Anushka Sharma: ಲಾರ್ಡ್ಸ್​ನಲ್ಲಿ ಭರ್ಜರಿ ಜಯದ ಬೆನ್ನಲ್ಲೇ ವಿಜಯದ ಭೋಜನ ಸವಿದ ವಿರುಷ್ಕಾ!

Virat Kohli: ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ಜಯದ ಬೆನ್ನಲ್ಲೇ ವಿರಾಟ್- ಅನುಷ್ಕಾ ಜೋಡಿ ಲಂಡನ್​ನ ಖ್ಯಾತ ರೆಸ್ಟೊರೆಂಟ್ ಒಂದಕ್ಕೆ ಡಿನ್ನರ್ ಡೇಟ್​ಗೆ ತೆರಳಿದೆ. ಈ ತಾರೆಯರ ಚಿತ್ರಗಳು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿವೆ.

Anushka Sharma: ಲಾರ್ಡ್ಸ್​ನಲ್ಲಿ ಭರ್ಜರಿ ಜಯದ ಬೆನ್ನಲ್ಲೇ ವಿಜಯದ ಭೋಜನ ಸವಿದ ವಿರುಷ್ಕಾ!
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಹಾಗೂ ಟೆಂಡ್ರಿಲ್ ಹೊಟೆಲ್​ನ ಮುಖ್ಯ ಬಾಣಸಿಗ ರಿಶಿಮ್ ಸಚ್ದೇವ
Follow us
TV9 Web
| Updated By: Digi Tech Desk

Updated on:Aug 19, 2021 | 11:58 AM

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯವಾದ ಲಾರ್ಡ್ಸ್ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಈ ಸಂತಸಕ್ಕೆ ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಜೋಡಿಯು ಲಂಡನ್​ನಲ್ಲಿ ವಿಜಯದ ಭೋಜನ ಸವಿದಿದೆ. ಅಭಿಮಾನಿಗಳಿಂದ ವಿರುಷ್ಕಾ ಎಂದು ಕರೆಯಲ್ಪಡುವ ಈ ಜೋಡಿಯ ಔತಣದ ಫೊಟೊಗಳು ನೆಟ್ಟಿಗರ ಮನಗೆದ್ದಿದ್ದು, ವೈರಲ್ ಆಗಿವೆ.

ಲಂಡನ್​ನ ಟೆಂಡ್ರಿಲ್ ರೆಸ್ಟೊರೆಂಟ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಸಂಪೂರ್ಣ ಸಸ್ಯಾಹಾರಿ (ವೇಗನ್) ಮಾದರಿಯ ಭೋಜನ ಸವಿದಿದ್ದಾರೆ. ನಂತರ ಟೆಂಡ್ರಿಲ್ ರೆಸ್ಟೊರೆಂಟ್​ನ ಮುಖ್ಯ ಬಾಣಸಿಗ ರಿಶಿಮ್ ಸಚ್ದೇವ ಅವರೊಂದಿಗೆ ಫೊಟೊಗೆ ಭರ್ಜರಿ ಪೋಸನ್ನೂ ವಿರುಷ್ಕಾ ನೀಡಿದ್ದು, ರೆಸ್ಟೊರೆಂಟ್​ನ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ‘ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನಮ್ಮ ಹೋಟೆಲ್​ಗೆ ಭೇಟಿ ನೀಡಿ ಔತಣ ಸವಿದು, ಸಂತಸಪಟ್ಟರು’ ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದ ಮೂಲಕ ಟೆಂಡ್ರಿಲ್ ರೆಸ್ಟೊರೆಂಟ್ ಚಿತ್ರಗಳನ್ನು ಅಪ್​ಲೋಡ್ ಮಾಡಿದೆ.

ಟೆಂಡ್ರಿಲ್ ರೆಸ್ಟೊರೆಂಟ್ ಹಂಚಿಕೊಂಡ ಚಿತ್ರ:

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮತ್ತೊಂದು ಚಿತ್ರದಲ್ಲಿ ವಿರುಷ್ಕಾ ರೆಸ್ಟೊರೆಂಟ್​ನ ಇತರ ಸಿಬ್ಬಂದಿ ವರ್ಗದವರೊಂದಿಗೆ ಫೊಟೊಗೆ ಪೋಸ್ ಕೊಟ್ಟಿದ್ದಾರೆ. ಅನುಷ್ಕಾ ಶರ್ಮಾ ಕೂಡಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ತಾನು ಸವಿದ ಅತ್ಯುತ್ತಮ ಸಸ್ಯಾಹಾರಿ ಆಹಾರವಿದು ಎಂದು ಬರೆದುಕೊಂಡಿದ್ದಾರೆ.

