ಕಂಗನಾಗೆ ಇನ್​ಸ್ಟಾಗ್ರಾಮ್​ಗೆ ಚೀನಾ ಹ್ಯಾಕರ್ಸ್​ ಕಾಟ; ತಾಲಿಬಾನ್​ ಪೋಸ್ಟ್​ಗಳು ಡಿಲೀಟ್ ​

ನಟಿ ಕಂಗನಾ ರಣಾವತ್​ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ನಟನೆ ಜತೆಗೆ ನಿರ್ದೇಶನದಲ್ಲೂ ಅವರು ಬ್ಯುಸಿ. ಈ ಮಧ್ಯೆ ಸಾಕಷ್ಟು ಸಿನಿಮಾ ಆಫರ್​ಗಳು ಅವರ ಕೈಯಲ್ಲಿವೆ.

ಕಂಗನಾಗೆ ಇನ್​ಸ್ಟಾಗ್ರಾಮ್​ಗೆ ಚೀನಾ ಹ್ಯಾಕರ್ಸ್​ ಕಾಟ; ತಾಲಿಬಾನ್​ ಪೋಸ್ಟ್​ಗಳು ಡಿಲೀಟ್ ​
ಕಂಗನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 18, 2021 | 4:51 PM

ಟ್ವಿಟರ್​ ನೀತಿಗಳನ್ನು ಪಾಲಿಸದ ಆರೋಪದ ಮೇಲೆ ಕಂಗನಾ ರಣಾವತ್​ ಟ್ವಿಟರ್​ ಖಾತೆಯನ್ನು ರದ್ದುಗೊಳಿಸಲಾಗಿದೆ. ಈ ಬೆನ್ನಲ್ಲೇ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿಯೇ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈಗ ಅವರ ಇನ್​ಸ್ಟಾಗ್ರಾಮ್​ಗೂ ಕುತ್ತು ಬಂದಿದೆ. ಈ ಬಗ್ಗೆ ಅವರು ಸೋಶೀಯಲ್​ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.

‘ನಿನ್ನೆ ರಾತ್ರಿ ಚೀನಾದಿಂದ ನನ್ನ ಖಾತೆಗೆ ಲಾಗಿನ್​ ಆಗಲು ಯಾರೋ ಪ್ರಯತ್ನಿಸಿದ್ದಾರೆ ಎನ್ನುವ ಅಲರ್ಟ್​ ಬಂತು. ಇದಾದ ನಂತರ ಆ ಮೆಸೇಜ್​ ಮಾಯವಾಯಿತು. ನಾನು ಪೋಸ್ಟ್​ ಮಾಡಿದ್ದ ತಾಲಿಬಾನ್​ಗೆ ಸಂಬಂಧಿಸಿದ ಎಲ್ಲಾ ಸ್ಟೋರಿಗಳು ಮುಂಜಾನೆ ವೇಳೆಗೆ ಕಾಣೆಯಾಗಿದ್ದವು. ನಾನು ಇನ್​ಸ್ಟಾಗ್ರಾಮ್​​ ಅವರ ಜತೆ ಮಾತನಾಡಿದ ನಂತರವೇ ನನ್ನ ಖಾತೆಗೆ ಲಾಗಿನ್​ ಆಗೋಕೆ ಸಾಧ್ಯವಾಯಿತು. ನಾನು ಏನಾದರೂ ಬರೆಯೋಕೆ ಹೋದರೆ ಲಾಗ್​ಔಟ್​ ಆಗುತ್ತಿದೆ. ಇದು ದೊಡ್ಡ ಅಂತಾರಾಷ್ಟ್ರೀಯ ಪಿತೂರಿ’ ಎಂದು ಅವರು ದೂರಿದ್ದಾರೆ.

ನಟಿ ಕಂಗನಾ ರಣಾವತ್​ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ನಟನೆ ಜತೆಗೆ ನಿರ್ದೇಶನದಲ್ಲೂ ಅವರು ಬ್ಯುಸಿ. ಈ ಮಧ್ಯೆ ಸಾಕಷ್ಟು ಸಿನಿಮಾ ಆಫರ್​ಗಳು ಅವರ ಕೈಯಲ್ಲಿವೆ. ಹಲವು ಸ್ಕ್ರಿಪ್ಟ್​ಗಳನ್ನು ಕಂಗನಾ ಕೇಳುತ್ತಿದ್ದಾರೆ. ಈ ಮಧ್ಯೆ ಕಂಗನಾಗೆ ಹಾಲಿವುಡ್​ನಿಂದ ಆಫರ್ ಬರುವ ಸೂಚನೆ ಸಿಕ್ಕಿತ್ತು. ಈ ಎಲ್ಲಾ ಬೆಳವಣಿಗೆ ಮಧ್ಯೆಯೇ ಕಂಗನಾ ಇನ್​ಸ್ಟಾಗ್ರಾಮ್​ ಖಾತೆ ಸಂಕಷ್ಟಕ್ಕೆ ಸಿಲುಕಿದೆ.

ಕಂಗನಾ, ‘ಥಲೈವಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕೆಲಸ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ರಿಲೀಸ್​ಗೆ ರೆಡಿ ಇದೆ. ಕೊವಿಡ್​ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗಿದೆ. ಇದಲ್ಲದೆ, ಧಾಕಡ್​ ಹಾಗೂ ತೇಜಸ್​ ಸಿನಿಮಾಗಳು ಅವರ ಕೈಯಲ್ಲಿವೆ. ಕಂಗನಾ ರಣಾವತ್​ ಅವರ ಟ್ವಿಟರ್​ ಖಾತೆಯನ್ನು ಟ್ಟಿಟರ್ ಬ್ಲಾಕ್​ ಮಾಡಿದೆ. ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಟ್ವೀಟ್​ ಮಾಡಲಾಗುತ್ತಿದೆ ಎನ್ನುವ ಕಾರಣಕ್ಕೆ ಟ್ವಿಟರ್​ ಈ ನಿರ್ಧಾರಕ್ಕೆ ಬಂದಿತ್ತು.

ಇದನ್ನೂ ಓದಿ: Kangana Ranaut: ನಟಿ ಕಂಗನಾರ ಹಾಟ್ ಫೊಟೊಸ್ ವೈರಲ್ ಆದ ಬೆನ್ನಲ್ಲೇ ಡಿನ್ನರ್ ಡೇಟ್ ಚಿತ್ರಗಳೂ ವೈರಲ್!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