ಅಫ್ಘಾನಿಸ್ತಾನದ ಈಗಿನ ಸ್ಥಿತಿ ರಶೀದ್ ಖಾನ್ ಅವರನ್ನು ಚಿಂತಾಕ್ರಾಂತರನ್ನಾಗಿಸಿದೆ: ಕೆವಿನ್ ಪೀಟರ್ಸನ್

ರವಿವಾರದಂದು ಇಂಗ್ಲೆಂಡ್ ಮಾಜಿ ಆಟಗಾರ ಮತ್ತು ಹಾಲಿ ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಅವರೊಂದಿಗೆ ಮಾತಾಡುವಾಗ ರಶೀದ್ ಖಾನ್ ಅವರು ತಮ್ಮ ಕುಟುಂಬವನ್ನು ಅಫ್ಘಾನಿಸ್ತಾನದಿಂದ ಹೊರತರಲು ಸಾಧ್ಯವಾಗದ ಬಗ್ಗೆ ಹತಾಷೆ ಮತ್ತು ಚಿಂತೆ ಪ್ರಕಟಿಸಿದ್ದಾರೆ.

ಅಫ್ಘಾನಿಸ್ತಾನದ ಈಗಿನ ಸ್ಥಿತಿ ರಶೀದ್ ಖಾನ್ ಅವರನ್ನು ಚಿಂತಾಕ್ರಾಂತರನ್ನಾಗಿಸಿದೆ: ಕೆವಿನ್ ಪೀಟರ್ಸನ್
ರಶೀದ್​ ಖಾನ್
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2021 | 1:27 AM

ಅಫ್ಘಾನಿಸ್ತಾನದಲ್ಲಿ ಈಗ ಜಾರಿಯಲ್ಲಿರುವ ರಾಜಕೀಯ ವಿಪ್ಲವ ಕ್ರೀಡೆಯ ಮೇಲೆಯೂ ತನ್ನ ಕರಾಳ ಛಾಯೆ ಬೀರಿದೆ. ಕ್ರಿಕೆಟ್ ಸಂಬಂಧಿಸಿದಂತೆ ಹೇಳುವುದಾದರೆ ಈಗಷ್ಟೇ ಒಂದು ಉತ್ತಮ ತಂಡವಾಗಿ ರೂಪುಗೊಳ್ಳುತ್ತಿದ್ದ ಅಫ್ಘಾನಿಸ್ತಾನದ ಕ್ರಿಕೆಟ್ ತಂಡ ಸಂಕಷ್ಟಕ್ಕಿಡಾಗಿದೆ. ರಾಷ್ಟ್ರೀಯ ತಂಡದ ಆಟಗಾರರು ತಮ್ಮ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿನ ಸ್ಟಾರ್ ಆಟಗಾರ ರಶೀದ್ ಖಾನ್ ಈಗ ಇಂಗ್ಲೆಂಡ್​ನಲ್ಲಿ ಜಾರಿಯಲ್ಲಿರುವ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.

