AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut: ನಟಿ ಕಂಗನಾರ ಹಾಟ್ ಫೊಟೊಸ್ ವೈರಲ್ ಆದ ಬೆನ್ನಲ್ಲೇ ಡಿನ್ನರ್ ಡೇಟ್ ಚಿತ್ರಗಳೂ ವೈರಲ್!

ಬಾಲಿವುಡ್ ನಟಿ ಕಂಗನಾ ರಾನೌತ್ ಚಿತ್ರೀಕರಣಕ್ಕಾಗಿ ಬುಡಾಪೆಸ್ಟ್​ಗೆ ತೆರಳಿದ್ದಾರೆ. ಅಲ್ಲಿ ತಮ್ಮ ಶೆಡ್ಯೂಲ್ ಮುಗಿಸಿರುವ ಅವರು ಚಿತ್ರತಂಡದೊಂದಿಗೆ ಔತಣ ಕೂಟದಲ್ಲಿ ಭಾಗಿಯಾಗಿದ್ದು, ಆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Kangana Ranaut: ನಟಿ ಕಂಗನಾರ ಹಾಟ್ ಫೊಟೊಸ್ ವೈರಲ್ ಆದ ಬೆನ್ನಲ್ಲೇ ಡಿನ್ನರ್ ಡೇಟ್ ಚಿತ್ರಗಳೂ ವೈರಲ್!
ಕಂಗನಾ ರಾನೌತ್ ಹಂಚಿಕೊಂಡಿರುವ ಚಿತ್ರ
TV9 Web
| Edited By: |

Updated on: Aug 15, 2021 | 3:26 PM

Share

ಬಾಲಿವುಡ್ ನಟಿ ಕಂಗನಾ ರಾನೌತ್ ಸದ್ಯ ಬುಡಾಪೆಸ್ಟ್​ನಲ್ಲಿದ್ದಾರೆ. ‘ಧಾಕಡ್’ ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ದ ಅವರು, ಶೆಡ್ಯೂಲ್ ಮುಗಿದ ಖುಷಿಗೆ ಚಿತ್ರತಂಡದೊಂದಿಗೆ ಔತಣ ಕೂಟ ನಡೆಸಿದ್ದಾರೆ. ಈ ಚಿತ್ರಗಳನ್ನು ಕಂಗನಾ ಹಂಚಿಕೊಂಡಿದ್ದು ವೈರಲ್ ಆಗಿದೆ. ಇತ್ತೀಚೆಗಷ್ಟೇ ಹಾಟ್ ಫೊಟೊಶೂಟ್ ಮಾಡಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಕಂಗನಾ, ಈಗ ಔತಣ ಕೂಟದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿವೆ.

ಕಂಗನಾ ಹಂಚಿಕೊಂಡ ಚಿತ್ರಗಳು:

ಬುಡಾಪೆಸ್ಟ್​ನಲ್ಲಿ ತಮ್ಮ ಸೋದರಳಿಯನೊಂದಿಗೆ ಆಟವಾಡುತ್ತಾ, ಖುಷಿಯಿಂದ ದಿನಗಳನ್ನು ಕಳೆಯುತ್ತಿರುವ ಕಂಗನಾ ಆ ಚಿತ್ರಗಳನ್ನೂ ಹಂಚಿಕೊಂಡಿದ್ದರು. ತಾನು ಸಾಮಾನ್ಯವಾಗಿ ನೀರಿನಲ್ಲಿ ಆಟವಾಡುವುದನ್ನು ಇಷ್ಟಪಡುವ ವ್ಯಕ್ತಿಯಲ್ಲ. ಆದರೆ ಇವನು ಆಟವಾಡುವುದನ್ನು ನೋಡಿದಾಗ ತನಗೆ ಬಹಳ ಖುಷಿಯಾಗುತ್ತಿದೆ. ಈ ಕ್ಷಣಗಳನ್ನು ಬಹಳ ಎಂಜಾಯ್ ಮಾಡುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದರು. ಆ ಪೋಸ್ಟ್ ಇಲ್ಲಿದೆ.

