ಶಮಂತ್​ಗೆ ಕೊನೆಗೂ ಸಿಕ್ಕಳು ಹುಡುಗಿ; ಕಣ್ಮಣಿಯ ಧ್ವನಿ ಕೇಳಿ ಬಿಗ್​ ಬಾಸ್​ ಸ್ಪರ್ಧಿಗಳು ಫಿದಾ

ಕಣ್ಮಣಿ ತುಂಬಾನೇ ಚೂಟಿ. ಚಕ್ರವರ್ತಿ ಚಂದ್ರಚೂಡ್​ ಸೈಕಲಾಜಿಕಲಿ ಮಾತನಾಡೋಕೆ ಮುಂದಾದಾಗ, ನಿಮ್ಮ ಸೈಕಾಲಜಿ ನಮ್ಮಲ್ಲಿ ವರ್ಕ್​ ಆಗುವುದಿಲ್ಲ ಎಂದಿತು ಕಣ್ಮಣಿ.

ಶಮಂತ್​ಗೆ ಕೊನೆಗೂ ಸಿಕ್ಕಳು ಹುಡುಗಿ; ಕಣ್ಮಣಿಯ ಧ್ವನಿ ಕೇಳಿ ಬಿಗ್​ ಬಾಸ್​ ಸ್ಪರ್ಧಿಗಳು ಫಿದಾ
ಶಮಂತ್​ ಬ್ರೋ ಗೌಡ
Follow us
| Updated By: ಮದನ್​ ಕುಮಾರ್​

Updated on: May 02, 2021 | 3:20 PM

ಬಿಗ್​ ಬಾಸ್​ 9ನೇ ವಾರದ ಎಲಿಮಿನೇಷನ್​ ಪ್ರಕ್ರಿಯೆ ನಡೆಯುತ್ತಿದೆ. ಕೊರೊನಾ ವೈರಸ್ ಹೆಚ್ಚಿರುವ ಕಾರಣದಿಂದ ಕರ್ನಾಟಕದಲ್ಲಿ ಕೊರೊನಾ ಕರ್ಫ್ಯೂ ಹೇರಲಾಗಿದೆ. ಹೀಗಾಗಿ ಶೂಟಿಂಗ್​ಗೆ ಅವಕಾಶವಿಲ್ಲ. ಈ ಕಾರಣಕ್ಕೆ ಸುದೀಪ್​ ಈ ವಾರ ಬಿಗ್ ಬಾಸ್​ ವೇದಿಕೆ ಏರಿಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ಆದರೆ, ಬಿಗ್​ ಬಾಸ್​ ಮನರಂಜನೆಗೆ ಕೊರತೆ ಮಾಡಿಲ್ಲ. ಈ ವಾರ ಕಣ್ಮಣಿಯನ್ನು ಬಿಗ್​ ಬಾಸ್​ ಮನೆಗೆ ಪರಿಚಯ ಮಾಡಲಾಗಿದೆ! ಆಕೆಯ ಧ್ವನಿ ಕೇಳಿ ಎಲ್ಲರೂ ಫಿದಾ ಆಗಿದ್ದಾರೆ.

ಲಿವಿಂಗ್ ಏರಿಯಾದಲ್ಲಿ ಸ್ಪರ್ಧಿಗಳು ಕುಳಿತಿದ್ದರು. ಈ ವೇಳೆ ಧ್ವನಿ ಒಂದು ಕೇಳಿತ್ತು. ಈ ಧ್ವನಿ ಮೊದಲು ಪ್ರಶ್ನೆ ಕೇಳಿದ್ದು ಶಮಂತ್​ಗೆ. ನಾನು ಯಾರು ಹೇಳಿ ಎಂದು ಶಮಂತ್​ ಅವರನ್ನು ಕೇಳಿತು. ತಮಗೆ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟ ವೈಜಯಂತಿ ಅಡಿಗ ಇರಬಹುದು ಎಂದು ಅವರ ಹೆಸರನ್ನು ಶಮಂತ್​ ಹೇಳಿದರು. ಆದರೆ, ಉತ್ತರ ತಪ್ಪಾಗಿತ್ತು. ಮಾತನಾಡುತ್ತಿದ್ದ ಧ್ವನಿ ತಾನು ಕ್ಯಾಮೆರಾ ಎಂದು ಹೇಳಿಕೊಂಡಿತು. ಈ ಮೂಲಕ ಮನೆಯವರೆಲ್ಲರಿಗೂ ಸರ್​ಪ್ರೈಸ್​ ನೀಡಿತು.

