ಅಮಿತಾಭ್​ ಫ್ಲಾಪ್​ ಹೀರೋ ಎಂದು ನಾಯಕಿಯರು ದೂರ ಸರಿದಾಗ ಮುಂದೆ ಬಂದಿದ್ದು ಜಯಾ ಬಚ್ಚನ್​; ಅಲ್ಲಿಂದ ಶುರುವಾಯ್ತು ಪ್ರೇಮ ಕಹಾನಿ

ಅಮಿತಾಭ್​ ಫ್ಲಾಪ್​ ಹೀರೋ ಎಂದು ನಾಯಕಿಯರು ದೂರ ಸರಿದಾಗ ಮುಂದೆ ಬಂದಿದ್ದು ಜಯಾ ಬಚ್ಚನ್​; ಅಲ್ಲಿಂದ ಶುರುವಾಯ್ತು ಪ್ರೇಮ ಕಹಾನಿ
ಅಮಿತಾಭ್​ ಬಚ್ಚನ್​ -ಜಯಾ ಬಚ್ಚನ್​

ಮಾಡರ್ನ್​ ಹಾಗೂ ಟ್ರೆಡಿಷನಲ್​ ಅವತಾರ ತಾಳುವ ಹುಡುಗಿ ಎಂದರೆ ಅಮಿತಾಭ್​ಗೆ ಇಷ್ಟವಾಗಿತ್ತಂತೆ. ಮ್ಯಾಗಜಿನ್​ ಕವರ್​ ಫೋಟೋದಲ್ಲಿ ಜಯಾ ಅವರನ್ನು ನೋಡಿದಾಗ ‘ಇವಳು ನಾನು ಅಂದುಕೊಂಡ ರೀತಿಯಲ್ಲೇ ಇದ್ದಾಳೆ’ ಎಂದುಕೊಂಡಿದ್ದರಂತೆ.

Rajesh Duggumane

| Edited By: Madan Kumar

Jun 03, 2021 | 7:22 AM

ಅಮಿತಾಭ್​ ಬಚ್ಚನ್​ ಹಾಗೂ ಪತ್ನಿ ಜಯಾ ಬಚ್ಚನ್​ ಜೋಡಿಗೆ ಇಂದು 48ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಅನೇಕರಿಗೆ ಇವರ ದಾಂಪತ್ಯ ಮಾದರಿಯಾಗಿದೆ. ಇವರ ಹೊಂದಾಣಿಕೆ ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಿದೆ. ವಿಶೇಷ ಎಂದರೆ ಅಮಿತಾಭ್​ ಹಾಗೂ ಜಯಾ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು 1973ರ ಜೂನ್​ 3ರಂದು ಮದುವೆ ಆಗಿದ್ದರು.

ಮಾಡರ್ನ್​ ಹಾಗೂ ಟ್ರೆಡಿಷನಲ್​ ಅವತಾರ ತಾಳುವ ಹುಡುಗಿ ಎಂದರೆ ಅಮಿತಾಭ್​ಗೆ ಇಷ್ಟವಾಗಿತ್ತಂತೆ. ಮ್ಯಾಗಜಿನ್​ ಕವರ್​ ಫೋಟೋದಲ್ಲಿ ಜಯಾ ಅವರನ್ನು ನೋಡಿದಾಗ ‘ಇವಳು ನಾನು ಅಂದುಕೊಂಡ ರೀತಿಯಲ್ಲೇ ಇದ್ದಾಳೆ’ ಎಂದುಕೊಂಡಿದ್ದರಂತೆ. ಜಯಾ ಅವರ ಕಣ್ಣುಗಳು ಅಮಿತಾಭ್​ಗೆ ತುಂಬಾನೇ ಇಷ್ಟವಾಗಿದ್ದವಂತೆ. ಅವರ ಜತೆಯೇ ನಟಿಸೋಕೆ ಅವಕಾಶ ಸಿಕ್ಕಾಗ ಅಮಿತಾಭ್​ ಸಾಕಷ್ಟು ಖುಷಿಪಟ್ಟಿದ್ದರು.

