ಪತ್ನಿ ಜಯಾ ಬಗ್ಗೆ ಅಮಿತಾಭ್​ ಬಚ್ಚನ್​ ಬಹಿರಂಗವಾಗಿ ಹೇಳಿಕೊಂಡ 5 ವಿಶೇಷ ಮಾತುಗಳು ಇಲ್ಲಿವೆ

Amitabh Bachchan Jaya Bachchan Wedding Anniversary: ಮದುವೆ ನಂತರವೂ ಬೇರೆ ನಟಿಯರ ಜೊತೆ ಅಮಿತಾಭ್​ ಹೆಸರು ತಳುಕು ಹಾಕಿಕೊಂಡಿತ್ತು. ಹತ್ತಾರು ಗಾಸಿಪ್​ಗಳು ಹರಿದಾಡಿದ್ದವು. ಆದರೂ ಅವುಗಳಿಂದ ಅಮಿತಾಭ್​ ಮತ್ತು ಜಯ ದಾಂಪತ್ಯಕ್ಕೆ ಧಕ್ಕೆ ಆಗಲಿಲ್ಲ.

ಪತ್ನಿ ಜಯಾ ಬಗ್ಗೆ ಅಮಿತಾಭ್​ ಬಚ್ಚನ್​ ಬಹಿರಂಗವಾಗಿ ಹೇಳಿಕೊಂಡ 5 ವಿಶೇಷ ಮಾತುಗಳು ಇಲ್ಲಿವೆ
ಅಮಿತಾಭ್​ ಬಚ್ಚನ್​ - ಜಯಾ ಬಚ್ಚನ್​ ಮದುವೆ ಫೋಟೋ
Follow us
ಮದನ್​ ಕುಮಾರ್​
|

Updated on: Jun 03, 2021 | 8:26 AM

ಸೆಲೆಬ್ರಿಟಿಗಳ ಜಗತ್ತಿನಲ್ಲಿ ಮದುವೆ ಎಷ್ಟು ಸುಲಭವೋ ವಿಚ್ಛೇದನವೂ ಅಷ್ಟೇ ಸುಲಭ ಎಂಬಂತಹ ವಾತಾವರಣ ಇದೆ. ಅದರ ನಡುವೆಯೂ ಆದರ್ಶ ದಂಪತಿಗಳಾಗಿ ಬಾಳುತ್ತಿರುವ ಸೆಲೆಬ್ರಿಟಿಗಳು ಅನೇಕರಿದ್ದಾರೆ. ಆ ಸಾಲಿನಲ್ಲಿ ಮುಂಚೂಣಿಯಾಗಿ ಕೇಳಿಬರುವ ಹೆಸರು ಅಮಿತಾಭ್​ ಬಚ್ಚನ್​ ಮತ್ತು ಜಯಾ ಬಚ್ಚನ್​ ಅವರದ್ದು. ಇಂದು (ಜೂ.3) ಈ ಜೋಡಿಗೆ 48ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಕೊವಿಡ್​ ಇರುವುದರಿಂದ ಬಂಧು-ಬಾಂಧವರನ್ನು ಜೊತೆ ಸೇರಿಸಿಕೊಂಡು ಈ ದಿನವನ್ನು ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ.

ಮದುವೆ ನಂತರವೂ ಬೇರೆ ನಟಿಯರ ಜೊತೆ ಅಮಿತಾಭ್​ ಹೆಸರು ತಳುಕು ಹಾಕಿಕೊಂಡಿತ್ತು. ಹತ್ತಾರು ಗಾಸಿಪ್​ಗಳು ಹರಿದಾಡಿದ್ದವು. ಆದರೂ ಅವುಗಳಿಂದ ಅಮಿತಾಭ್​ ಮತ್ತು ಜಯ ದಾಂಪತ್ಯಕ್ಕೆ ಧಕ್ಕೆ ಆಗಲಿಲ್ಲ. ಕಳೆದ 48 ವರ್ಷಗಳಿಂದ ಪರಸ್ಪರ ನಂಬಿಕೆ, ಪ್ರೀತಿ, ಗೌರವಗಳೊಂದಿಗೆ ದಾಂಪತ್ಯ ಜೀವನ ನಡೆಸುತ್ತಿರುವ ಈ ಸ್ಟಾರ್​ಗಳಿಬ್ಬರು ಅನೇಕರಿಗೆ ಮಾದರಿ. ತಮ್ಮ ಪತ್ನಿ ಬಗ್ಗೆ ಅಮಿತಾಭ್​ ಹೇಳಿಕೊಂಡ 5 ಇಂಟರೆಸ್ಟಿಂಗ್​ ಮಾತುಗಳು ಇಲ್ಲಿವೆ.

