AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashid Khan: ನಮ್ಮನ್ನು ಸಾಯಲು ಬಿಡಬೇಡಿ: ಕ್ರಿಕೆಟಿಗ ರಶೀದ್ ಖಾನ್ ಅಳಲು

IPL 2021: ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿ ಕೂಡ ಅಫ್ಘಾನಿಸ್ತಾನದ ಆಟಗಾರರೊಂದಿಗೆ ಸಂಪರ್ಕದಲ್ಲಿದ್ದಾರೆ. ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಹಾಗೂ ಮುಜೀಬುರ್ ರೆಹಮಾನ್ ಇಂಗ್ಲೆಂಡ್​ನಲ್ಲಿ ದಿ ಹಂಡ್ರೆಡ್ ಲೀಗ್ ಆಡುತ್ತಿದ್ದಾರೆ.

Rashid Khan: ನಮ್ಮನ್ನು ಸಾಯಲು ಬಿಡಬೇಡಿ: ಕ್ರಿಕೆಟಿಗ ರಶೀದ್ ಖಾನ್ ಅಳಲು
Rashid Khan
TV9 Web
| Updated By: ಝಾಹಿರ್ ಯೂಸುಫ್|

Updated on: Aug 16, 2021 | 4:06 PM

Share

ಇಡೀ ದೇಶದಲ್ಲಿ ಹಾಹಾಕಾರ, ಆಕ್ರಂದನ ಮುಗಿಲು ಮುಟ್ಟಿದ್ದರೆ ನಿದ್ರೆ ಹೇಗೆ ಬರುತ್ತೆ…ಸದ್ಯ ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗ ರಶೀದ್ ಖಾನ್ (Rashid Khan) ಪರಿಸ್ಥಿತಿ ಕೂಡ ಹಾಗೇ ಇದೆ. ದೂರದ ಇಂಗ್ಲೆಂಡ್​ನಲ್ಲಿ ದಿ ಹಂಡ್ರೆಡ್ (The Hundred) ಲೀಗ್ ಆಡುತ್ತಿರುವ ಸ್ಪಿನ್ ಮಾಂತ್ರಿಕ, ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ತೆಗೆದುಕೊಂಡಿದ್ದಾರೆ. ಅತ್ತ ಜನರು ಭಯ ಭೀತಿಯಿಂದ ದೇಶ ತೊರೆಯುತ್ತಿದ್ದಾರೆ. ಇವೆಲ್ಲವನ್ನೂ ನೋಡಿ ರಶೀದ್ ಖಾನ್ ಮನನೊಂದಿದ್ದು, ತಮ್ಮ ಭಾವನೆಗಳನ್ನು ಇನ್​ಸ್ಟಾಗ್ರಾಮ್ ಪೋಸ್ಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದ ಪರಿಸ್ಥಿತಿ ನೋಡಿ ನನಗೆ ನಿದ್ರೆ ಮಾಡಲಾಗುತ್ತಿಲ್ಲ. ದಯವಿಟ್ಟು ಎಲ್ಲರೂ ಪ್ರಾರ್ಥಿಸಿ ಎಂದು ರಶೀದ್ ಖಾನ್ ಕಣ್ಣೀರ ಪೋಸ್ಟ್ ಹಂಚಿಕೊಂಡಿದ್ದಾರೆ.

ಇಡೀ ದೇಶವೇ ತಾಲಿಬಾನ್ ವಶವಾದ ಬಳಿಕ, ಅಫ್ಘಾನಿಸ್ತಾನದ ಪರಿಸ್ಥಿತಿ ಭೀಕರವಾಗಿದೆ. ರಾಷ್ಟ್ರಪತಿ ಸೇರಿದಂತೆ ಉನ್ನತ ರಾಜಕೀಯ ನಾಯಕರು ಮತ್ತು ರಾಜತಾಂತ್ರಿಕರು ದೇಶವನ್ನು ತೊರೆದಿದ್ದಾರೆ. ರಾಷ್ಟ್ರಪತಿ ಭವನ ಸೇರಿದಂತೆ ದೇಶ ಪ್ರಮುಖ ಸರ್ಕಾರಿ ಸಂಸ್ಥೆಗಳನ್ನು ತಾಲಿಬಾನಿಗಳು ಆಕ್ರಮಿಸಿಕೊಂಡಿದ್ದಾರೆ. ಇಡೀ ದೇಶವೇ ಛಿದ್ರವಾಗುತ್ತಿರುವ ಸ್ಥಿತಿಯನ್ನು ಕಂಡು ರಶೀದ್ ಖಾನ್ ಇತ್ತೀಚೆಗಷ್ಟೇ ಸಾಮಾಜಿಕ ತಾಣಗಳ ಮೂಲಕ ವಿಶ್ವದ ನಾಯಕರ ಮನವಿ ಮಾಡಿದ್ದರು. “ನಮ್ಮ ದೇಶ ಸಂಕಷ್ಟದಲ್ಲಿದೆ. ದೇಶದ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲರೂ ಹುತಾತ್ಮರಾಗುತ್ತಿದ್ದಾರೆ. ಜನರು ಭಯದಿಂದ ಪಲಾಯನ ಮಾಡುವುದನ್ನು ಮುಂದುವರಿಸುತ್ತಿದ್ದಾರೆ. ದಯವಿಟ್ಟು ನಮ್ಮನ್ನು ಕೊಲ್ಲುವುದನ್ನು ತಡೆಯಿರಿ. ನಮಗೆ ಸಹಾಯ ಮಾಡಿ. ” ಎಂದು ರಶೀದ್ ಖಾನ್ ವಿಶ್ವ ನಾಯಕರಲ್ಲಿ ಕೇಳಿಕೊಂಡಿದ್ದಾರೆ.

