- Kannada News Photo gallery Cricket photos India vs England 2nd Test: Virat Kohli’s Nagin Dance at Lord’s Balcony
India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್
India vs England 2nd Test: 2002 ರಲ್ಲಿ ಇಂಗ್ಲೆಂಡ್ನ್ನು ಬಗ್ಗು ಬಡಿದು ಗಂಗೂಲಿ ಇದೇ ಬಾಲ್ಕನಿಯಲ್ಲಿ ನಿಂತು ತಮ್ಮ ಜೆರ್ಸಿಯನ್ನು ಕಳಚಿ ಸಂಭ್ರಮಿಸಿದ್ದರು.
Updated on:Aug 15, 2021 | 2:47 PM

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದ ಬಾಲ್ಕನಿ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತ. ಇದಕ್ಕೆ ಒಂದು ಕಾರಣ ದಾದಾ ಸೌರವ್ ಗಂಗೂಲಿ.

2002 ರಲ್ಲಿ ಇಂಗ್ಲೆಂಡ್ನ್ನು ಬಗ್ಗು ಬಡಿದು ಗಂಗೂಲಿ ಇದೇ ಬಾಲ್ಕನಿಯಲ್ಲಿ ನಿಂತು ತಮ್ಮ ಜೆರ್ಸಿಯನ್ನು ಕಳಚಿ ಸಂಭ್ರಮಿಸಿದ್ದರು. ಈ ಫೋಟೋ ಇಂದಿಗೂ ಎಂದಿಗೂ ದಾದಾ ಅಭಿಮಾನಿಗಳ ಫೇವರೇಟ್ ಫೋಟೋ ಆಗಿದೆ.

ಇದೀಗ ಇದೇ ಬಾಲ್ಕನಿಯಲ್ಲಿ ನಿಂತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಫೋಟೋವೊಂದು ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಮುಖ್ಯ ಕಾರಣ ಕೊಹ್ಲಿ ಕೂಡ ಸಂಭ್ರಮಿಸುತ್ತಿರುವುದು.

ಅರೆರೇ..ಇನ್ನು ಕೂಡ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯ ಮುಗಿದಿಲ್ಲ ಮತ್ತೇನು ಸೆಲೆಬ್ರೇಷನ್ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡುತ್ತೆ. ಆದರೆ ಈ ಸಂಭ್ರಮ ಹಾಗೆ ಸುಮ್ಮನೆ.

ಹೌದು, ಲಾರ್ಡ್ಸ್ನ ಐತಿಹಾಸಿಕ ಬಾಲ್ಕನಿಯಲ್ಲಿ ನಿಂತು ವಿರಾಟ್ ಕೊಹ್ಲಿ ನಾಗಿಣಿ ನೃತ್ಯ ಮಾಡುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಚಿತ್ರದಲ್ಲಿ ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ಇದ್ದು, ಕ್ಯಾಪ್ಟನ್ ಕೊಹ್ಲಿಯ ನೃತ್ಯವನ್ನು ಆನಂದಿಸುತ್ತಿದ್ದಾರೆ.

ಕೊಹ್ಲಿಯ ನಾಗಿಣಿ ನೃತ್ಯದ ಫೋಟೋ ವೈರಲ್ ಆಗುತ್ತಿದ್ದಂತೆ ಇದೀಗ ಟೀಮ್ ಇಂಡಿಯಾ 2ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಬಾಲ್ಕನಿಯಲ್ಲಿ ನಿಂತು ಸಂಭ್ರಮಿಸಲಿದೆಯಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ದಾದಾ ಸ್ಟೈಲ್ ಸೆಲೆಬ್ರೇಷನ್ ಬಳಿಕ ಇದೀಗ ಕೊಹ್ಲಿ ಡ್ಯಾನ್ಸ್ ಮೂಲಕ ಲಾರ್ಡ್ಸ್ ಬಾಲ್ಕನಿ ಫೋಟೋ ಮತ್ತೆ ಸೆನ್ಸೇಷನ್ ಸೃಷ್ಟಿಸಿದೆ.
Published On - 2:44 pm, Sun, 15 August 21



















