AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

On This Day: 123 ವರ್ಷಗಳಲ್ಲಿ ಮೊದಲ ಬಾರಿಗೆ ವಿಶಿಷ್ಟ ರೀತಿಯಲ್ಲಿ ಕ್ರಿಕೆಟ್ ಆಡಲಾಯಿತು..!

Cricket News: 296 ರನ್​ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾಗೆ ಗ್ಯಾರಿ ಕಸ್ಟರ್ನ್ (43) ಉತ್ತಮ ಆರಂಭ ಒದಗಿಸಿದರು. ಆದರೆ ಹಾರ್ವೆ, ಶೇನ್ ಲೀ ಹಾಗೂ ಶೇನ್ ವಾರ್ನ್ ದಾಳಿ ಮುಂದೆ ರನ್​ಗಳಿಸಲು ದಕ್ಷಿಣ ಆಫ್ರಿಕಾ ಉಳಿದ ಬ್ಯಾಟ್ಸ್​ಮನ್​ಗಳು ಪರದಾಡಿದರು.

On This Day: 123 ವರ್ಷಗಳಲ್ಲಿ ಮೊದಲ ಬಾರಿಗೆ ವಿಶಿಷ್ಟ ರೀತಿಯಲ್ಲಿ ಕ್ರಿಕೆಟ್ ಆಡಲಾಯಿತು..!
ಮೆಲ್ಬೋರ್ನ್ ಸ್ಟೇಡಿಯಂ
TV9 Web
| Edited By: |

Updated on: Aug 16, 2021 | 4:57 PM

Share

ಕ್ರಿಕೆಟ್ (Cricket) ಪಂದ್ಯದ ವೇಳೆ ಮಳೆ ಭೀತಿ ಎದುರಾಗುವುದನ್ನು ತಪ್ಪಿಸಲು 21 ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾ (Australia) ಕ್ರಿಕೆಟ್ ಬೋರ್ಡ್ ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿತ್ತು. ಅದರಂತೆ 2000 ರಲ್ಲಿ ಚೊಚ್ಚಲ ಬಾರಿ ಒಳಾಂಗಣ ಮೈದಾನದಲ್ಲಿ ಕ್ರಿಕೆಟ್ ಆಡಿಸುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಯಶಸ್ವಿಯಾಗಿತ್ತು. ಇಂತಹದೊಂದು ಪ್ರಯೋಗಕ್ಕೆ ಇದೀಗ 21 ವರ್ಷಗಳಾಗಿವೆ. ಇದಾಗ್ಯೂ ಬೇರೆ ಯಾವುದೇ ದೇಶ ಒಳಾಂಗಣ ಕ್ರಿಕೆಟ್ ಸ್ಟೇಡಿಯಂ ಹೊಂದಿಲ್ಲ ಎಂಬುದು ಇಲ್ಲಿ ವಿಶೇಷ. ಆಗಸ್ಟ್ 16, 2000 ರಂದು ಮೆಲ್ಬೋರ್ನ್​ನ ಡಾಕ್​ಲ್ಯಾಂಡ್ಸ್ ಒಳಾಂಗಣ​ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿತ್ತು. ಅದು ಕೂಡ ಕ್ರಿಕೆಟ್ ಶುರುವಾಗಿ 123 ವರ್ಷಗಳ ಬಳಿಕ ಎಂಬುದು ಮತ್ತೊಂದು ವಿಶೇಷ.

ಹೌದು, 1877 ರಲ್ಲಿ ಟೆಸ್ಟ್ ಕ್ರಿಕೆಟ್ ಶುರುವಾಗಿತ್ತು. ಕ್ರಿಕೆಟ್ ಆಟ ಶುರುವಾಗಿ ಶತಮಾನಗಳೇ ಕಳೆದರೂ ಒಳಾಂಗಣ ಕ್ರೀಡಾಂಗಣದ ಬಗ್ಗೆ ಯಾರೋ ಕೂಡ ಯೋಚಿಸಿರಲಿಲ್ಲ. ಹಲವು ಪಂದ್ಯಗಳು ಮಳೆಗೆ ಆಹುತಿಯಾದರೂ, ಸಂಪೂರ್ಣ ಮುಚ್ಚಿದ ಸ್ಡೇಡಿಯಂ ಪರಿಕಲ್ಪನೆ ಕೂಡ ಯಾರಲ್ಲೂ ಇರಲಿಲ್ಲ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಮೆಲ್ಬೋರ್ನ್​ನಲ್ಲಿ ಅಂತಹದೊಂದು ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಿತ್ತು. 38 ಮೀಟರ್​ ಎತ್ತರದಲ್ಲಿ ಸ್ಟೇಡಿಯಂಗೆ ಮೇಲ್ಛಾವಣಿ ನಿರ್ಮಿಸಲಾಯಿತು. ಇದರಿಂದ ಮಳೆ ಬಂದರೂ ಪಂದ್ಯಕ್ಕೆ ಆಡಚಣೆಯಾಗುವುದು ತಪ್ಪಿತು.

