ಕರೀನಾ ಕಪೂರ್ಗೆ ಬಾಡಿಗೆ ತಾಯ್ತನದ ಆಲೋಚನೆ; ಅಚ್ಚರಿಯ ವಿಚಾರ ಬಿಚ್ಚಿಟ್ಟ ನಟಿ
ತೈಮೂರ್ ಅಲಿ ಖಾನ್ ಜನಿಸಿದ ನಾಲ್ಕು ವರ್ಷಗಳ ನಂತರದಲ್ಲಿ ಕರೀನಾಗೆ ಮತ್ತೊಂದು ಮಗು ಜನಿಸಿದೆ. ಫೆಬ್ರವರಿ ತಿಂಗಳಲ್ಲಿ ಹೊಸ ಸದಸ್ಯನ ಆಗಮನ ಆಗಿತ್ತು.
ವಿಜ್ಞಾನ ಹಾಗೂ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಭೂಮಿಯ ಅಂತರಾಳದಿಂದ ಹಿಡಿದು, ಆಗಸದ ತುದಿಗೆ ಮಾನವ ಅಧ್ಯಯನ ನಡೆಸುತ್ತಿದ್ದಾನೆ. ಇದರ ಜತೆಗೆ ಮಗುವನ್ನು ಪಡೆಯುವ ವಿಚಾರದಲ್ಲೂ ಮನುಷ್ಯ ಒಂದಷ್ಟು ಅಧ್ಯಯನ ನಡೆಸಿದ್ದಾನೆ. ಅದರಲ್ಲಿ ಬಾಡಿಗೆ ತಾಯ್ತನ ಕೂಡ ಒಂದು. ಈ ಬಗ್ಗೆ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಚರ್ಚೆ ನಡೆಸಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ತೈಮೂರ್ ಅಲಿ ಖಾನ್ ಜನಿಸಿದ ನಾಲ್ಕು ವರ್ಷಗಳ ನಂತರದಲ್ಲಿ ಕರೀನಾಗೆ ಮತ್ತೊಂದು ಮಗು ಜನಿಸಿದೆ. ಫೆಬ್ರವರಿ ತಿಂಗಳಲ್ಲಿ ಹೊಸ ಸದಸ್ಯನ ಆಗಮನ ಆಗಿತ್ತು. ಇದಕ್ಕೂ ಮೊದಲು ಸೈಫ್ ಹಾಗೂ ಕರೀನಾ ಬಾಡಿಗೆ ತಾಯ್ತನದ ಬಗ್ಗೆ ಆಲೋಚನೆ ಮಾಡಿದ್ದರಂತೆ.
‘ನಾನು ಹಾಗೂ ಸೈಫ್ ಇಬ್ಬರೂ ಬಾಡಿಗೆ ತಾಯ್ತನದ ಬಗ್ಗೆ ಮಾತುಕತೆ ನಡೆಸಿದ್ದೆವು. ನಾರ್ಮಲ್ ಆಗಿ ಮಗುವನ್ನು ಪಡೆಯುವ ಪ್ರಯತ್ನ ಮಾಡೋಣ, ಆಗದಿದ್ದರೆ ಬಾಡಿಗೆ ತಾಯ್ತನದ ಬಗ್ಗೆ ಆಲೋಚಿಸೋಣ ಎಂದು ನಾವಿಬ್ಬರೂ ನಿರ್ಧರಿಸಿದ್ದೆವು. ಆದರೆ, ದೇವರ ದಯೆಯಿಂದ ಮಗುವಾಗಿದೆ. ಬಾಡಿಗೆ ತಾಯ್ತನ ಅನ್ನೋದು ನಮ್ಮ ಎರಡನೇ ಆಯ್ಕೆ ಆಗಿತ್ತು’ ಎಂದಿದ್ದಾರೆ ಅವರು.
‘ನಾನು ಸೈಫ್ ಮದುವೆ ಆದ ನಂತರದಲ್ಲಿ ನನ್ನ ಕರಿಯರ್ ಅಂತ್ಯಗೊಂಡಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮದುವೆ ನಂತರವೂ ವೃತ್ತಿಜೀವನಕ್ಕೆ ಧಕ್ಕೆ ಆಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನಾನು ಮದುವೆ ಆದಾಗ ನನಗೆ ಅವಕಾಶ ಸಿಗುವುದಿಲ್ಲ ಎಂದುಕೊಂಡಿದ್ದರು. ಆದರೆ, ಈಗ ಅದು ಸುಳ್ಳು ಎಂಬುದು ಸಾಬೀತಾಗಿದೆ ಎಂದಿದ್ದಾರೆ’ ಕರೀನಾ.
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮೊದಲ ಮಗುವಿಗೆ ತೈಮೂರ್ ಅಲಿ ಖಾನ್ ಎಂದು ನಾಮಕರಣ ಮಾಡಿದ್ದು ಬಹಳ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಅನೇಕರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಈಗ ಸೈಫ್-ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ನಾಮಕರಣ ಮಾಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: Kareena Kapoor: ಸೀತೆಯ ಪಾತ್ರಕ್ಕೆ 12 ಕೋಟಿ ಸಂಭಾವನೆ ಕೇಳಿದ ಸುದ್ದಿಗೆ ತಲೆ ಅಲ್ಲಾಡಿಸಿದ ಕರೀನಾ; ಏನಿದರ ಅರ್ಥ?
Published On - 8:05 pm, Wed, 18 August 21