AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಕೊಡಲಿಯಿಂದ ತಮ್ಮ ಕಾಲನ್ನು ತಾವೇ ಕತ್ತರಿಸಿಕೊಳ್ಳುತ್ತಿದ್ದಾರೆ! ರೋಹಿತ್ ಮೇಲೆ ಕೋಪಗೊಂಡ ವಿವಿಎಸ್ ಲಕ್ಷ್ಮಣ್

Rohit Sharma: ರೋಹಿತ್ ಜೊತೆಗಾರ ರಾಹುಲ್ ಔಟಾದಾಗ ರೋಹಿತ್ ಎಚ್ಚರಿಕೆಯಿಂದ ಆಡಬೇಕಿತ್ತು ಎಂದು ಲಕ್ಷ್ಮಣ್ ಹೇಳಿದ್ದಾರೆ. ರಾಹುಲ್ ಔಟಾದ ನಂತರ, ರೋಹಿತ್ ಅಲ್ಲಿ ಬ್ಯಾಟಿಂಗ್ ಮುಂದುವರಿಸುವುದು ಬಹಳ ಮುಖ್ಯ.

IND vs ENG: ಕೊಡಲಿಯಿಂದ ತಮ್ಮ ಕಾಲನ್ನು ತಾವೇ ಕತ್ತರಿಸಿಕೊಳ್ಳುತ್ತಿದ್ದಾರೆ! ರೋಹಿತ್ ಮೇಲೆ ಕೋಪಗೊಂಡ ವಿವಿಎಸ್ ಲಕ್ಷ್ಮಣ್
ರೋಹಿತ್ ಮೇಲೆ ಕೋಪಗೊಂಡ ವಿವಿಎಸ್ ಲಕ್ಷ್ಮಣ್
TV9 Web
| Edited By: |

Updated on: Aug 16, 2021 | 4:49 PM

Share

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ತಂಡದ ಆರಂಭಿಕ ಜೋಡಿ ತಂಡಕ್ಕೆ ಪ್ರಬಲ ಆರಂಭ ನೀಡಿತು. ರೋಹಿತ್ ಶರ್ಮಾ 83 ರನ್ ಗಳಿಸಿದರೆ, ಕೆಎಲ್ ರಾಹುಲ್ 129 ರನ್ ಗಳಿಸಿದರು. ಆದರೆ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಮಾರ್ಕ್ ವುಡ್ ರಾಹುಲ್ ವಿಕೆಟ್ ಕಿತ್ತರೆ, ರೋಹಿತ್ ಕೂಡ ವುಡ್‌ಗೆ ಬಲಿಯಾದರು. ಆದರೆ ರೋಹಿತ್ ಔಟಾದ ರೀತಿ, ಅನೇಕ ಮಾಜಿ ಆಟಗಾರರಿಗೆ ಇಷ್ಟವಾಗುತ್ತಿಲ್ಲ. ಭಾರತದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಪ್ರಕಾರ, ರೋಹಿತ್ ಇಂಗ್ಲೆಂಡ್ ಆಟಗಾರರ ಬಲೆಗೆ ಸಿಲುಕಿದರು ಎಂದಿದ್ದಾರೆ.

