AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಶಮಿ ಅರ್ಧಶತಕ, 77 ರನ್ ಜೊತೆಯಾಟ! ಮುಳುಗುತ್ತಿದ್ದ ಭಾರತಕ್ಕೆ ಆಸರೆಯಾದ ಬುಮ್ರಾ- ಶಮಿ

IND vs ENG: ಇದು ಟೆಸ್ಟ್ ಕ್ರಿಕೆಟ್​ನಲ್ಲಿ ಶಮಿಗೆ ಎರಡನೇ ಅರ್ಧ ಶತಕವಾಗಿದೆ. ಅವರು 57 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಐದು ಬೌಂಡರಿಗಳೊಂದಿಗೆ 50 ರನ್ ಪೂರೈಸಿದರು.

IND vs ENG: ಶಮಿ ಅರ್ಧಶತಕ, 77 ರನ್ ಜೊತೆಯಾಟ! ಮುಳುಗುತ್ತಿದ್ದ ಭಾರತಕ್ಕೆ ಆಸರೆಯಾದ ಬುಮ್ರಾ- ಶಮಿ
ಶಮಿ ಅರ್ಧಶತಕ
TV9 Web
| Updated By: ಪೃಥ್ವಿಶಂಕರ|

Updated on:Aug 16, 2021 | 5:57 PM

Share

ಲಾರ್ಡ್ಸ್​ನಲ್ಲಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ರೋಮಾಂಚಕವಾಗುವ ಸಾಧ್ಯತೆಯಿದೆ. ಪಂದ್ಯ ರಸವತ್ತಾಗಿ ನಡೆಯುತ್ತಿದೆ. ಮಂದ ಬೆಳಕಿನಿಂದಾಗಿ ಆಟವು ನಾಲ್ಕನೇ ದಿನದಂದು ಕೊಂಚ ಬೇಗನೆ ಕೊನೆಗೊಂಡಿತು. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 364 ರನ್ ಗಳಿಸಿದರೆ ಇಂಗ್ಲೆಂಡ್ 391 ರನ್ ಗಳಿಸಿದೆ. ಕೊಹ್ಲಿಸೇನಾ ಪ್ರಸ್ತುತ ಎರಡನೇ ಇನ್ನಿಂಗ್ಸ್ ಆಡುತ್ತಿದ್ದಾರೆ. ನಾಲ್ಕನೇ ದಿನದ ಅಂತ್ಯದ ವೇಳೆಗೆ ತಂಡವು 6 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತ್ತು. ಐದನೇ ದಿನದಾಟ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಭರವಸೆಯ ಆಟಗಾರ ಪಂತ್ ಬೇಗನೆ ಪೆವಿಲಿಯನ್ ಸೇರಿಕೊಂಡರು. ಇಶಾಂತ್​ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ನಂತರ ಶುರುವಾಗಿದ್ದೆ ಶಮಿ- ಬುಮ್ರಾ ಜುಗಲ್​ಬಂದಿ

ಶಮಿ- ಬುಮ್ರಾ ಅರ್ಧಶತಕದ ಜೊತೆಯಾಟ ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಬಯಸದೆ ಬಂದ ಭಾಗ್ಯದಂತೆ ಶಮಿ ಮತ್ತು ಬುಮ್ರಾ ಆಸರೆಯಾಗಿದ್ದಾರೆ. ಈ ಇಬ್ಬರು ಜೊತೆಗೂಡಿ 77 ರನ್​ಗಳ ಜೊತೆಯಾಟ ಆಡಿದ್ದಾರೆ. ಅಲ್ಲದೆ ಮೊಯೀನ್ ಅಲಿ ಓವರ್​ನ ಎರಡನೇ ಎಸೆತದಲ್ಲಿ ಜೋ ರೂಟ್ ಬುಮ್ರಾ ಕ್ಯಾಚ್ ಕೈಬಿಟ್ಟರು. ಇದು ಕೂಡ ಭಾರತಕ್ಕೆ ನೆರವಾಯಿತು. ಜಸ್‌ಪ್ರೀತ್ ಬುಮ್ರಾ ಅದೇ ಓವರ್‌ನ ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು ಮತ್ತು ಇದರೊಂದಿಗೆ ಬುಮ್ರಾ ಮತ್ತು ಶಮಿ ಅರ್ಧಶತಕದ ಜೊತೆಯಾಟವು ಪೂರ್ಣಗೊಂಡಿತು.

ಶಮಿ ಎರಡನೇ ಅರ್ಧ ಶತಕ ಮೊಹೀನ್ ಅಲಿ ಅವರ ಓವರ್‌ನಲ್ಲಿ ಮೊಹಮ್ಮದ್ ಶಮಿ ಅರ್ಧಶತಕ ಪೂರೈಸಿದರು. ಓವರ್ ನ ಮೂರನೇ ಎಸೆತದಲ್ಲಿ ಶಮಿ ಎರಡನೇ ಎಸೆತದಲ್ಲಿ ಮಿಡ್ ವಿಕೆಟ್ ನಲ್ಲಿ ಒಂದು ಬೌಂಡರಿ ಬಾರಿಸಿದರು. ಅದೇ ಸಮಯದಲ್ಲಿ, ಅವರು ತಮ್ಮ ಮುಂದಿನ ಬಾಲ್‌ನಲ್ಲಿ 92 ಮೀಟರ್ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್​ನಲ್ಲಿ ಶಮಿಗೆ ಎರಡನೇ ಅರ್ಧ ಶತಕವಾಗಿದೆ. ಅವರು 57 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಐದು ಬೌಂಡರಿಗಳೊಂದಿಗೆ 50 ರನ್ ಪೂರೈಸಿದರು.

ಕೊನೆಯ 65 ಓವರ್ ಬಾಕಿ? ದಿನದಾಟದಂತ್ಯಕ್ಕೆ ಇನ್ನೂ 65 ಓವರ್ ಬಾಕಿ ಇದೆ. ಐಸಿಸಿ ನಿಯಮದಂತೆ ಒಂದು ದಿನಕ್ಕೆ 90 ಓವರ್​ಗಳ ಆಟ ಮುಗಿಯಬೇಕು. ಹೀಗಾಗಿ ಇಂದು ಭಾರತ ಈಗಾಗಲೇ 25 ಓವರ್​ಗಳ ಆಟವನ್ನು ಪೂರ್ಣಗೊಳಿಸಿದೆ. ಊಟದ ವಿರಾಮದ ನಂತರ ಭಾರತ ಎಷ್ಟು ಓವರ್​ಗಳನ್ನು ಆಡುತ್ತದೆ ಎಂಬುದರ ಮೇಲೆ ಇಂಗ್ಲೆಂಡ್​ಗೆ ಎಷ್ಟು ಓವರ್​ಗಳು ಸಿಗುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ.

Published On - 5:50 pm, Mon, 16 August 21

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?