ಧಾಕಡ್ ಚಿತ್ರದಲ್ಲಿ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್ ಹಾಗೂ ದಿವ್ಯಾ ದತ್ತಾ ಕೂಡಾ ಬಣ್ಣ ಹಚ್ಚಿದ್ದಾರೆ. ಇದಲ್ಲದೇ ಕಂಗನಾ ಖಾತೆಯಲ್ಲಿ ತಲೈವಿ, ತೇಜಸ್, ಮಣಿಕರ್ಣಿಕಾ ರಿಟರ್ನ್ಸ್, ಎಮರ್ಜೆನ್ಸಿ ಮೊದಲಾದ ಚಿತ್ರಗಳಿವೆ.

ಇತ್ತೀಚೆಗಷ್ಟೇ ಕಂಗನಾ ಮಾಡಿಸಿಕೊಂಡಿದ್ದ ಫೊಟೊಶೂಟ್ ವೈರಲ್ ಆಗಿತ್ತು. ಕೆಲವರು ಕಂಗನಾರನ್ನು ಟೀಕಿಸಿದ್ದರೆ, ಮತ್ತೆ ಕೆಲವರು ಕಂಗನಾರ ಧೈರ್ಯವನ್ನೂ, ಫ್ಯಾಷನ್​ಅನ್ನು ಮೆಚ್ಚಿಕೊಂಡಿದ್ದರು. ಆದರೆ ಟೀಕೆಗಳಿಗೆ ಕಂಗನಾ ತಲೆಕೆಡಿಸಿಕೊಳ್ಳುವ ಜಾಯಮಾನದವರೇ ಅಲ್ಲ. ಅವರು ಮತ್ತಷ್ಟು ಸಕ್ರಿಯರಾಗಿ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

ಈ ಮೊದಲು ವೈರಲ್ ಆಗಿದ್ದ ಕಂಗಾನರ ಚಿತ್ರಗಳಿವು:

ಸದ್ಯ ಕಂಗನಾ ಅವರು ಇನ್ಸ್ಟಾಗ್ರಾಂನಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿದ್ದಾರೆ. ಈ ಮೊದಲು ಅವರು ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದರು. ಕೋಮು ಸೌಹಾರ್ದಕ್ಕೆ ಅವರ ಟ್ವೀಟ್​ಗಳು ಧಕ್ಕೆ ತಂದಿವೆ/ ತರುತ್ತವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ​ ಖಾತೆಯನ್ನು ಟ್ವಿಟರ್ ಬ್ಲಾಕ್ ಮಾಡಿತು. ಅದರ ನಂತರ ಕಂಗನಾ ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಕಂಗನಾ ಹಂಚಿಕೊಂಡ ಫೊಟೊಗಳಿಗೆ ವಿರೋಧವನ್ನೂ ಕೆಲವರು ವ್ಯಕ್ತಪಡಿಸಿದ್ದು, ನಿಮ್ಮಿಂದ ಇಂತಹ ಚಿತ್ರಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ:

ಶೀಘ್ರವೇ ಹಾಲಿವುಡ್​ಗೆ ಹಾರಲಿದ್ದಾರೆ ಕಂಗನಾ? ಬಾಲಿವುಡ್​ ಅಂಗಳದಲ್ಲಿ ಹೊಸ ಸುದ್ದಿ

‘ಇಂಡಿಯನ್​ ಐಡಲ್​ 12’ ಟ್ರೋಫಿ ಯಾರ ಪಾಲಿಗೆ? ಲೀಕ್​ ಆಯ್ತು ವಿನ್ನರ್​ ಫೋಟೋ

(Kangana Ranaut shares picture of Budapesh dinner date with Dhaakad team)

Follow Us
TV9 Web
TV9 Web

TV9 Kannada

Read More
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