AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಮೋಸದ ಎಲಿಮಿನೇಷನ್​’; ಇಂಡಿಯನ್​ ಐಡಲ್​ ಶೋ ಮೇಲೆ ಪ್ರೇಕ್ಷಕರ ಸಿಟ್ಟಿಗೆ ಇಲ್ಲಿದೆ ಕಾರಣ

Indian Idol 12 Elimination: ಇತ್ತೀಚಿನ ಎಪಿಸೋಡ್​ನಲ್ಲಿ ಆಶಾ ಭೋಸ್ಲೆ ಕೂಡ ತೀರ್ಪುಗಾರರಾಗಿ ಭಾಗವಹಿಸಿದ್ದರು. ಎಲ್ಲ ಸ್ಪರ್ಧಿಗಳು ಭರ್ಜರಿ ಪೈಪೋಟಿ ನೀಡಿದರು. ಆಶಿಷ್​ ಕುಲಕರ್ಣಿ ಮತ್ತು ಷಣ್ಮುಖಪ್ರಿಯಾ ಅವರು ಡೇಂಜರ್​ ಝೋನ್​ನಲ್ಲಿ ಇದ್ದರು.

‘ಇದು ಮೋಸದ ಎಲಿಮಿನೇಷನ್​’; ಇಂಡಿಯನ್​ ಐಡಲ್​ ಶೋ ಮೇಲೆ ಪ್ರೇಕ್ಷಕರ ಸಿಟ್ಟಿಗೆ ಇಲ್ಲಿದೆ ಕಾರಣ
‘ಇದು ಮೋಸದ ಎಲಿಮಿನೇಷನ್​’; ಇಂಡಿಯನ್​ ಐಡಲ್​ ಶೋ ಮೇಲೆ ಪ್ರೇಕ್ಷಕರ ಸಿಟ್ಟಿಗೆ ಇಲ್ಲಿದೆ ಕಾರಣ
TV9 Web
| Edited By: |

Updated on: Jul 12, 2021 | 1:15 PM

Share

ಹತ್ತು ಹಲವು ಕಾರಣಗಳಿಂದಾಗಿ ‘ಇಂಡಿಯನ್​ ಐಡಲ್​’ (Indian Idol 12) ರಿಯಾಲಿಟಿ ಶೋ ವಿವಾದಕ್ಕೆ ಒಳಗಾಗುತ್ತಿದೆ. ಇತ್ತೀಚೆಗೆ ನಡೆದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಗಾಯಕ ಆಶಿಷ್​ ಕುಲಕರ್ಣಿ (Ashish Kulkarni) ಅವರನ್ನು ಎಲಿಮಿನೇಟ್​ ಮಾಡಲಾಗಿದೆ. ಈ ಬಗ್ಗೆ ಪ್ರೇಕ್ಷಕರಿಗೆ ತೀವ್ರ ಬೇಸರ ಆಗಿದೆ. ಮತ್ತೋರ್ವ ಗಾಯಕಿ ಷಣ್ಮುಖಪ್ರಿಯಾ ಅವರು ಎಲಿಮಿನೇಷನ್​ನಿಂದ ಬಜಾವ್​ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇಂಡಿಯನ್​ ಐಡಲ್​ ಶೋನಲ್ಲಿ ಮೋಸದ ಎಲಿಮಿನೇಷನ್​ ನಡೆದಿದೆ ಎಂದು ನೆಟ್ಟಿಗರು ಟ್ವೀಟ್​ ಮಾಡುತ್ತಿದ್ದಾರೆ.

ಸ್ಪರ್ಧಿಗಳ ನಡುವೆ ಫೇಕ್​ ಲವ್​ ಸ್ಟೋರಿ ಸೃಷ್ಟಿಮಾಡಲಾಗಿದೆ, ಲೆಜೆಂಡರಿ ಗಾಯಕ ಕಿಶೋರ್​ ಕುಮಾರ್​ ಅವರ ಗೀತೆಗಳನ್ನು ಕೆಟ್ಟದಾಗಿ ಹಾಡಲಾಗಿದೆ, ಸ್ಪರ್ಧಿಗಳ ನಡುವೆ ಪಕ್ಷಪಾತ ಮಾಡಲಾಗಿದೆ, ಎಲ್ಲ ಎಪಿಸೋಡ್​ಗಳು ಸ್ಕ್ರಿಪ್ಟೆಡ್​ ಆಗಿವೆ ಎಂಬಿತ್ಯಾದಿ ಆರೋಪಗಳು ಇಂಡಿಯನ್​ ಐಡಲ್ ಶೋ ಮೇಲಿದೆ. ಈಗ ಆಶಿಷ್​ ಕುಲಕರ್ಣಿ ಎಲಿಮಿನೇಷನ್​ ಬಳಿಕ ಒಂದು ವರ್ಗದ ಪ್ರೇಕ್ಷಕರು ಈ ಶೋ ವಿರುದ್ಧ ಗುಡುಗಿದ್ದಾರೆ.

