ದರ್ಶನ್ ಹೆಸರಲ್ಲಿ ವಂಚನೆ ಆರೋಪ ಪ್ರಕರಣ; ದಕ್ಷಿಣ ವಿಭಾಗದ ಡಿಸಿಪಿ ಹೇಳಿದ್ದೇನು?
ಅರುಣ ಕುಮಾರಿ ವಿರುದ್ಧ ಉಮಾಪತಿ ಮೊದಲು ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಜಯನಗರ ಠಾಣೆಗೆ ತೆರಳಿ ಆಕೆ ವಿರುದ್ಧ ಉಮಾಪತಿ ಶ್ರೀನಿವಾಸ್ ಅರ್ಜಿ ನೀಡಿದ್ದರು. ಬ್ಯಾಂಕ್ ನೌಕರರೆಂದು ಬಂದು ಸುಳ್ಳು ಮಾಹಿತಿ ನೀಡಿದ್ದಾರೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಆಕೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಿರ್ಮಾಪಕ ಉಮಾಪತಿ ಜಯನಗರ ಠಾಣೆಗೆ ದೂರು ನೀಡಿದ್ದ ವಿಚಾರದ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು 17ರಂದು ನಿರ್ಮಾಪಕ ಉಮಾಪತಿ ಒಂದು ಪೆಟಿಷನ್ ಕೊಟ್ಟಿದ್ದರು. ಅವರ ಭೂ ದಾಖಲಾತಿಗಳ ಶ್ಯೂರಿಟಿ ನಮ್ಮ ಲಿಮಿಟ್ಸ್ಗೆ ಬರುತ್ತಿರಲಿಲ್ಲ. ಹೀಗಾಗಿ ಅವರಿಗೆ ತಿಳಿಸಿ ಪೆಟಿಷನ್ ಅರ್ಜಿ ವಜಾ ಮಾಡಿದ್ದೀವಿ. ಲೋನ್ ಅರ್ಜಿ, ಶ್ಯೂರಿಟಿ ವಿಚಾರ ಯಾವುದೂ ನಮ್ಮ ಲಿಮಿಟ್ಗೆ ಬರುವುದಿಲ್ಲ. ಇನ್ನು ಬ್ಯಾಂಕ್ನವರು ಯಾರೂ ನಮ್ಮನ್ನ ಅಪ್ರೋಚ್ ಮಾಡಿಲ್ಲ. ಈ ವಿಚಾರವಾಗಿ ಸೌತ್ ಎಂಡ್ ಸರ್ಕಲ್ ಕೆನಾರಾ ಬ್ಯಾಂಕ್ ನಿಂದ ನಮಗೆ ಯಾವುದೇ ಕಂಪ್ಲೆಂಟ್ ಬಂದಿಲ್ಲ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಅರುಣ ಕುಮಾರಿ ವಿರುದ್ಧ ಉಮಾಪತಿ ಮೊದಲು ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಜಯನಗರ ಠಾಣೆಗೆ ತೆರಳಿ ಆಕೆ ವಿರುದ್ಧ ಉಮಾಪತಿ ಶ್ರೀನಿವಾಸ್ ಅರ್ಜಿ ನೀಡಿದ್ದರು. ಬ್ಯಾಂಕ್ ನೌಕರರೆಂದು ಬಂದು ಸುಳ್ಳು ಮಾಹಿತಿ ನೀಡಿದ್ದಾರೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಆಕೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು.