ರೋಹಿತ್ ಬಾರಿಸಲು ಇಷ್ಟಪಡುತ್ತಾರೆ. ವುಡ್ ಅವರಿಗೆ ಪದೇ ಪದೇ ಶಾರ್ಟ್​ ಚೆಂಡುಗಳನ್ನು ಎಸೆಯುತ್ತಿದ್ದರು. ರೋಹಿತ್ ಅಂತಹ ಒಂದು ಚೆಂಡನ್ನು ಬೌಂಡರಿಗಟ್ಟಿದರು. ಆದರೆ ಅದೇ ರೀತಿಯಲ್ಲಿ, ಅವರು ಮತ್ತೊಂದು ಬಾಲ್ ಹೊಡೆಯುವ ಸಮಯದಲ್ಲಿ ಕ್ಯಾಚಿತ್ತು ಔಟಾದರು. ಹೀಗಾಗಿ ಲಕ್ಷ್ಮಣ್ ರೋಹಿತ್ ಅಂತಹ ಶಾಟ್ ಆಡಬಾರದಿತ್ತು, ಅದೂ ಕೂಡ ಆ ಪರಿಸ್ಥಿತಿಯಲ್ಲಿ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲೂ ರೋಹಿತ್ ಇದೇ ರೀತಿ ಔಟಾದರು. ರೋಹಿತ್ ಅವರ ವಿಕೆಟ್​ಗಳನ್ನು ಕೈಚೆಲ್ಲುತ್ತಾರೆ ಎಂದು ಆಗಾಗ್ಗೆ ಹೇಳಲಾಗುತ್ತದೆ. ಲಕ್ಷ್ಮಣ್ ಅವರ ಶಾಟ್ ಆಯ್ಕೆಯ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ರೋಹಿತ್ ಶರ್ಮಾ ತನ್ನನ್ನು ನಿರಾಸೆಗೊಳಿಸಿದ್ದಾರೆ ESPNcricinfo ಜೊತೆ ಮಾತನಾಡುತ್ತಾ ಲಕ್ಷ್ಮಣ್, ರೋಹಿತ್ ಶರ್ಮಾ ತನ್ನನ್ನು ನಿರಾಸೆಗೊಳಿಸಿದ್ದಾರೆ. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರು ಅದೇ ರೀತಿಯಲ್ಲಿ ಔಟಾಗುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ನಿಮ್ಮ ನೆಚ್ಚಿನ ಶಾಟ್ ನಿಮ್ಮ ವಿಕೆಟ್ ತೆಗೆದುಕೊಳ್ಳಬಹುದು. ಅದೇ ಓವರ್ನಲ್ಲಿ ರೋಹಿತ್ ಫೈನ್ ಲೆಗ್ ನಲ್ಲಿ ಸಿಕ್ಸರ್ ಬಾರಿಸಿದರು. ಎದುರಾಳಿ ತಂಡದ ನಾಯಕ ಫೀಲ್ಡಿಂಗ್ ಬದಲಾಯಿಸಿದಾಗ, ಈ ಸಾಲಿನಲ್ಲಿ ಚೆಂಡನ್ನು ಎಸೆಯುವುದು ಸ್ಪಷ್ಟವಾಗಿತ್ತು. ರೋಹಿತ್ ಶರ್ಮಾ ಅದೇ ಹೊಡೆತವನ್ನು ಆಡಬೇಕೆಂದು ಇಂಗ್ಲೆಂಡ್ ಬಯಸಿತು. ಇದು ರೋಹಿತ್‌ಗೆ ಬಲೆ ಬೀಸಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಇದರಲ್ಲಿ ರೋಹಿತ್ ಸಿಕ್ಕಿಬಿದ್ದರು ಎಂದಿದ್ದಾರೆ.

ಎಚ್ಚರಿಕೆಯಿಂದ ಬ್ಯಾಟ್ ಮಾಡಬೇಕಿತ್ತು ರೋಹಿತ್ ಜೊತೆಗಾರ ರಾಹುಲ್ ಔಟಾದಾಗ ರೋಹಿತ್ ಎಚ್ಚರಿಕೆಯಿಂದ ಆಡಬೇಕಿತ್ತು ಎಂದು ಲಕ್ಷ್ಮಣ್ ಹೇಳಿದ್ದಾರೆ. ರಾಹುಲ್ ಔಟಾದ ನಂತರ, ರೋಹಿತ್ ಅಲ್ಲಿ ಬ್ಯಾಟಿಂಗ್ ಮುಂದುವರಿಸುವುದು ಬಹಳ ಮುಖ್ಯ. ಅವರು ಬ್ಯಾಟಿಂಗ್ ಮಾಡುತ್ತಿದ್ದ ರೀತಿಯಲ್ಲಿ, ಅವರು ಕೆಲವು ಉತ್ತಮ ಡ್ರೈವ್‌ಗಳನ್ನು ಮಾಡಿದರು. ಅವರು ಚೆಂಡನ್ನು ಚೆನ್ನಾಗಿ ಟೈಮಿಂಗ್ ಮಾಡುತ್ತಿದ್ದರು. ರೋಹಿತ್ ಶರ್ಮಾ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಬೇಕಾಯಿತು. ರೋಹಿತ್ ಅವರ ಶಾಟ್​ ಆಯ್ಕೆಯಿಂದ ನನಗೆ ತುಂಬಾ ನಿರಾಶೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ:IND vs ENG: ಕ್ಯಾಮರಾದಲ್ಲಿ ಸೆರೆಯಾಯ್ತು ಇಂಗ್ಲೆಂಡ್ ಕ್ರಿಕೆಟಿಗರ ಕಳ್ಳಾಟ! ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬೀಳ್ತಾರಾ ಆಂಗ್ಲರು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