ರಶೀದ್ ಖಾನ್ ಅವರ ಇನ್​ಸ್ಟಾಗ್ರಾಮ್ ಪೋಸ್ಟ್

ಇನ್ನೊಂದೆಡೆ ತಾಲಿಬಾನ್ ಉಗ್ರರು ದೇಶದ ಎಲ್ಲಾ ಕ್ರಿಕೆಟ್ ಸ್ಟೇಡಿಯಂಗಳನ್ನು ವಶಪಡಿಸಿಕೊಂಡಿದೆ. ಅವರ ಈ ನಡೆ ಅಫ್ಘಾನಿಸ್ತಾನ ಕ್ರಿಕೆಟ್​ನ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ. ಏಕೆಂದರೆ ಮುಂಬರು ಟಿ20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ತಂಡ ಅರ್ಹತೆ ಪಡೆದುಕೊಂಡಿದೆ. ಇದೀಗ ಇಡೀ ದೇಶವೇ ತಾಲಿಬಾನಿಗಳ ಹಿಡಿತದಲ್ಲಿರುವುದರಿಂದ ಕ್ರಿಕೆಟಿಗರ ಭವಿಷ್ಯ ಕೂಡ ಅತಂತ್ರವಾಗಿದೆ.

ಇತ್ತ ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿ ಕೂಡ ಅಫ್ಘಾನಿಸ್ತಾನದ ಆಟಗಾರರೊಂದಿಗೆ ಸಂಪರ್ಕದಲ್ಲಿದ್ದಾರೆ. ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಹಾಗೂ ಮುಜೀಬುರ್ ರೆಹಮಾನ್ ಇಂಗ್ಲೆಂಡ್​ನಲ್ಲಿ ದಿ ಹಂಡ್ರೆಡ್ ಲೀಗ್ ಆಡುತ್ತಿದ್ದು, ಹೀಗಾಗಿ ಐಪಿಎಲ್​ನ ದ್ವಿತಿಯಾರ್ಧಕ್ಕೆ ಅಲ್ಲಿಂದಲೇ ಯುಎಇನತ್ತ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಎಸ್​ಆರ್​ಹೆಚ್ ತಂಡದ ಅಫ್ಘಾನ್ ಆಟಗಾರರು ಐಪಿಎಲ್​ನ ದ್ವಿತಿಯಾರ್ಧದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿ ಸ್ಪಷ್ಟನೆ ನೀಡಿದೆ.

ಇದಾಗ್ಯೂ ಈ ಆಟಗಾರರ ಕುಟುಂಬಗಳು ಅಫ್ಘಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ರಶೀದ್ ಖಾನ್ ತಾಲಿಬಾನ್ ಉಗ್ರರ ಹೋರಾಟವನ್ನು ಹತ್ತಿಕ್ಕುವಂತೆ ವಿಶ್ವ ನಾಯಕರಿಗೆ ಮನವಿ ಮಾಡಿದ್ದರಿಂದ ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಇಡೀ ಅಫ್ಘಾನಿಸ್ತಾನ್ ತಾಲಿಬಾನ್ ಹಿಡಿತದಲ್ಲಿದ್ದು, ಹೀಗಾಗಿ ರಶೀದ್ ಖಾನ್ ಕುಟುಂಬದ ಮೇಲೆ ಆಕ್ರಮಣ ಮಾಡುವ ಆತಂಕ ಕೂಡ ಎದುರಾಗಿದೆ.

ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ

ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್​ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