‘ಇಂಡಿಯನ್​ ಐಡಲ್​ 12’ ಟ್ರೋಫಿ ಯಾರ ಪಾಲಿಗೆ? ಲೀಕ್​ ಆಯ್ತು ವಿನ್ನರ್​ ಫೋಟೋ

Indian Idol 12 Winne: ಪವನ್​​ದೀಪ್​ ರಾಜನ್​ ಅರುಣಿತಾ ನಡುವೆ ಪ್ರೀತಿ ಇದೆ ಎಂಬ ರೀತಿಯಲ್ಲಿ ವಾಹಿನಿಯವರು ಬಿಂಬಿಸಿದ್ದರು. ಇದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

‘ಇಂಡಿಯನ್​ ಐಡಲ್​ 12’ ಟ್ರೋಫಿ ಯಾರ ಪಾಲಿಗೆ? ಲೀಕ್​ ಆಯ್ತು ವಿನ್ನರ್​ ಫೋಟೋ
‘ಇಂಡಿಯನ್​ ಐಡಲ್​ 12’ ಫಿನಾಲೆ ಯಾರ ಪಾಲಿಗೆ? ಲೀಕ್​ ಆಯ್ತು ವಿನ್ನರ್​ ಫೋಟೋ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 15, 2021 | 2:55 PM

ಹಲವು ಗಾಯಕರಿಗೆ ವೇದಿಕೆಯಾದ ‘ಇಂಡಿಯನ್​ ಐಡಲ್​ 12’ ಫಿನಾಲೆ ಶೂಟಿಂಗ್​ ಪೂರ್ಣಗೊಂಡಿದ್ದು, ಸೋನಿ ವಾಹಿನಿಯಲ್ಲಿ ಇಂದು (ಆಗಸ್ಟ್ 15) ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಬಾರಿ ವಿನ್​ ಆಗುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಅನೇಕರಲ್ಲಿದೆ. ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದು ವೈರಲ್​ ಆಗಿದೆ. ಈ ಫೋಟೋದಲ್ಲಿ ಪವನ್​​ದೀಪ್​ ರಾಜನ್​ ಅವರು ಇಂಡಿಯನ್​ ಐಡಲ್​ ಕಪ್​ ಹಾಗೂ ಚೆಕ್​ನೊಂದಿಗೆ ಪೋಸ್​ ಕೊಟ್ಟಿದ್ದು, ಅವರೇ ವಿನ್ನರ್​ ಎಂದು ಅನೇಕರು ಊಹಿಸುತ್ತಿದ್ದಾರೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ಶುಭಾಶಯವನ್ನೂ ಕೋರಿದ್ದಾರೆ.

ಪವನ್​ದೀಪ್​ ಅವರು ಮೊದಲ ದಿನದಿಂದಲೇ ಎಲ್ಲರ ಗಮನ ಸೆಳೆಯೋಕೆ ಯಶಸ್ವಿಯಾಗಿದ್ದರು. ಅದ್ಭುತ ಕಂಠದ ಮೂಲಕ ಜಡ್ಜ್​​ಗಳ ಗಮನ ಸೆಳೆದಿದ್ದರು ಪವನ್​​ದೀಪ್. ಗಿಟಾರ್​ ಅಥವಾ ಪಿಯಾನೋ ನುಡಿಸುತ್ತಲೇ ಹಾಡನ್ನು ಹಾಡುವ ಕಲೆ ಪವನ್​ದೀಪ್​ಗೆ ಕರಗತವಾಗಿದೆ.ಈ ಎಲ್ಲಾ ಕಾರಣಕ್ಕೆ ಅವರು ವೀಕ್ಷಕರಿಗೆ ಹಾಗೂ ಜಡ್ಜ್​ಗಳಿಗೆ ಇಷ್ಟವಾಗಿದ್ದಾರೆ. ಅಂತಿಮವಾಗಿ ಅವರು ಜಯಶಾಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.  ಚಂಡೀಗಢದಲ್ಲಿ ತಮ್ಮದೇ ಮ್ಯೂಸಿಕ್​ ಬ್ಯಾಂಡ್​ ಹೊಂದಿದ್ದಾರೆ ಪವನ್​ದೀಪ್​. ಕುಮಾನ್​ ವಿಶ್ವವಿದ್ಯಾಲಯದಲ್ಲಿ ಅವರು ಸಂಗೀತ ಪದವಿ ಪಡೆದಿದ್ದಾರೆ.

ಪವನ್​​ದೀಪ್​ ರಾಜನ್​ ಅರುಣಿತಾ ನಡುವೆ ಪ್ರೀತಿ ಇದೆ ಎಂಬ ರೀತಿಯಲ್ಲಿ ವಾಹಿನಿಯವರು ಬಿಂಬಿಸಿದ್ದರು. ಇದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಅನೇಕರು ಇದನ್ನು ಫ್ರೆಂಡ್​ಶಿಪ್​ ಅಷ್ಟೇ ಎಂದು ಈ ಜೋಡಿಗಳ ಪರವಾಗಿ ಮಾತನಾಡಿದ್ದರು. ಈ ಬಗ್ಗೆ ಪರ-ವಿರೋಧ ಚರ್ಚೆ ನಡೆದೇ ಇತ್ತು. ಸ್ಪರ್ಧಿಗಳನ್ನು, ನಿರೂಪಕರನ್ನು ಹಾಗೂ ಜಡ್ಜ್​ಗಳನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿತ್ತು.

ನಿಜಕ್ಕೂ ಪವನ್​ದೀಪ್​ ಟ್ರೋಫಿ ಎತ್ತಿದ್ದಾರಾ, ‘ಇಂಡಿಯನ್​ ಐಡಲ್​ 12’ ಫಿನಾಲೆ ಹೇಗಿತ್ತು? ಎಂಬಿತ್ಯಾದಿ ಪ್ರಶ್ನೆಗೆ ಇಂದು ರಾತ್ರಿ ಉತ್ತರ ಸಿಗಲಿದೆ. ಇಂದು (ಆಗಸ್ಟ್ 15) ಸೋನಿ ವಾಹಿನಿಯಲ್ಲಿ ಈ ರಿಯಾಲಿಟಿ ಶೋನ ಫಿನಾಲೆ ಪ್ರಸಾರವಾಗಲಿದೆ.

ಇದನ್ನೂ ಓದಿ: ‘ಇದು ಮೋಸದ ಎಲಿಮಿನೇಷನ್​’; ಇಂಡಿಯನ್​ ಐಡಲ್​ ಶೋ ಮೇಲೆ ಪ್ರೇಕ್ಷಕರ ಸಿಟ್ಟಿಗೆ ಇಲ್ಲಿದೆ ಕಾರಣ

Published On - 2:38 pm, Sun, 15 August 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್