IND vs ENG: ಇಂಗ್ಲೆಂಡ್ ಗೆಲುವಿಗೆ 273 ರನ್ಗಳ ಗುರಿ ನೀಡಿದ ಭಾರತ; ಬುಮ್ರಾ- ಶಮಿ ಆಟಕ್ಕೆ ಸುಸ್ತಾದ ಆಂಗ್ಲರು!
IND vs ENG: ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಒಂಬತ್ತನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟ ನೀಡಿದರು. ಈ ಸಮಯದಲ್ಲಿ, ಈ ಇಬ್ಬರ ಹೊರತಾಗಿ, ಇಶಾಂತ್ ಶರ್ಮಾ ಕೂಡ ಎರಡು ಅಂಕಿಗಳನ್ನು ದಾಟಿದರು.
ಲಾರ್ಡ್ಸ್ ಟೆಸ್ಟ್ನಲ್ಲಿ ಭಾರತ ಇಂಗ್ಲೆಂಡ್ ಗೆಲುವಿಗೆ 273 ರನ್ ಗಳ ಗುರಿಯನ್ನು ನೀಡಿದೆ. ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ಅನ್ನು ಎಂಟು ವಿಕೆಟ್ಗೆ 298 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಎರಡನೇ ಟೆಸ್ಟ್ನ ಕೊನೆಯ ದಿನದಂದು ಭಾರತದ ಬಾಲಂಗೋಚಿ ಬ್ಯಾಟ್ಸ್ಮನ್ಗಳು ಅದ್ಭುತ ಬ್ಯಾಟಿಂಗ್ ಮಾಡಿ ತಂಡಕ್ಕೆ ಮಹತ್ವದ ರನ್ ಸೇರಿಸಿದರು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಒಂಬತ್ತನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟ ನೀಡಿದರು. ಈ ಸಮಯದಲ್ಲಿ, ಈ ಇಬ್ಬರ ಹೊರತಾಗಿ, ಇಶಾಂತ್ ಶರ್ಮಾ ಕೂಡ ಎರಡು ಅಂಕಿಗಳನ್ನು ದಾಟಿದರು. ಭಾರತದ ಕೊನೆಯ ಬ್ಯಾಟ್ಸ್‌ಮನ್‌ಗಳನ್ನು ಹೊರಹಾಕಲು ಇಂಗ್ಲೆಂಡ್ ಎಲ್ಲಾ ರೀತಿಯ ತಂತ್ರಗಳನ್ನು ಅಳವಡಿಸಿಕೊಂಡಿತು ಆದರೆ ಯಶಸ್ವಿಯಾಗಲಿಲ್ಲ.
ಈ ಸಮಯದಲ್ಲಿ, ಬುಮ್ರಾ ಮತ್ತು ಶಮಿ ಕೂಡ ಇಂಗ್ಲೀಷ್ ಆಟಗಾರರೊಂದಿಗೆ ಜಗಳವಾಡಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ ಅತ್ಯಧಿಕ ಮೂರು ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಗರಿಷ್ಠ 61 ರನ್ ಗಳಿಸಿದರು ಮತ್ತು ಚೇತೇಶ್ವರ ಪೂಜಾರ 45 ರನ್ ಗಳಿಸಿದರು. ಕೊನೆಯ ದಿನದ ಆಟದಲ್ಲಿ ರಿಷಬ್ ಪಂತ್ 21 ರನ್ ಗಳಿಸಿ ಔಟಾದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ಆರು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು. ಎರಡೂ ತಂಡಗಳು ಪ್ರಸ್ತುತ ಸರಣಿಯಲ್ಲಿ 0-0 ಸಮಬಲದಲ್ಲಿವೆ. ನಾಟಿಂಗ್ ಹ್ಯಾಮ್ನಲ್ಲಿ ಇಬ್ಬರ ನಡುವೆ ಆಡಿದ ಮೊದಲ ಟೆಸ್ಟ್ ಡ್ರಾ ಆಗಿತ್ತು.
ಐದನೇ ದಿನ, ಭಾರತದ ಮೊದಲ ವಿಕೆಟ್ ರಿಷಭ್ ಪಂತ್ ರೂಪದಲ್ಲಿ ಬಿದ್ದಿತು. ಅವರು ಓಲಿ ರಾಬಿನ್ಸನ್ಗೆ ಬಲಿಯಾದರು. ಔಟಾಗುವ ಮುನ್ನ ಪಂತ್ ಈ ಬೌಲರ್ ಮೇಲೆ ಹಾರ್ಡ್ ಶಾಟ್ ಹೊಡೆದಿದ್ದರು. ಇದರ ನಂತರ ಇಶಾಂತ್ ಶರ್ಮಾ ಉತ್ತಮ ಕೊಡುಗೆ ನೀಡಿ 16 ರನ್ ಗಳಿಸಿದರು. ಇದರೊಂದಿಗೆ ಭಾರತ ತನ್ನ ಮುನ್ನಡೆಯನ್ನು 200 ರನ್ಗಳಿಗೆ ಏರಿಸಿತು. ಇಶಾಂತ್ ಕೂಡ ರಾಬಿನ್ಸನ್ಗೆ ಬಲಿಯಾದರು.
ಕೊನೆಯ 60 ಓವರ್ ಬಾಕಿ ಭಾರತ ನೀಡಿರುವ 273 ರನ್ಗಳ ಬೆನ್ನಟ್ಟಲು ಇಂಗ್ಲೆಂಡ್ ತಂಡಕ್ಕೆ ಈ ದಿನದಂದು 60 ಓವರ್ಗಳು ಬಾಕಿ ಇವೆ. ಇದರರ್ಥ ಆಂಗ್ಲ ತಂಡ ಪ್ರತಿ ಓವರ್ಗೆ 4 ರಿಂದ 5 ರನ್ ಗಳಿಸಬೇಕು. ಹೀಗೆ ರನ್ಗಳಿಸಿದರೆ ಮಾತ್ರ ಇಂಗ್ಲೆಂಡ್ ಈ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಆಂಗ್ಲರು ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಲ್ಲು ಪ್ರಯತ್ನಿಸಬಹುದು. ಇದಕ್ಕೂ ಮೀಗಿಲಾಗಿ ಭಾರತದ ವೇಗಿಗಳು ಇಂಗ್ಲೆಂಡ್ ತಂಡವನ್ನು ಬೇಗ ಆಲ್ಔಟ್ ಮಾಡುವಲ್ಲಿ ಯಶಸ್ವಿಯಾದರೆ ಟೀಂ ಇಂಡಿಯಾಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ.
Published On - 6:28 pm, Mon, 16 August 21