ರವಿವಾರದಂದು ಇಂಗ್ಲೆಂಡ್ ಮಾಜಿ ಆಟಗಾರ ಮತ್ತು ಹಾಲಿ ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಅವರೊಂದಿಗೆ ಮಾತಾಡುವಾಗ ರಶೀದ್ ಖಾನ್ ಅವರು ತಮ್ಮ ಕುಟುಂಬವನ್ನು ಅಫ್ಘಾನಿಸ್ತಾನದಿಂದ ಹೊರತರಲು ಸಾಧ್ಯವಾಗದ ಬಗ್ಗೆ ಹತಾಷೆ ಮತ್ತು ಚಿಂತೆ ಪ್ರಕಟಿಸಿದ್ದಾರೆ. ವಿದೇಶಗಳಿಂದ ಆಗಮಿಸುವ ಮತ್ತು ಅಫ್ಘಾನಿಸ್ತಾನದಿಂದ ಹೊರಡುವ ವಿಮಾನಗಳ ಮೇಲೆ ಅಲ್ಲಿನ ರಾಜಕೀಯ ಸ್ಥಿತಿ ದೊಡ್ಡ ಪರಿಣಾಮವನ್ನು ಬೀರಿದೆ. ಕಾಬೂಲ್ನ ಹಮೀದ್ ಕರ್ಜಾಯೀ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನ ಕುರಿಗಳಂತೆ ನೆರೆದಿದ್ದಾರೆ. ‘ಅಫ್ಘಾನಿಸ್ತಾನದಲ್ಲಿ ಏನೆಲ್ಲ ಸಂಭವಿಸುತ್ತಿದೆ. ನಾನು ಮತ್ತು ರಷೀದ್ ಬೌಂಡರಿ ಲೈನ್ ಬಳಿ ನಿಂತಕೊಂಡು ಈ ಬಗ್ಗೆ ಚರ್ಚಿಸಿದೆವು. ಅವರು ಬಹಳ ಚಿಂತಾಕ್ರಾಂತರಾಗಿದ್ದಾರೆ. ಅಲ್ಲಿನ ಅರಾಜಕ ಸ್ಥಿತಿಯಿಂದಾಗಿ ಅವರು ತಮ್ಮ ಫ್ಯಾಮಿಲಿಯನ್ನು ಈಚೆ ತರಲು ಸಾಧ್ಯವಾಗುತ್ತಿಲ್ಲ,’ ಎಂದು ಸ್ಕೈ ಸ್ಪೋರ್ಟ್ಸ್ ಚ್ಯಾನೆಲ್​ಗೆ ವೀಕ್ಷಕ ವಿವರಣೆ ನೀಡುವಾಗ ಪೀಟರ್ಸನ್ ಹೇಳಿದರು.

‘ಅವರ (ರಶೀದ್ ಖಾನ್) ಮೇಲಿರುವ ಅಗಾಧ ಒತ್ತಡದ ಹಿನ್ನೆಲೆಯಲ್ಲಿ, ತನ್ನ ತಂಡದ ಪರ ಕಾಣಿಸಿಕೊಂಡು ಎಂದಿನ ಹಾಗೆ ಪ್ರದರ್ಶನ ನೀಡುವುದು ಅವರಿಗೆ ಬಹಳ ಕಷ್ಟವಾಗಲಿದೆ. ಅವರ ಟೆಸ್ಟಿಂಗ್ ಟೈಮ್ ಇದು. ಇದೆಲ್ಲದರ ಹೊರತಾಗಿಯೂ ಅವರು ಅಂದರೆ ತಾನಿರುವ ಒತ್ತಡವನ್ನು ಮರೆತು ಎಂದಿನಂತೆ ತಮ್ಮ ಚಾಂಪಿಯನ್ ಪ್ರದರ್ಶನ ನೀಡಿದರೆ, ಅದು ಹಂಡ್ರೆಡ್ ಟೂರ್ನಿಯ ಅತ್ಯಂತ ಹೃದಯ ಸ್ಪರ್ಶಿ ಕತೆಯಾಗಲಿದೆ ಎಂದು ನಾನು ಭಾವಿಸುತ್ತೇನೆ,’ ಎಂದು ಪೀಟರ್ಸನ್ ಹೇಳಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಪ್ರವೇಶಿಸಿರುವ ತಾಲಿಬಾನಿಗಳು ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನಗೈದ ನಂತರ ಆಧ್ಯಕ್ಷೀಯ ಅರಮನೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:  IPL 2021: ತಾಲಿಬಾನ್ ಹಿಡಿತದಲ್ಲಿ ಅಫ್ಘಾನಿಸ್ತಾನ್: ಐಪಿಎಲ್​ನಲ್ಲಿ ಭಾಗವಹಿಸಲಿದ್ದಾರಾ ಮೂವರು ಅಫ್ಘಾನ್ ಆಟಗಾರರು?