1) ‘ನಾನು ಬಯಸಿದ ಎಲ್ಲ ಒಳ್ಳೆಯ ಗುಣಗಳು ಜಯಾ ಅವರಲ್ಲಿ ಇತ್ತು. ಅದೇ ಕಾರಣಕ್ಕಾಗಿ ನಾನು ಅವರನ್ನು ಮದುವೆ ಆದೆ. ಪ್ರೀತಿಯ ಭಾವನೆಗಳನ್ನು ಜಯಾ ಚೆನ್ನಾಗಿ ಅಭಿವ್ಯಕ್ತಿಸುತ್ತಾರೆ’ ಎನ್ನುವ ಮೂಲಕ 1998ರಲ್ಲಿ ಪತ್ನಿಯ ಗುಣಗಾನ ಮಾಡಿದ್ದರು ಬಿಗ್​ ಬಿ.

2) ‘ಕೆಟ್ಟ ಉದ್ದೇಶ ಹೊಂದಿರುವ ವ್ಯಕ್ತಿಗಳನ್ನು ಜಯಾ ತಕ್ಷಣಕ್ಕೆ ಪತ್ತೆ ಹಚ್ಚುತ್ತಾರೆ. ಅವರಿಗೆ ಸಿಕ್ಸ್ತ್ ​ಸೆನ್ಸ್​ ಇದೆ ಎನಿಸುತ್ತದೆ. ಅದೇ ಕಾರಣಕ್ಕಾಗಿ ಅವರು ಇಂಥವರನ್ನು ಬೇಗ ಕಂಡು ಹಿಡಿಯುತ್ತಾರೆ’ ಎಂದು ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಬಚ್ಚನ್​ ಹೇಳಿದ್ದರು.

3) ‘ಇಂದಿಗೂ ನಾನು ನನ್ನ ಪತ್ನಿಗೆ ಲವ್​ ಲೆಟರ್​ ಬರೆಯುತ್ತೇನೆ’ ಎಂದು ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದ ವೇದಿಕೆಯಲ್ಲಿ ಅಮಿತಾಭ್​ ಬಚ್ಚನ್​ ಹೇಳಿದ್ದರು. ಆ ಮೂಲಕ ತಮ್ಮ ರೊಮ್ಯಾಂಟಿಕ್​ ಬಾಂಧವ್ಯದ ಬಗ್ಗೆ ಅವರು ಬಾಯಿ ಬಿಟ್ಟಿದ್ದರು.

4) ಗಂಡಂದಿರು ತಮ್ಮ ಪತ್ನಿಯ ಹೆಸರನ್ನು ಮೊಬೈಲ್​ನಲ್ಲಿ ತಮ್ಮಿಷ್ಟದಂತೆ ಸೇವ್​ ಮಾಡಿಕೊಳ್ಳುತ್ತಾರೆ. ಹಾಗಾದರೆ ಅಮಿತಾಭ್​ ಮೊಬೈಲ್​ನಲ್ಲಿ ಜಯಾ ಹೆಸರು ಹೇಗೆ ಸೇವ್​ ಆಗಿದೆ? ‘JB’ ಎಂದು ಸೇವ್​ ಮಾಡಿಕೊಂಡಿರುವುದನ್ನು ಕೂಡ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಅಮಿತಾಭ್​ ಹೇಳಿದ್ದರು.

5) ಇಂಥ ಪತ್ನಿ ಸಿಕ್ಕಿದ್ದು ಆ ದೇವರ ಕೃಪೆ ಎಂದೇ ಅಮಿತಾಭ್​ ಹೇಳುತ್ತಾರೆ. ಈ ಬಗ್ಗೆ ಅವರು ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದರು. ‘ಫೋಟೋ ನೋಡಿ, ಜೊತೆಯಲ್ಲಿ ಕೆಲಸ ಮಾಡಿ, ಒಟ್ಟಿಗೆ ಸಮಯ ಕಳೆದು, ಒಟ್ಟಿಗೆ ನಿರ್ಧರಿಸಿ, ಮದುವೆ ಆಗಿ, ಮಕ್ಕಳು-ಮೊಮ್ಮಕ್ಕಳನ್ನು ಪಡೆದೆವು. ಎಷ್ಟೋ ಜನರಿಗೆ ಈ ಭಾಗ್ಯ ಇರುವುದಿಲ್ಲ. ನಮಗೆ ಅದೃಷ್ಟ ನೀಡಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಲೇ ಬೇಕು’ ಎಂದು ಅಮಿತಾಭ್​ ಬರೆದುಕೊಂಡಿದ್ದರು.

ಇದನ್ನೂ ಓದಿ:

ಅಮಿತಾಭ್​ ಫ್ಲಾಪ್​ ಹೀರೋ ಎಂದು ನಾಯಕಿಯರು ದೂರ ಸರಿದಾಗ ಮುಂದೆ ಬಂದಿದ್ದು ಜಯಾ ಬಚ್ಚನ್​; ಅಲ್ಲಿಂದ ಶುರುವಾಯ್ತು ಪ್ರೇಮ ಕಹಾನಿ

‘ನಾನು ದೇಣಿಗೆ ಕೇಳಲ್ಲ, ಕೊಡ್ತೀನಿ’; ಬೇರೆ ಸ್ಟಾರ್​ಗಳಿಗಿಂತ ಭಿನ್ನ ಹೆಜ್ಜೆ ಇಟ್ಟ ಅಮಿತಾಭ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