರಾ, ನಿಮಗೊಂದು ಸಲಾಂ, ಚಪ್ಪಾಳೆ ತಟ್ಟುವುದು ನಿಲ್ಲಬಾರದು,’ ಎಂದು ಹೇಳಿದ್ದಾರೆ.

ಭಾರತದ ಮಾಜಿ ಸ್ಪಿನ್ನರ್ ಮತ್ತು ಹಾಲಿ ಕಾಮೆಂಟೇಟರ್ ಮುರಳಿ ಕಾರ್ತೀಕ್ ಅವರು, ‘ಇವರಿಬ್ಬರ ಹೋರಾಟ ಬಹಳ ಮೆಚ್ಚಿಗೆಯಾಯಿತು ಮತ್ತು ಮನಸ್ಸಿಗೆ ಮುದ ನೀಡಿತು. ಅದೃಷ್ಟ ಶಮಿ ಮತ್ತು ಬುಮ್ರಾ ಅವರೊಂದಿಗಿದೆ, ಆದರೆ ಹೋರಾಟ ಮುಂದುವರಿಸಬೇಕಿದೆ,’ ಎಂದು ಟ್ವೀಟ್ ಮಾಡಿದ್ದಾರೆ.

ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಅವರು ಟ್ವೀಟ್ನಲ್ಲಿ, ಇಡೀ ತಂಡ ಬುಮ್ರಾ ಮತ್ತು ಶಮಿ ಅವರನ್ನು ಹೃತ್ಪೂರ್ವಕವಾಗಿ ಚಪ್ಪಾಳೆ ತಟ್ಟುತ್ತಾ ಡ್ರೆಸಿಂಗ್ ರೂಮಿಗೆ ಬರಮಾಡಿಕೊಂಡಿದ್ದು ನೋಡಿ ಬಹಳ ಸಂತೋಷವಾಯಿತು. ಕ್ಲಿಷ್ಟಕರ ಸ್ಥಿತಿಯಲ್ಲಿ ಇಂಥ ಜೊತೆಗಾರಿಕೆಗಳು ಇಡೀ ಟೀಮಿನ ಸ್ಥೈರ್ಯವನ್ನು ಹೆಚ್ಚಿಸುತ್ತವೆ ಮತ್ತು ಪ್ರತಿಯೊಬ್ಬ ಆಟಗಾರ ಸ್ಫೂರ್ತಿಗೊಳಗಾಗುತ್ತಾನೆ. ಸದಸ್ಯನೊಬ್ಬನ ಯಶಸನ್ನು ಇಡೀ ತಂಡ ಆನಂದಿಸುತ್ತಿರುವುನ್ನು ನೋಡುವುದು ಬಹಳ ಖುಷಿ ನೀಡುವ ಸಂಗತಿ,’ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಇದನ್ನೂ ಓದಿ: India vs England 2nd Test: ಭಾರತ ತಂಡ ಇಷ್ಟು ರನ್ ಗಳಿಸಿದರೆ ನಮಗೆ ಗೆಲುವು ತುಂಬಾನೆ ಕಷ್ಟ ಎಂದ ಮೊಯೀನ್ ಅಲಿ

ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್