ಆರಂಭದಲ್ಲಿ, ಅಮಿತಾಭ್​ ಓರ್ವ ಫ್ಲಾಪ್​ ಹೀರೋ ಎನ್ನುವ ಕಾರಣಕ್ಕೆ ಅವರ ಜತೆ ನಟಿಸೋಕೆ ನಾಯಕಿಯರು ಹಿಂದೇಟು ಹಾಕುತ್ತಿದ್ದರು. ಆ ಸಮಯದಲ್ಲೂ ಅಮಿತಾಭ್​ ಜತೆ ನಟಿಸೋಕೆ ಜಯಾ ಒಪ್ಪಿದ್ದರು. ಈ ಮೂಲಕ ಜಯಾ ಹಾಗೂ ಅಮಿತಾಭ್ ಪ್ರಯಾಣ ಆರಂಭವಾಯಿತು. ಅಮಿತಾಭ್​ ಹಾಗೂ ಜಯಾ ಮೊದಲ ಬಾರಿಗೆ ಭೇಟಿ ಮಾಡಿದ್ದು ಬನ್ಸಿ ಬಿರ್ಜು (1972) ಚಿತ್ರದ ಸೆಟ್​ನಲ್ಲಿ. ಈ ಸಿನಿಮಾದಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ತೆರೆಕಂಡ ಮರುವರ್ಷವೆ ‘ಜಂಜೀರ್’​ ಚಿತ್ರದಲ್ಲೂ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದರು.

ಜಂಜೀರ್​ ಸಿನಿಮಾದಲ್ಲಿ ಅಮಿತಾಭ್​ ಹಾಗೂ ಜಯಾ ಹತ್ತಿರವಾದರು. ಈ ಚಿತ್ರ ಹಿಟ್​ ಆದರೆ ಜಯಾ ಅವರನ್ನು ಲಂಡನ್​ಗೆ ಕರೆದುಕೊಂಡು ಹೋಗಿ ಸೆಲೆಬ್ರೇಟ್​ ಮಾಡಬೇಕು ಎನ್ನುವ ಕನಸನ್ನು ಅಮಿತಾಭ್​ ಕಂಡಿದ್ದರು. ಈ ವಿಚಾರ ಅಮಿತಾಭ್​ ತಂದೆ ಹರಿವಂಶ್​ ರೈ ಬಚನ್​ಗೆ ತಿಳಿಯಿತು. ಆಗ ಅವರು ಹೇಳಿದ್ದು ಒಂದೇ ಮಾತು. ‘ನೀವು ವಿದೇಶಕ್ಕೆ ಹೋಗುವುದಾದರೆ ಮೊದಲು ಮದುವೆ ಆಗಿ. ಆ ನಂತರ ವಿದೇಶಕ್ಕೆ ಹೋಗೋಕೆ ನನ್ನ ಅಭ್ಯಂತರವಿಲ್ಲ’ ಎಂದಿದ್ದರು.

ಅಂತೆಯೇ 1973ರಲ್ಲಿ ಅಮಿತಾಭ್​-ಜಯಾ ಮದುವೆ ಆದರು. ನಂತರ ಜಯಾ ಹಾಗೂ ಅಮಿತಾಭ್​ ಅಭಿಮಾನ್​, ಚುಪ್​ಚುಪ್​ಕೆ, ಶೋಲೆ, ಕಭಿ ಖುಷಿ ಕಭಿ ಗಂ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು.

ಇದನ್ನೂ ಓದಿ: 2 ಕೋಟಿ ರೂ. ದೇಣಿಗೆ ನೀಡಿ, ಮಕ್ಕಳ ದತ್ತು ಪಡೆದು, ನೂರಾರು ರೈತರ ಸಾಲ ತೀರಿಸಿದ ಅಮಿತಾಭ್​ಗೆ ಯಾಕಿಷ್ಟು ಕೆಟ್ಟ ಕಮೆಂಟ್​?

‘ನಾನು ದೇಣಿಗೆ ಕೇಳಲ್ಲ, ಕೊಡ್ತೀನಿ’; ಬೇರೆ ಸ್ಟಾರ್​ಗಳಿಗಿಂತ ಭಿನ್ನ ಹೆಜ್ಜೆ ಇಟ್ಟ ಅಮಿತಾಭ್​

Follow us on

Related Stories

Most Read Stories

Click on your DTH Provider to Add TV9 Kannada