AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಕಡೆ ಉಮಾಪತಿ ಹೆಸರು ಕೇಳಿ ಬರುತ್ತಿದೆ, ನಾನು ಅವರ ವಿರುದ್ಧ ಆರೋಪ ಮಾಡುತ್ತಿಲ್ಲ; ನಟ ದರ್ಶನ್

ಆಕೆ ಬಂದ ತಕ್ಷಣ ಅರುಣ ಅವರು ಎಲ್ಲರ ಹೆಸರನ್ನು ಹೇಳಿದರು. ಆಗ ಒಂದು ರೀತಿ ನಂಬಿಕೆ ಬರುವಂತಿತ್ತು. ದಾಖಲೆ ಏನು ಇರಲಿಲ್ಲ ನನ್ನ ಆಧಾರ್ ಕಾರ್ಡ್ ಮಾತ್ರ ಕೊಟ್ಟರು. ನಿಮ್ಮ ಪ್ಯಾನ್ ಪೋರ್ಜರಿ ಆಗಿದೆ ಅಂತ ಹೇಳಿದ್ದರು ಅಂತ ದರ್ಶನ್ ತಿಳಿಸಿದರು.

ಎಲ್ಲ ಕಡೆ ಉಮಾಪತಿ ಹೆಸರು ಕೇಳಿ ಬರುತ್ತಿದೆ, ನಾನು ಅವರ ವಿರುದ್ಧ ಆರೋಪ ಮಾಡುತ್ತಿಲ್ಲ; ನಟ ದರ್ಶನ್
ದರ್ಶನ್​
TV9 Web
| Updated By: sandhya thejappa|

Updated on:Jul 12, 2021 | 2:13 PM

Share

ಮೈಸೂರು: ಚಾಲೆಂಜಿಂಗ್ ಸ್ಟಾರ್ ಹೆಸರಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದು ಎಲ್ಲರಿಗೂ ತಲೆ ಕೆಡುವ ವಿಚಾರ. ಜೂನ್ 16ಕ್ಕೆ ಉಮಾಪತಿ ಅರುಣಾ ಕುಮಾರಿಯನ್ನು ಮನೆಗೆ ಕರೆದುಕೊಂಡು ಬಂದರು. ಆಕೆ ಬಂದ ತಕ್ಷಣ ಅರುಣಾ ಅವರು ಎಲ್ಲರ ಹೆಸರನ್ನು ಹೇಳಿದರು. ಆಗ ಒಂದು ರೀತಿ ನಂಬಿಕೆ ಬರುವಂತಿತ್ತು. ದಾಖಲೆ ಏನು ಇರಲಿಲ್ಲ ನನ್ನ ಆಧಾರ್ ಕಾರ್ಡ್ ಮಾತ್ರ ಕೊಟ್ಟರು. ನಿಮ್ಮ ಪ್ಯಾನ್ ಪೋರ್ಜರಿ ಆಗಿದೆ ಅಂತ ಹೇಳಿದ್ದರು ಅಂತ ದರ್ಶನ್ ತಿಳಿಸಿದರು. ಹರ್ಷ ನನಗೆ ಬಹಳ ಹಳೆಯ ಪರಿಚಯ. ಜೂನ್ 1 ಉಮಾಪತಿಗೆ ಒಂದು ಕರೆ ಬಂದಿತ್ತು. 25 ಕೋಟಿ ರೂ.ಗೆ ಶ್ಯೂರಿಟಿ ಹಾಕುತ್ತೀರಾ ಎಂದು ಕರೆ ಮಾಡಿದ್ದರು. ಅರುಣಾ ಕುಮಾರಿಯನ್ನು ಉಮಾಪತಿ ಮನೆಗೆ ಕರೆದುಕೊಂಡು ಬಂದಿದ್ದರು. ಅರುಣಾ ಕುಮಾರಿ ಎಲ್ಲವನ್ನೂ ಬಹಳ ಚೆನ್ನಾಗಿ ಹೇಳಿದ್ರು. ಆದ್ರೆ ದಾಖಲೆಯಲ್ಲಿ ಏನೂ ಇರಲಿಲ್ಲ ಎಂದು ದರ್ಶನ್ ಹೇಳಿದರು.

