ಬಿಗ್ ಬಾಸ್ ಗಮನ ಸೆಳೆಯಲು ಸ್ಪೈಡರ್ ಮ್ಯಾನ್ ಕಾಸ್ಟ್ಯೂಮ್ ಧರಿಸಿ ಸೆಟ್ ಹೊರಗಡೆ ಧರಣಿಗೆ ಕುಳಿತಳು ರಾಖಿ ಸಾವಂತ್

ರಾಖಿ ಆಗಸ್ಟ್ 17 ರಂದು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿ ಬಿಗ್ ಬಾಸ್ ಒಟಿಟಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ. ಬಿಗ್ ಬಾಸ್ ಹೌಸ್ನಲ್ಲಿ ತನಗೆ ಸೇರಿಸಿಕೊಳ್ಳದೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿರುವ ಆಕೆ ಮನೆಯೊಳಗೆ ಹೋಗಬಹುದಾದ ಸುಳಿವನ್ನು ಸಹ ನೀಡಿದ್ದಾರೆ.

ಬಾಲಿವುಡ್ ನಟ-ನಟಿಯರು ಸುದ್ದಿಯಲ್ಲಿರಲು ನೂರೆಂಟು ಗಿಮ್ಮಿಕ್ಗಳನ್ನು ಮಾಡುತ್ತಾರೆ ಮಾರಾಯ್ರೇ. ತಮಗೆ ಬೇಡಿಕೆ ಕಮ್ಮಿಯಾಗುತ್ತಿದೆ, ಆಫರ್ಗಳು ಸಿಗುತ್ತಿಲ್ಲ ಅನ್ನೋದು ಖಾತ್ತಿಯಾಗುತ್ತಿದ್ದಂತೆ ಡ್ರಾಮಾಗಳನ್ನು ಮಾಡುತ್ತಾ ಪ್ರಚಾರ ಗಿಟ್ಟಿಸಲು ಪ್ರಯತ್ನಿಸಿತ್ತಾರೆ. ನಿಮಗೆ ರಾಖಿ ಸಾವಂತ್ ಹೆಸರಿನ ನಟಿ ನೆನಪಿದ್ದಾಳೆ ತಾನೆ? ಆರಕ್ಕೇರದ ಮೂರಕ್ಕಿಳಿಯದ ನಟಿ, ನಿರೂಪಕಿ, ರಿಯಾಲಿಟಿ ಶೋ ಹೋಸ್ಟ್, ನೃತ್ಯಗಾತಿ ಮತ್ತು ಹಿಂದಿ ಬಿಗ್ ಬಾಸ್ ಮೊದಲ ಸೀಸನ್ ಸ್ಪರ್ಧಿ ಮತ್ತು 2020 ಫೈನಲಿಸ್ಟ್-ಈಕೆ ತಲೆಮೇಲೆ ಹಲವಾರು ಹ್ಯಾಟುಗಳಿವೆ!

ಇಂತಿಪ್ಪ ರಾಖಿ ಆಗಸ್ಟ್ 17 ರಂದು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿ ಬಿಗ್ ಬಾಸ್ ಒಟಿಟಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ. ಬಿಗ್ ಬಾಸ್ ಹೌಸ್ನಲ್ಲಿ ತನಗೆ ಸೇರಿಸಿಕೊಳ್ಳದೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿರುವ ಆಕೆ ಮನೆಯೊಳಗೆ ಹೋಗಬಹುದಾದ ಸುಳಿವನ್ನು ಸಹ ನೀಡಿದ್ದಾರೆ.

‘ನಾನು ಬಿಗ್ ಬಾಸ್ ಮನೆಯೊಳಗೆ ಹೋಗಿ ಎಲ್ಲರನ್ನು ತೆಪ್ಪಗಾಗಿಸುತ್ತೇನೆ ಮತ್ತು ಶೋಗೆ ಹಾಸ್ಯ ಎಲಿಮೆಂಟ್ನ ಕೊರತೆಯಿದೆ ಅದನ್ನು ನೀಗಿಸುತ್ತೇನೆ. ಬಿಗ್ ಬಾಸ್ ನಾನು ಬರ್ತಾಯಿದ್ದೇನೆ. ಯಾರೂ ನನ್ನನ್ನು ತಡೆಯಲಾರರು. ನೀವು ನನಗೆ ಪ್ರಾಮಿಸ್ ಮಾಡಿರುವಿರಿ ಬಿಗ್ ಬಾಸ್, ಪ್ರತಿ ವರ್ಷ ನನ್ನನ್ನು ಸ್ಪರ್ಧಿಯಾಗಿ ಭಾಗವಹಿಸಲು ಅವಕಾಶ ನೀಡುವ ಪ್ರಾಮಿಸ್. ನಾನು ಬಿಗ್ ಬಾಸ್ ಒಟಿಟಿಯಲ್ಲಿ ಬರುತ್ತಿರುವೆ,’ ಎಂದು ಆಕೆ ಹೇಳಿದ್ದಾರೆ.

ಅಂದಹಾಗೆ, ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಿಗ್ ಬಾಸ್ ಆಯೋಜಕರ ಗಮನ ಸೆಳೆಯಲು ಆಕೆ ಸ್ಪೈಡರ್ ಮ್ಯಾನ್ ಉಡುಗೆಯಲ್ಲಿ ಬಿಗ್ ಬಾಸ್ ಸೆಟ್ ಹೊರಗಡೆ ಧರಣಿ ಕೂತಿದ್ದಾರೆ. ಈ ವಿಡಿಯೋ ನೋಡಿದರೆ ನಿಮಗೆ ಅರ್ಥವಾಗುತ್ತದೆ. ವಿಚಿತ್ರ ಉಡುಗೆಯೊಂದಿಗೆ ಅಕೆ ಕೊರಳಿನಲ್ಲಿ ಟನ್ಗಟ್ಟಲೆ ಬಂಗಾರ ಧರಿಸಿದ್ದಾಳೆ. ನೋಡಿ ನಕ್ಕು ಬಿಡಿ.

ಓಕೆ, ನಟಿ ಉರ್ಫಿ ಜಾವೆದ್ ಎಲಿಮಿನೇಟ್ ಆದ ಬಳಿಕ ಬಿಗ್ ಬಾಸ್ ಹೌಸ್ನಲ್ಲಿ ಈಗ ಶಮಿತಾ ಶೆಟ್ಟಿ, ಪ್ರತೀಕ್ ಸೆಹಜ್ಪಾಲ್, ದಿವ್ಯಾ ಅಗರ್ವಾಲ್, ನೆಹಾ ಭಾಸಿನ್, ಜೀಷನ್ ಖಾನ್, ರಾಗೇಶ್ ಬಾಪಟ್, ರಿದ್ಧಿಮಾ ಪಂಡಿತ್, ಮಿಲಿಂದ್ ಗಾಬಾ, ಕರಣ್ ನಾಥ್, ನಿಶಾಂತ್ ಭಟ್ ಮತ್ತು ಅಕ್ಷರಾ ಸಿಂಗ್ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ: ‘ವಿಶ್ವವೇ ವಿಫಲವಾಗಿದೆ’ ಕಣ್ಣೀರಿನಲ್ಲಿರುವ ಅಫ್ಘಾನಿ ಹುಡುಗಿಯ ಹೃದಯ ವಿದ್ರಾವಕ ವಿಡಿಯೋ ವೈರಲ್

Click on your DTH Provider to Add TV9 Kannada