ಲಾಕ್​ಡೌನ್​ ನಿಯಮ ಉಲ್ಲಂಘನೆ; ದಿಶಾ ಪಟಾನಿ, ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲು

ಬಾಂದ್ರಾ ಸುತ್ತಮುತ್ತ ಟೈಗರ್​ ಶ್ರಾಫ್​ ಮತ್ತು ದಿಶಾ ಪಟಾನಿ ಅನವಶ್ಯಕವಾಗಿ ತಿರುಗಾಡುತ್ತಿರುವುದನ್ನು ಕಂಡು ಪೊಲೀಸರು ಅವರನ್ನು ತಡೆದಿದ್ದಾರೆ. ಹೊರಗಡೆ ಸುತ್ತಾಡುತ್ತಿರುವುದಕ್ಕೆ ಈ ಜೋಡಿ ಸರಿಯಾದ ಕಾರಣವನ್ನು ನೀಡಿಲ್ಲ.

ಲಾಕ್​ಡೌನ್​ ನಿಯಮ ಉಲ್ಲಂಘನೆ; ದಿಶಾ ಪಟಾನಿ, ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲು
ದಿಶಾ ಪಟಾನಿ, ಟೈಗರ್ ಶ್ರಾಫ್
Follow us
ಮದನ್​ ಕುಮಾರ್​
|

Updated on: Jun 03, 2021 | 10:54 AM

ಕೊರೊನಾ ವೈರಸ್​ ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ದೇಶದ ಹಲವು ಕಡೆಗಳಲ್ಲಿ ಲಾಕ್​ಡೌನ್ ಜಾರಿ ಮಾಡಲಾಗಿದೆ. ಜನಸಾಮಾನ್ಯರಿಗೆ ಮಾತ್ರವಲ್ಲದೆ ಸೆಲೆಬ್ರಿಟಿಗಳಿಗೂ ಈ ನಿಯಮಗಳು ಅನ್ವಯ ಆಗುತ್ತವೆ. ಅನವಶ್ಯಕವಾಗಿ ಹೊರಗಡೆ ಸುತ್ತಾಡಿದರೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಸೆಲೆಬ್ರಿಟಿಗಳು ಕೂಡ ಲಾಕ್​ಡೌನ್​ ನಿಯಮಗಳಿಗೆ ಬದ್ಧರಾಗಿರಬೇಕು. ಆದರೆ ಕೆಲವು ಸ್ಟಾರ್​ಗಳ ತಮ್ಮ ಮನ ಬಂದಂತೆ ತಿರುಗಾಡುತ್ತ, ಪೊಲೀಸರಿಂದ ಕೇಸ್​ ಜಡಿಸಿಕೊಂಡಿದ್ದಾರೆ. ನಟಿ ದಿಶಾ ಪಟಾನಿ ಮತ್ತು ಟೈಗರ್​ ಶ್ರಾಫ್​ಗೆ ಹೀಗೆಯೇ ಆಗಿದೆ.

ದಿಶಾ ಮತ್ತು ಟೈಗರ್​ ಇಬ್ಬರೂ ಬುಧವಾರ (ಜೂ.2) ಜಿಮ್​ ಮುಗಿಸಿ ತಮ್ಮ ಐಷಾರಾಮಿ ಕಾರಲ್ಲಿ ಮುಂಬೈ ಸುತ್ತಾಟ ಮಾಡೋಕೆ ಮುಂದಾಗಿದ್ದಾರೆ. ದಿಶಾ ಕಾರಿನಲ್ಲಿ ಮುಂಭಾಗದಲ್ಲಿ ಕೂತಿದ್ದರೆ ಟೈಗರ್​ ಹಿಂಭಾಗದಲ್ಲಿ ಕೂತಿದ್ದರಂತೆ. ಬಾಂದ್ರಾದ ಬ್ಯಾಂಡ್​​ಸ್ಟ್ಯಾಂಡ್​ ಸಮೀಪ ಎರಡನೇ ರೌಂಡ್ ಹಾಕುವಾಗ ಪೊಲೀಸರು ಇವರನ್ನು ತಡೆದಿದ್ದಾರೆ. ನಂತರ ಇವರ ಆಧಾರ್​ ಕಾರ್ಡ್​ ಪರಿಶೀಲಿಸಲಾಯಿತು. ಇತರ ಔಪಚಾರಿಕ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಪೊಲೀಸರು ಬಿಟ್ಟುಕಳುಹಿಸಿದ್ದಾರೆ. ಅಲ್ಲದೆ, ಸುಖಾಸುಮ್ಮನೆ ಸುತ್ತಾಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ವರದಿ ಆಗಿತ್ತು. ಆದರೆ ಈಗ ಎಫ್​ಐಆರ್​ ದಾಖಲಾಗಿರುವುದು ತಿಳಿದುಬಂದಿದೆ.

‘ಬಾಂದ್ರಾ ಸುತ್ತಮುತ್ತ ಟೈಗರ್​ ಶ್ರಾಫ್​ ಮತ್ತು ದಿಶಾ ಪಟಾನಿ ಅನವಶ್ಯಕವಾಗಿ ತಿರುಗಾಡುತ್ತಿರುವುದು ಗಮನಕ್ಕೆ ಬಂತು. ಪೊಲೀಸರು ಅವರನ್ನು ತಡೆದು ಪರಿಶೀಲನೆ ನಡೆಸಿದಾಗ ಅವರಿಂದ ಸೂಕ್ತ ಉತ್ತರ ಸಿಗಲಿಲ್ಲ. ಹೊರಗಡೆ ಸುತ್ತಾಡುತ್ತಿರುವುದಕ್ಕೆ ಸರಿಯಾದ ಕಾರಣವನ್ನು ಅವರು ಹೇಳಿಲ್ಲ. ಐಪಿಸಿ ಸೆಕ್ಷನ್​ 188 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆದರೆ ಅವರನ್ನು ಬಂಧಿಸಿಲ್ಲ’ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ಟೈಗರ್​ ಶ್ರಾಫ್​ ಮತ್ತು ದಿಶಾ ಪಟಾನಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್​ ಇದೆ. ಅನೇಕ ಸಂದರ್ಭಗಳಲ್ಲಿ ಈ ಜೋಡಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದೆ. ತಮ್ಮ ಪ್ರೀತಿಯ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿಲ್ಲ. ಫಿಟ್ನೆಸ್​ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಅವರು ಜೊತೆಯಾಗಿ ಜಿಮ್​ಗೆ ತೆರಳಿದ್ದರು. ವಾಪಸ್​ ಬರುವಾಗ ಅವರನ್ನು ಪೊಲೀಸರು ತಡೆದಿದ್ದಾರೆ.

ಇದನ್ನೂ ಓದಿ:

Salman Khan: ಟೈಗರ್​ ಶ್ರಾಫ್​ ಪ್ರೇಯಸಿ ದಿಶಾಗೆ ಸಲ್ಮಾನ್​ ಕಿಸ್​ ಮಾಡಿದ್ದು ನಿಜ; ಆದರೆ ಇಲ್ಲಿದೆ ಟ್ವಿಸ್ಟ್​

ಇನ್ನೊಂದು ವಾರ ಲಾಕ್​ಡೌನ್​ ಮುಂದುವರೆಯುವ ಸಾಧ್ಯತೆ; ಬಳಿಕ ಈ ಎಲ್ಲಾ ವಲಯಗಳಿಗೆ ವಿನಾಯಿತಿ ಘೋಷಣೆ ನಿರೀಕ್ಷೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