ಇತ್ತೀಚಿನ ಎಪಿಸೋಡ್​ನಲ್ಲಿ ಆಶಾ ಭೋಸ್ಲೆ ಕೂಡ ತೀರ್ಪುಗಾರರಾಗಿ ಭಾಗವಹಿಸಿದ್ದರು. ಎಲ್ಲ ಸ್ಪರ್ಧಿಗಳು ಭರ್ಜರಿ ಪೈಪೋಟಿ ನೀಡಿದರು. ಆಶಿಷ್​ ಕುಲಕರ್ಣಿ ಮತ್ತು ಷಣ್ಮುಖಪ್ರಿಯಾ ಅವರು ಡೇಂಜರ್​ ಝೋನ್​ನಲ್ಲಿ ಇದ್ದರು. ‘ದಿಲ್​ ದೇನಾ ಖೇಲ್​ ಹೈ ದಿಲ್​ದಾರ್​ ಕಾ..’ ಹಾಡನ್ನು ಆಶಿಷ್​ ಹಾಡಿದರು. ‘ದುನಿಯಾ ಮೇ ಲೋಗೋಂಕೋ..’ ಗೀತೆಯನ್ನು ಷಣ್ಮುಖಪ್ರಿಯಾ ಹಾಡಿದರು. ತೀರ್ಪುಗಾರರಿಗೆ ಇಬ್ಬರ ಗಾಯನ ಕೂಡ ಸಖತ್​ ಇಷ್ಟ ಆಯಿತು. ಅಂತಿಮವಾಗಿ ಒಬ್ಬರು ಎಲಿಮಿನೇಟ್​ ಆಗಲೇಬೇಕಿದ್ದರಿಂದ ಆಶಿಷ್​ ಕುಲಕರ್ಣಿ ಅವರು ಶೋನಿಂದ ಹೊರಬೀಳುವಂತಾಯಿತು.

ಆಶಿಷ್​ ಕುಲಕರ್ಣಿ ಅವರ ಎಲಿಮಿನೇಷನ್​ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವ ಅನೇಕರು ಇಂಡಿಯಲ್​ ಐಡಲ್​ ವಿರುದ್ಧ ಟ್ವೀಟ್​ ಮಾಡುತ್ತಿದ್ದಾರೆ. ‘ಷಣ್ಮುಖಪ್ರಿಯಾ ಅವರಿಗಿಂತ ಆಶಿಷ್​ ಕುಲಕರ್ಣಿ ಚೆನ್ನಾಗಿ ಹಾಡುತ್ತಾರೆ. ಆದರೂ ಕೂಡ ಷಣ್ಮುಖಪ್ರಿಯಾಗೆ ಝೋಂಬಿಗಳು ವೋಟ್​ ಮಾಡುತ್ತಿದ್ದಾವೆ. ನನ್ನ ಪ್ರಕಾರ ಆಶಿಷ್​ ಅವರು ಟಾಪ್​ 3 ಸ್ಪರ್ಧಿಗಳಲ್ಲಿ ಒಬ್ಬರಾಗಿರಬೇಕಿತ್ತು’ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ.

‘ದಿನದಿಂದ ದಿನಕ್ಕೆ ಈ ಶೋ ಹದಗೆಡುತ್ತಿದೆ. ಪಕ್ಷಪಾತವೇ ತುಂಬಿಹೋಗುತ್ತಿದೆ. ಆಶಿಷ್​ ಕುಲಕರ್ಣಿ ಅವರ ಎಲಿಮಿನೇಷನ್​ನಿಂದ ತೀವ್ರ ನಿರಾಸೆ ಆಗಿದೆ. ಅವರ ಬದಲು ಇನ್ನುಳಿದ ಮೂವರಲ್ಲಿ ಯಾರಾದರೂ ಎಲಿಮಿನೇಟ್​ ಆಗಬಹುದಿತ್ತು’ ಎಂದು ಕೆಲವರು ಟ್ವೀಟ್​ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ‘ಈ ಶೋ ಆಯೋಜಕರು ಮತ್ತು ತೀರ್ಪುಗಾರರು ಕಿವುಡರಾಗಿದ್ದಾರಾ? ಕುರುಡರಾಗಿದ್ದಾರಾ’ ಎಂಬ ಕಮೆಂಟ್​ ಕೂಡ ಬಂದಿದೆ.

ಇದನ್ನೂ ಓದಿ:

ಕೆಟ್ಟ ಗಾಯನ ಕೇಳಿ ಇಂಡಿಯನ್​ ಐಡಲ್​ ಶೋನಲ್ಲಿ ಕೆನ್ನೆಗೆ ಹೊಡೆದುಕೊಂಡಿದ್ದ ಜಡ್ಜ್​

ಬಡತನ, ಫೇಕ್​ ಲವ್​ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್​ ಐಡಲ್​ ವಿನ್ನರ್​ ಆರೋಪ

Follow Us
TV9 Web
TV9 Web

TV9 Kannada

Read More
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