AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Khan: ಟೈಗರ್​ ಶ್ರಾಫ್​ ಪ್ರೇಯಸಿ ದಿಶಾಗೆ ಸಲ್ಮಾನ್​ ಕಿಸ್​ ಮಾಡಿದ್ದು ನಿಜ; ಆದರೆ ಇಲ್ಲಿದೆ ಟ್ವಿಸ್ಟ್​

Radhe Your Most Wanted Bhai: ಮೇ 13ರಂದು ರಾಧೆ ಸಿನಿಮಾ ತೆರೆಕಾಣಲಿದೆ. ಅದಕ್ಕೂ ಮುನ್ನ ಚಿತ್ರದ ಮೇಕಿಂಗ್​ ವಿಡಿಯೋ ರಿಲೀಸ್​ ಮಾಡಲಾಗಿದೆ. ಅದರಲ್ಲಿ ಸಲ್ಮಾನ್​ ಖಾನ್​ ಅವರು ಕಿಸ್​ ಬಗ್ಗೆ ಮಾತನಾಡಿದ್ದಾರೆ.

Salman Khan: ಟೈಗರ್​ ಶ್ರಾಫ್​ ಪ್ರೇಯಸಿ ದಿಶಾಗೆ ಸಲ್ಮಾನ್​ ಕಿಸ್​ ಮಾಡಿದ್ದು ನಿಜ; ಆದರೆ ಇಲ್ಲಿದೆ ಟ್ವಿಸ್ಟ್​
ದಿಶಾ ಪಠಾಣಿ ಜೊತೆ ಸಲ್ಮಾನ್​ ಖಾನ್​ ಲಿಪ್​ಲಾಕ್​
ಮದನ್​ ಕುಮಾರ್​
|

Updated on: May 02, 2021 | 1:48 PM

Share

ಕೆಲವೇ ದಿನಗಳ ಹಿಂದೆ ನಟ ಸಲ್ಮಾನ್​ ಖಾನ್​ ಅಭಿನಯದ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿತ್ತು. ಈ ಚಿತ್ರಕ್ಕೆ ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ದಿಶಾ ಪಠಾಣಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಬಿಡುಗಡೆ ಆದ ದಿನದಿಂದಲೂ ಸಲ್ಮಾನ್ ಖಾನ್​ ಮತ್ತು ದಿಶಾ ಪಠಾಣಿ ನಡುವಿನ ಕಿಸ್​ ವಿಚಾರ ಹೆಚ್ಚು ಚರ್ಚೆ ಆಗುತ್ತಿತ್ತು. ಸಲ್ಮಾನ್​ ಖಾನ್​ ಫ್ಯಾನ್​ ಪೇಜ್​ಗಳಲ್ಲಿ ಈ ಬಗ್ಗೆ ಹಲವು ಮೀಮ್​ಗಳು ಹರಿದಾಡುತ್ತಿದ್ದವು. ನಿಜಕ್ಕೂ ಸಲ್ಮಾನ್​ ಖಾನ್​ ಕಿಸ್​ ಮಾಡಿದ್ದಾರೆ ಎಂದು ಅನೇಕರು ನಂಬುತ್ತಲೇ ಇರಲಿಲ್ಲ. ಅದಕ್ಕೆಲ್ಲ ಸಲ್ಲು ಈಗ ಉತ್ತರ ನೀಡಿದ್ದಾರೆ.

ಅಷ್ಟಕ್ಕೂ ಸಲ್ಮಾನ್​ ಖಾನ್​ ಅವರು ದಿಶಾಗೆ ಕಿಸ್​ ಮಾಡಿದ್ದಾರೋ ಇಲ್ಲವೋ ಎಂಬುದು ಅಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಲು ಕಾರಣ ಇದೆ. ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಸಲ್ಮಾನ್​ ಅವರು ‘ನೋ ಕಿಸ್​’ ಎಂಬ ನಿಯಮ ಪಾಲಿಸಿಕೊಂಡು ಬಂದಿದ್ದಾರೆ. ಯಾವುದೇ ನಟಿಗೂ ಅವರು ಸಿನಿಮಾದಲ್ಲಿ ಕಿಸ್​ ಮಾಡಿಲ್ಲ. ಹಾಗಾದರೆ ಅವರು ಈಗ ಯಾಕೆ ಆ ರೂಲ್ಸ್​ ಬ್ರೇಕ್​ ಮಾಡಿದರು ಎಂಬುದೇ ಎಲ್ಲರ ಪ್ರಶ್ನೆ ಆಗಿತ್ತು. ಈ ಬಗ್ಗೆ ಟೈಗರ್​ ಶ್ರಾಫ್​ ಪ್ರೇಯಸಿ ನಟಿ ದಿಶಾ ಪಠಾಣಿ ಏನೂ ಉತ್ತರ ನೀಡಿರಲಿಲ್ಲ. ಆದರೆ ಸ್ವತಃ ಸಲ್ಮಾನ್​ ಖಾನ್​ ಎಲ್ಲವನ್ನೂ ಬಾಯಿ ಬಿಟ್ಟಿದ್ದಾರೆ.