ಮೊದಲು ನಾಗು ಅವರಿಗೆ ಫೋನ್ ಮಾಡಿದೆ. ಅವರು ರಾಕೇಶ್‌ಗೆ ಕಾನ್ಫರೆನ್ಸ್ ಕಾಲ್ ಹಾಕಿದ್ರು. ಅವರು ಇಲ್ಲ ಅಂತ ಹೇಳಿದರು. ಆಮೇಲೆ ಹರ್ಷ ಬಳಿ ಕೇಳಿದಾಗ ಅವರು ಇಲ್ಲ ಅಂತ ಹೇಳಿದರು. ಶರ್ಮಾ ಅವರು ಬ್ಯಾಂಕ್ ಅಲ್ಲಿ ಇರುವುದರಿಂದ ಅವರೇ ಲೋನ್ ಎಲ್ಲಾ ನೋಡುತ್ತಾರೆ. ಅರುಣಾ ಕುಮಾರಿಗೆ ರಾಕೇಶ್ ಪೋನ್ ನೀಡಿದೆ. ರಾಕೇಶ್‌ಗೆ ಪೂರ್ತಿ ಮಾಹಿತಿ ನೀಡಿದರು. ಧೀರಜ್ ಪ್ರಸಾದ್ ಹೆಸರನ್ನು ಮಧ್ಯ ತಂದರು ಎಂದು ನಟ ಹೇಳಿದರು.

ಮೈಸೂರು ತೋಟ ವೆರಿಫೈ ಮಾಡಬೇಕು ಅಂದರು. ನನ್ನ ಹೆಸರಲ್ಲಿ ಇಲ್ಲ ಅಂದೆ. ಆದರೂ ಮಾಡಬೇಕು ಅಂದರು. ಅದಕ್ಕೆ ಸರಿ ಹೋಗಿ ಅಂತಾ ಅಂದೆ. ಇದರ ಮಧ್ಯೆ ರಾಕೇಶ್, ಹರ್ಷಾಗೆ ಕೇಳಿದಾಗ ಅವರು ಇಲ್ಲ ಅಂತ ಹೇಳಿದ್ರು. ರಾಕೇಶ್ ಮತ್ತು ಹರ್ಷಾ ತೋಟಕ್ಕೆ ಹೋಗಿದ್ದರು. ಆಗ ಅರುಣಾ ಕುಮಾರಿ ಶಾಕ್ ಆಗಿದ್ದಾರೆ ಅಂತ ಅಲ್ಲಿಂದ ನನಗೆ ಕರೆ ಮಾಡಿದ್ದರು ಎಂದು ದರ್ಶನ್​ ತಿಳಿಸಿದರು.

ಎಲ್ಲ ಕಡೆ ಉಮಾಪತಿ ಎಂಬುದೇ ಕೇಳಿ ಬರುತ್ತಿದೆ. ನಾನು ಅವರ ವಿರುದ್ಧ ಆರೋಪ ಮಾಡುತ್ತಿಲ್ಲ. ಆದರೆ ಯಾರು ಮಾಡಿರುತ್ತಾರೋ ಅವರನ್ನ ಹಿಡಿದುಕೊಳ್ಳುತ್ತೇವೆ. ಬಾಯಿಬಿಟ್ಟರೆ ಸಾಯಿಸುಬಿಡುತ್ತೇನೆ ಎಂದು ಉಮಾಪತಿ ಹೇಳಿದ್ದಾರೆ ಅಂತ ಅರುಣಾ ಕುಮಾರಿ ಹೇಳಿದಳು. ಏಪ್ರಿಲ್ 8ರಿಂದ ಉಮಾಪತಿ ಚಾಟ್ ಮಾಡಿದ್ದಾರೆ. ಅರುಣಾ ಕುಮಾರಿ ಜತೆ ಉಮಾಪತಿ ಚಾಟ್ ಮಾಡಿದ್ದಾರೆ. ಉಮಾಪತಿ ನನಗೆ ಅರುಣಾ ಕುಮಾರಿ ಪರಿಚಯ ಇಲ್ಲವೆಂದಿದ್ದಾರೆ. ಸಹೋದರನಿಂದ ಪರಿಚಯವಾಗಿದ್ದು ಎಂದು ಹೇಳಿದ್ದರು. ಆದರೆ ಅರುಣಾ ಕುಮಾರಿ ಜೊತೆ ಚಾಟ್‌ ಮಾಡಿರುವುದು ಪತ್ತೆಯಾಗಿದೆ ಎಂದರು.

ದರ್ಶನ್ ಹೆಸರಲ್ಲಿ ವಂಚನೆ ಆರೋಪ ಪ್ರಕರಣ; ದಕ್ಷಿಣ ವಿಭಾಗದ ಡಿಸಿಪಿ ಹೇಳಿದ್ದೇನು?

ಅರುಣಾ ಕುಮಾರಿಯನ್ನ ಮುಂದೆ ಬಿಟ್ಟಿದ್ದೇ ನಿರ್ಮಾಪಕ ಉಮಾಪತಿನಾ? ‘ರಾಬರ್ಟ್’ ನಿರ್ಮಾಪಕನ ವಿರುದ್ಧ ದಚ್ಚು ಆಪ್ತರ ಆರೋಪವೇನು?

(Darshan press meet on fraudster Aruna Kumari issue in Mysuru)

Published On - 1:46 pm, Mon, 12 July 21