AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂಬರೀಷ್​​ ಕುಟುಂಬಕ್ಕಾಗಿ ನಾನು ಪ್ರಾಣ ಕೊಡಲೂ ಸಿದ್ಧ’; ರಾಕ್​ಲೈನ್​ ವೆಂಕಟೇಶ್​

Rockline Venkatesh: ನನ್ನನ್ನು ಯಾರಾದರೂ ಹೆದರಿಸಬೇಕು ಅಂದರೆ ಆಗೋದಿಲ್ಲ. ಯಾರೋ ದುಷ್ಕರ್ಮಿಗಳು ನಮ್ಮನೆಗೆ ಬಾಟಲಿ ಎಸೆದಿದ್ದಾರೆ. ಏನೇ ಆದ್ರೂ ನಾನು ಅಂಬರೀಶ್ ಕುಟುಂಬ ಬೆಂಬಲಿಸುವೆ ಎಂದಿದ್ದಾರೆ ರಾಕ್​ಲೈನ್​ ವೆಂಕಟೇಶ್.

‘ಅಂಬರೀಷ್​​ ಕುಟುಂಬಕ್ಕಾಗಿ ನಾನು ಪ್ರಾಣ ಕೊಡಲೂ ಸಿದ್ಧ’; ರಾಕ್​ಲೈನ್​ ವೆಂಕಟೇಶ್​
ರಾಕ್​ಲೈನ್​ ವೆಂಕಟೇಶ್​
TV9 Web
| Edited By: |

Updated on:Jul 12, 2021 | 5:25 PM

Share

ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದರು. ಇದಾದ ಬೆನ್ನಲ್ಲೇ ರಾಕ್​ಲೈನ್​ ವೆಂಕಟೇಶ್ ಮನೆ ಮೇಲೆ ಬಾಟಲಿ ಎಸೆಯಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ರಾಕ್​ಲೈನ್​ ವೆಂಕಟೇಶ್, ‘ನನ್ನನ್ನು ಯಾರಾದರೂ ಹೆದರಿಸಬೇಕು ಅಂದರೆ ಆಗೋದಿಲ್ಲ. ಯಾರೋ ದುಷ್ಕರ್ಮಿಗಳು ನಮ್ಮ ಮನೆಗೆ ಬಾಟಲಿ ಎಸೆದಿದ್ದಾರೆ. ಏನೇ ಆದ್ರೂ ನಾನು ಅಂಬರೀಶ್ ಕುಟುಂಬ ಬೆಂಬಲಿಸುವೆ. ಈ ರೀತಿ ಗಲಾಟೆ ಮಾಡಿಸಿ ಹೆದರಿಸ್ತೀವಿ ಅಂದ್ಕೊಂಡ್ರೆ ಆಗಲ್ಲ. ಅಂಬರೀಷ್​​ ಕುಟುಂಬದ ಹಿಂದೆ ನಾನು ಸದಾ ಇರುತ್ತೇನೆ. ಅವರ ಕುಟುಂಬಕ್ಕಾಗಿ ನಾನು ಪ್ರಾಣ ಕೊಡಲೂ ಸಿದ್ಧ. ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ದನಿ ಎತ್ತಿದ್ದಾರೆ. ನಾನು ರಾಜಕೀಯವಾಗಿ ಮಾತನಾಡಲು ಹೋಗುವುದಿಲ್ಲ’ ಎಂದಿದ್ದಾರೆ.

ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವೆ ಟಾಕ್‌ಫೈಟ್ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ರಾಕ್​ಲೈನ್​ ವೆಂಕಟೇಶ್​, ‘ರಾಜ್ಯದ ಜನರಿಗೆ ಬೇಸರ ಆಗಿದೆ. ಕುಮಾರಣ್ಣನಿಗೆ ನಾನು ಮನವಿ ಮಾಡುತ್ತೇನೆ. ಇದಕ್ಕೆ ವಿರಾಮ ಕೊಡಬೇಡಿ, ಅದರ ಬದಲು ಅಂತ್ಯ ಹಾಡಿ. ಇಬ್ಬರು ಕುಳಿತು ಮಾತನಾಡಿ ಒಂದು ನಿರ್ಧಾರಕ್ಕೆ ಬನ್ನಿ. ಮಾಧ್ಯಮದಲ್ಲಿ ಒಂದು ವೇದಿಕೆ ಕಲ್ಪಿಸಿ ಚರ್ಚೆ ಮಾಡಿ. ನಿಮ್ಮ ನಿಮ್ಮ ಮನಸ್ಸಿನಲ್ಲಿ ಇರೋದನ್ನು ಚರ್ಚೆ ಮಾಡಿ. ಇದನ್ನು ಇನ್ನೂ ಮುಂದುವರಿಸೋದು ಬೇಡವೆಂದು ನನ್ನ ಮನವಿ’ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಅಂಬರೀಷ್​ ಕುಟುಂಬದವರ ಮೇಲೆ ಇತ್ತೀಚೆಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಬಗ್ಗೆ ಸಿಟ್ಟಿಗೆದ್ದಿದ್ದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ತಮ್ಮ ಮತ್ತು ಸುಮಲತಾ ಅಂಬರೀಷ್​ ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು ಎಂದೂ ರಾಕ್‌ಲೈನ್ ವೆಂಕಟೇಶ್ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ:

ನಾವು ಬೇರೆಯವರಿಗೆ ಕೆಸರನ್ನು ಹಚ್ಚಲು ಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ: ಮಂಡ್ಯ ಸಂಸದೆ ಸುಮಲತಾ ಟ್ವೀಟ್

ಕುಮಾರಣ್ಣನ ಕೆಣಕಿದರೆ ಸಹಿಸೋದಿಲ್ಲ, ಮಂಡ್ಯ ಬಗ್ಗೆ ಮಾತನಾಡಿದರೆ ಹುಷಾರ್: ರಾಕ್​ಲೈನ್​ಗೆ ಅನ್ನದಾನಿ ಎಚ್ಚರಿಕೆ

Published On - 4:48 pm, Mon, 12 July 21

Follow Us
TV9 Web
TV9 Web

TV9 Kannada

Read More
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