ಮೇ 13ರಂದು ರಾಧೆ ಸಿನಿಮಾ ತೆರೆಕಾಣಲಿದೆ. ಅದಕ್ಕೂ ಮುನ್ನ ಪ್ರಚಾರದ ಸಲುವಾಗಿ ಚಿತ್ರದ ಮೇಕಿಂಗ್​ ವಿಡಿಯೋ ರಿಲೀಸ್​ ಮಾಡಲಾಗಿದೆ. ಅದರಲ್ಲಿ ಸಲ್ಮಾನ್​ ಖಾನ್​ ಅವರು ಕಿಸ್​ ಬಗ್ಗೆ ಮಾತನಾಡಿದ್ದಾರೆ. ‘ಈ ಸಿನಿಮಾದಲ್ಲಿ ಖಂಡಿತಾ ಕಿಸ್​ ಇದೆ. ಆದರೆ ದಿಶಾ ಪಠಾಣಿ ಜೊತೆ ಅಲ್ಲ. ಒಂದು ಟೇಪ್​ ಜೊತೆಗೆ’ ಎಂದು ಅವರು ಟ್ವಿಸ್ಟ್​ ನೀಡಿದ್ದಾರೆ. ಅಂದರೆ, ದಿಶಾ ಪಠಾಣಿ ತುಟಿಗೆ ಟೇಪ್​ ಅಂಟಿಸಿ, ಅದರ ಮೇಲೆ ಸಲ್ಮಾನ್​ ಕಿಸ್​ ಮಾಡಿದ್ದಾರೆ. ಆ ಮೂಲಕ ಅವರು ಅವರು ತಮ್ಮ ‘ನೋ ಕಿಸ್​’ ಪಾಲಿಸಿಯನ್ನು ಕಾಪಾಡಿಕೊಂಡಿದ್ದಾರೆ.

ಈ ದೃಶ್ಯ ಸಿನಿಮಾದಲ್ಲಿ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಚಿತ್ರಮಂದಿರ ತೆರೆಯಲು ಅನುಮತಿ ಇರುವ ನಗರಗಳಲ್ಲಿ ಈ ಚಿತ್ರ ನೇರವಾಗಿ ಬಿಡುಗಡೆ ಆಗಲಿದೆ. ಜೊತೆಗೆ ಏಕಕಾಲದಲ್ಲಿ ಓಟಿಟಿ ಮತ್ತು ಡಿ2ಎಚ್​ ಸೇವೆಗಳ ಮೂಲಗಳೂ ವೀಕ್ಷಣೆಗೆ ಲಭ್ಯ ಆಗಲಿದೆ. ಸಿನಿಮಾ ಬಿಡುಗಡೆಯಲ್ಲಿ ಬಾಲಿವುಡ್ ಇದೇ ಮೊದಲ ಬಾರಿಗೆ ಇಂಥ ಮಾರ್ಗ ಅನುಸರಿಸುತ್ತಿದೆ. ಚಿತ್ರದಲ್ಲಿ ಹಿರಿಯ ನಟ ಜಾಕಿ ಶ್ರಾಫ್​, ರಣದೀಪ್​ ಹೂಡಾ ಮುಂತಾದವರು ಪ್ರಮುಖ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ:

ಒಂದೇ ಒಂದು ಹಾಡು ನೋಡಿ ಅಲ್ಲು ಅರ್ಜುನ್​ ಪ್ರತಿಭೆಗೆ ಸಲಾಂ ಎಂದ ಸಲ್ಮಾನ್​ ಖಾನ್​

ಲಾಕ್​ಡೌನ್​ನಲ್ಲೂ ಮನೆಯಿಂದ ಹೊರಬಂದ ಸಲ್ಮಾನ್​ ಖಾನ್;​ ಆದ್ರೂ ಇದು ಮೆಚ್ಚುವ ಕೆಲಸ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More