ಉಮಾಪತಿಯನ್ನು ಸಂಪರ್ಕಿಸಿದ ಅರುಣ ಕುಮಾರಿ ಅರುಣ ಕುಮಾರಿ ಮೊದಲು ನಿರ್ಮಾಪಕ ಉಮಾಪತಿಯನ್ನು ಸಂಪರ್ಕಿಸಿದ್ದಾಳೆ. ಮೊದಲಿಗೆ ಕರೆ ಮಾಡಿ ನಂತರ ಭೇಟಿಯಾಗಿದ್ದಳು. ಕೆನರಾ ಬ್ಯಾಂಕ್ ಲೋನ್ ಸೆಕ್ಷನ್ನಿಂದ ಕರೆ ಮಾಡುತಿದ್ದಾಗಿ ಹೇಳಿದ್ದ ಅರುಣ ಕುಮಾರಿ, ಸಿನಿಮಾ ನಟ ದರ್ಶನ್ರವರು ಅವರಿಗೆ ಪರಿಚಿತರೊಬ್ಬರಿಗೆ ಲೋನ್ಗಾಗಿ ಶ್ಯೂರಿಟಿ ಹಾಕಿದ್ದಾರೆ ಎಂದಿದ್ದಾಳೆ. ಜೊತೆಗೆ ಸದರಿ ದಾಖಲೆಗಳ ಬಗ್ಗೆ ವಿಚಾರಣೆ ಮಾಡಬೇಕೆಂದು ಹೇಳಿದ್ದಳಂತೆ. ಈ ವೇಳೆ ಅರುಣ ಕುಮಾರಿಯನ್ನು ನಿರ್ಮಾಪಕ ಉಮಾಪತಿ ಕಚೇರಿಗೆ ಕರೆದಿದ್ದರು.
ಕೆಲ ದಾಖಲೆ ಸಮೇತ ಉಮಾಪತಿ ಕಚೇರಿಗೆ ಅರುಣ ಕುಮಾರಿ ಬಂದಿದ್ದಳು. ಈ ವೇಳೆ ಆಕೆ ದಾಖಲೆಗಳನ್ನು ಉಮಾಪತಿಗೆ ತೋರಿಸಿ ನಟ ದರ್ಶನ್ ಪರಿಚಿತರೊಬ್ಬರ ಲೋನ್ಗೆ ಶ್ಯೂರಿಟಿಗೆ ಸಹಿ ಹಾಕಿದ್ದಾರೆಯೇ ಎಂದು ಪ್ರಶ್ನಿಸಿದ್ದಾಳೆ.
ಈ ವಿಚಾರವನ್ನು ದರ್ಶನ್ ಬಳಿಯೇ ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಉಮಾಪತಿ ಅರುಣ ಕುಮಾರಿ ತಿಳಿಸಿದ್ದರು. ಆದರೆ ಅರುಣ ಇದೇ ರೀತಿ ಹಲವರಿಗೆ ಕರೆ ಮಾಡಿದ್ದಾಗಿ ಉಮಾಪತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿಯನ್ನು ಪರಿಶೀಲನೆ ನಡೆಸಿದ್ದ ಪೊಲೀಸರು, ಮೈಸೂರಿನ ಭೂಮಿ ವಿಚಾರಕ್ಕೆ ಸಂಬಂಧಿಸಿದ ಹಿನ್ನೆಲೆ ಈ ವಿಚಾರವನ್ನು ಅಲ್ಲೇ ಕೇಸ್ ಫೈಲ್ ಮಾಡುವಂತೆ ಸೂಚಿಸಿದ್ದರು. ಅದೇ ರೀತಿ ಉಮಾಪತಿ ಸಹ ಒಪ್ಪಿಕೊಂಡು ಅಲ್ಲೇ ಫೈಲ್ ಮಾಡೊದಾಗಿ ತೆರಳಿದ್ದರು. ಇದಾದ ಬಳಿಕ ಅರ್ಜಿಯನ್ನು ಪೊಲೀಸರು ವಜಾ ಮಾಡಿದರು.
Actor Darshan: ವಂಚನೆ ಪ್ರಯತ್ನದ ಬಗ್ಗೆ ದರ್ಶನ್ ಹೇಳಿದ್ದೇನು?
‘ಇದರಲ್ಲಿ ಯಾರೇ ಇದ್ರೂ ಬಿಡಲ್ಲ‘; ವಂಚನೆ ಪ್ರಯತ್ನದ ಬಗ್ಗೆ ದರ್ಶನ್ ಎಚ್ಚರಿಕೆ
(Fraud Case in darshan name here is the details of south division DCP)
Published On - 9:18 am, Mon, 12 July 21