ಅದರಂತೆ 123 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿ ಮೇಲ್ಛಾವಣಿ ಹೊಂದಿರುವ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಲಾಯಿತು. ಕ್ರೀಡಾಂಗಣದಲ್ಲಿ 48,000 ಜನರು ಕುಳಿತುಕೊಳ್ಳುವ ಸಾಮರ್ಥ್ಯವಿದ್ದರೂ, ಚಳಿಗಾಲದ ಕಾರಣ ಅಂದು ಕೇವಲ 25,785 ಜನರು ಮಾತ್ರ ಪಂದ್ಯ ವೀಕ್ಷಿಸಲು ಬಂದಿದ್ದರು.

ಈ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಆ್ಯಡಂ ಗಿಲ್​ಕ್ರಿಸ್ಟ್ (1) ಹಾಗೂ ಮಾರ್ಕ್​ ವಾ (17) ಬೇಗನೆ ವಿಕೆಟ್ ಒಪ್ಪಿಸಿ ಹೊರನಡೆದರು. ಅಲ್ಲದೆ 37 ರನ್​ ಆಗುವಷ್ಟರಲ್ಲಿ ಆಸ್ಟ್ರೇಲಿಯಾದ 3 ವಿಕೆಟ್ ಪತನಗೊಂಡಿತು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಸ್ಟೀವ್ ವಾ ಹಾಗೂ ಮೈಕಲ್ ಬೆವನ್ ನಾಲ್ಕನೇ ವಿಕೆಟ್​ಗೆ 222 ರನ್​ಗಳ ಜೊತೆಯಾಟವಾಡಿದರು. ಅಲ್ಲದೆ ಸ್ಟೀವ್ ವಾ 91 ಎಸೆತಗಳಲ್ಲಿ ಶತಕ ಪೂರೈಸಿದರು. ಮತ್ತೊಂದೆಡೆ 120 ಎಸೆತಗಳಲ್ಲಿ ಬೆವನ್ ಕೂಡ ಸೆಂಚುರಿ ಬಾರಿಸಿದರು. ಪರಿಣಾಮ ನಿಗದಿತ 50 ಓವರ್​ಗಳಲ್ಲಿ ಆಸ್ಟ್ರೇಲಿಯಾ ಮೊತ್ತ 295ಕ್ಕೆ ಬಂದು ನಿಂತಿತು.

296 ರನ್​ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾಗೆ ಗ್ಯಾರಿ ಕಸ್ಟರ್ನ್ (43) ಉತ್ತಮ ಆರಂಭ ಒದಗಿಸಿದರು. ಆದರೆ ಹಾರ್ವೆ, ಶೇನ್ ಲೀ ಹಾಗೂ ಶೇನ್ ವಾರ್ನ್ ದಾಳಿ ಮುಂದೆ ರನ್​ಗಳಿಸಲು ದಕ್ಷಿಣ ಆಫ್ರಿಕಾ ಉಳಿದ ಬ್ಯಾಟ್ಸ್​ಮನ್​ಗಳು ಪರದಾಡಿದರು. ಪರಿಣಾಮ 50 ಓವರ್​ನಲ್ಲಿ 7 ವಿಕೆಟ್ ನಷ್ಟದೊಂದಿಗೆ 201 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಐತಿಹಾಸಿಕ ಒಳಾಂಗಣದ ಕ್ರಿಕೆಟ್​ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ 94 ರನ್​ಗಳ ಭರ್ಜರಿ ಜಯ ಸಾಧಿಸಿತು. ಇನ್ನು ಸ್ವಾರಸ್ಯಕರ ಸಂಗತಿಯೆಂದರೆ ಈ ಪಂದ್ಯದಲ್ಲಿ ಸ್ಟೀವ್ ವಾ ಬ್ಯಾಟ್‌ನಿಂದ ಮೂಡಿಬಂದ ಶತಕವು ಏಕದಿನ ಕ್ರಿಕೆಟ್ ಇತಿಹಾಸ 500ನೇ ಶತಕವಾಗಿತ್ತು. ಅಲ್ಲದೆ ಈ ಪಂದ್ಯದಲ್ಲಿ 114 ರನ್ ಬಾರಿಸಿದ ವಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ

ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್​ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