Anushka

ಅನುಷ್ಕಾ ಶರ್ಮ ಹಂಚಿಕೊಂಡ ಚಿತ್ರ

ಅನುಷ್ಕಾ ಶರ್ಮಾ ತಮ್ಮ ಮಗಳು ವಮಿಕಾಳೊಂದಿಗೆ ವಿರಾಟ್ ಕೊಹ್ಲಿಯ ಇಂಗ್ಲೆಂಡ್ ಪ್ರವಾಸದಲ್ಲಿ ಜೊತೆಗೆ ತೆರಳಿದ್ದಾರೆ. ವಿರುಷ್ಕಾ ಜೋಡಿ ಲಂಡನ್​ನಲ್ಲಿ ಸುತ್ತಾಡುತ್ತಿರುವ ಚಿತ್ರಗಳನ್ನು ಆಗಾಗ ಹಂಚಿಕೊಂಡಿದ್ದರು. ಲಾರ್ಡ್ಸ್ ಟೆಸ್ಟ್​ನಲ್ಲಿ ಭಾರತ ಗೆದ್ದಾಗ ಅನುಷ್ಕಾ ಶರ್ಮಾ ಫೊಟೊಗಳನ್ನು ಹಂಚಿಕೊಂಡು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಆ ಫೊಟೊದಲ್ಲಿ ‘ಎಂತಹ ತಂಡವಿದು! ಎಂತಹ ಜಯವಿದು!’ ಎಂದು ಅವರು ಬರೆದುಕೊಂಡಿದ್ದರು. ಲಾರ್ಡ್ಸ್​​ನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ ಭಾರತ 151 ರನ್​ಗಳ ಐತಿಹಾಸಿಕ ಜಯ ದಾಖಲಿಸಿತ್ತು.

Virat Anushka

ರೆಸ್ಟೊರೆಂಟ್​ನ ಇತರ ಉದ್ಯೋಗಿಗಳೊಂದಿಗೆ ವಿರುಷ್ಕಾ ಪೋಸ್

ಅನುಷ್ಕಾ ವೃತ್ತಿ ಜೀವನದ ವಿಷಯಕ್ಕೆ ಬಂದರೆ ಅವರು ನಟನೆಯಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳದಿದ್ದರೂ ನಿರ್ಮಾಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ನಿಧನರಾದ ನಟ ಇರ್ಫಾನ್​ ಖಾನ್​ರ ಪುತ್ರ ಬಬಿಲ್ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ‘ಕಾಲ’ವನ್ನು ಅನುಷ್ಕಾ ನಿರ್ಮಿಸುತ್ತಿದ್ದಾರೆ. ಅವರ ನಿರ್ಮಾಣದ ವೆಬ್ ಸಿರೀಸ್ ‘ಪಾತಾಳ್ ಲೋಕ್’ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿತ್ತು. ಹಾಗೆಯೇ ನೆಟ್​ಫ್ಲಿಕ್ಸ್​ನಲ್ಲಿ ತೆರೆಕಂಡ ‘ಬುಲ್​ಬುಲ್’ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಅನುಷ್ಕಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದು 2018ರಲ್ಲೇ ಕೊನೆ. ಶಾರುಖ್ ಖಾನ್ ನಟನೆಯ ಜೀರೊ ಚಿತ್ರದಲ್ಲಿ ಅನುಷ್ಕಾ ಬಣ್ಣಹಚ್ಚಿದ್ದನ್ನು ಹೊರತು ಪಡಿಸಿ ನಂತರ ಅನುಷ್ಕಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ:

‘ಮಹಾನಾಯಕ ಡಾ. ಬಿ.ಆರ್​. ಅಂಬೇಡ್ಕರ್​’ ಧಾರಾವಾಹಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ; ಹೊಸ ಯುಗ ಶುರು

‘ಅಮ್ಮನಷ್ಟು ವಯಸ್ಸಾಗಿದೆ, ಆದ್ರೂ ಬುದ್ಧಿ ಇಲ್ಲ’; ಶಮಿತಾ ಶೆಟ್ಟಿಗೆ ಬಿಗ್​ ಬಾಸ್​ನಲ್ಲಿ ಚುಚ್ಚು ಮಾತು: ಶಿಲ್ಪಾ ತಂಗಿಗೆ ವಯಸ್ಸೆಷ್ಟು?

(After Lords Test win Virat Anushka went to Restaurant for dinner date)

Published On - 10:15 am, Thu, 19 August 21

ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