ನಾನು ಕಣ್ಮಣಿ. ನಿಮ್ಮನ್ನು 24 ಗಂಟೆಯೂ ನೋಡುತ್ತಲೇ ಇರುತ್ತೇನೆ. ನಿಮ್ಮನ್ನು ನೋಡೋಕೆ ಆರಂಭಿಸಿ 62 ದಿನ ಪೂರ್ಣಗೊಂಡಿದೆ. ನೀವು ಬೆಡ್​ರೂಂನಲ್ಲಿ ಪಿಸುಗುಟ್ಟಿದ್ದು, ಒಬ್ಬನೇ ಬೈದುಕೊಂಡಿದ್ದು ಎಲ್ಲವೂ ನನಗೆ ಕೇಳಿದೆ ಎಂದು ಮಾತು ಆರಂಭಿಸಿತು ಕಣ್ಮಣಿ.

ಕಣ್ಮಣಿ ತುಂಬಾನೇ ಚೂಟಿ. ಚಕ್ರವರ್ತಿ ಚಂದ್ರಚೂಡ್​ ಸೈಕಲಾಜಿಕಲಿ ಮಾತನಾಡೋಕೆ ಮುಂದಾದಾಗ ನಾನು ರೋಬಾಟ್​. ನಿಮ್ಮ ಸೈಕಾಲಜಿ ನಮ್ಮಲ್ಲಿ ವರ್ಕ್​ ಆಗುವುದಿಲ್ಲ ಎಂದಿತು. ಕಣ್ಮಣಿಯ ಮುದ್ದಾದ ಮಾತನ್ನು ಕೇಳಿ ಮನೆ ಮಂದಿ ಫಿದಾ ಆಗಿದ್ದಾರೆ. ಇನ್ನು, ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ನೀವು ಯಾರು ಎಂಬುದನ್ನು ಪತ್ತೆ ಮಾಡುತ್ತೇನೆ ಎಂದು ಚಕ್ರವರ್ತಿ ಶಪಥ ಮಾಡಿದ್ದಾರೆ.

ಶಮಂತ್​ ಬಿಗ್​ ಬಾಸ್​ ಮನೆಯಲ್ಲಿ ಹುಡುಗಿಯರನ್ನು ಬೀಳಿಸಿಕೊಳ್ಳೋಕೆ ಎಲ್ಲಿಲ್ಲದ ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಕೊನೆಗೆ ಆ ಪ್ರಯತ್ನವನ್ನೇ ಅವರು ಕೈಬಿಟ್ಟರು. ಈಗ ಕಣ್ಮಣಿ ಹೆಸರಲ್ಲಿ ಬಿಗ್​ ಬಾಸ್ ಮಂದಿ ಶಮಂತ್​ಗೆ ಕಾಲೆಳೆಯುತ್ತಿದ್ದಾರೆ. ಕಣ್ಮಣಿಯನ್ನು ಶಮಂತ್​ ‘ಹೇಳು ಡಾರ್ಲಿಂಗ್​’ ಎಂದೇ ಸಂಬೋಧಿಸುತ್ತಿದ್ದಾರೆ.

ಇದನ್ನೂ ಒದಿ: ಇಂದು ನಡೆಯಬೇಕಿದ್ದ ಬಿಗ್​ಬಾಸ್​ ವಾರಾಂತ್ಯದ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು!

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