AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ-ವಿಜಯ್ ಮದುವೆ ಆರತಕ್ಷತೆ: ನೂತನ ಜೋಡಿಯಿಂದ ವಿಶೇಷ ಮನವಿ

Rashmika Mandanna and Vijay Deverakonda: ರಶ್ಮಿಕಾ ಹಾಗೂ ವಿಜಯ್ ಅವರ ಮದುವೆ ಚಿತ್ರಗಳಂತೂ ದೇಶದಾದ್ಯಂತ ಸದ್ದು-ಸುದ್ದಿ ಆಗಿವೆ. ಇಬ್ಬರ ಮದುವೆ ಒಂದು ರೀತಿ ‘ನ್ಯಾಷನಲ್ ನ್ಯೂಸ್’ ಆಗಿದೆ. ರಶ್ಮಿಕಾ-ವಿಜಯ್ ಹೋದಲ್ಲೆಲ್ಲ ಅವರ ನೋಡಲು ಜನ ಮುಗಿಬೀಳುತ್ತಿದ್ದಾರೆ. ಇದರ ನಡುವೆ ನಾಳೆ (ಮಾರ್ಚ್ 04) ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಆರತಕ್ಷತೆ ಆಯೋಜಿಸಲಾಗಿದ್ದು ಆರತಕ್ಷತೆ ಕಾರ್ಯಕ್ರಮ ಬಲು ಅದ್ಧೂರಿಯಾಗಿ ನಡೆಯಲಿದೆ. ರಿಸೆಪ್ಷನ್​​ಗೆ ಮುಂಚೆ ನವ ಜೋಡಿ ಅಭಿಮಾನಿಗಳಲ್ಲಿ ವಿಶೇಷ ಮನವಿಯನ್ನು ಮಾಡಿದ್ದಾರೆ.

ರಶ್ಮಿಕಾ-ವಿಜಯ್ ಮದುವೆ ಆರತಕ್ಷತೆ: ನೂತನ ಜೋಡಿಯಿಂದ ವಿಶೇಷ ಮನವಿ
Vijay Rashmika
ಮಂಜುನಾಥ ಸಿ.
|

Updated on: Mar 03, 2026 | 11:01 AM

Share

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಇತ್ತೀಚೆಗಷ್ಟೆ ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ನೆರವೇರಿದೆ. ರಶ್ಮಿಕಾ ಹಾಗೂ ವಿಜಯ್ ಅವರ ಮದುವೆ ಚಿತ್ರಗಳಂತೂ ದೇಶದಾದ್ಯಂತ ಸದ್ದು-ಸುದ್ದಿ ಆಗಿವೆ. ಇಬ್ಬರ ಮದುವೆ ಒಂದು ರೀತಿ ‘ನ್ಯಾಷನಲ್ ನ್ಯೂಸ್’ ಆಗಿದೆ. ರಶ್ಮಿಕಾ-ವಿಜಯ್ ಹೋದಲ್ಲೆಲ್ಲ ಅವರ ನೋಡಲು ಜನ ಮುಗಿಬೀಳುತ್ತಿದ್ದಾರೆ. ಇದರ ನಡುವೆ ನಾಳೆ (ಮಾರ್ಚ್ 04) ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಆರತಕ್ಷತೆ ಆಯೋಜಿಸಲಾಗಿದ್ದು ಆರತಕ್ಷತೆ ಕಾರ್ಯಕ್ರಮ ಬಲು ಅದ್ಧೂರಿಯಾಗಿ ನಡೆಯಲಿದೆ. ರಿಸೆಪ್ಷನ್​​ಗೆ ಮುಂಚೆ ನವ ಜೋಡಿ ಅಭಿಮಾನಿಗಳಲ್ಲಿ ವಿಶೇಷ ಮನವಿಯನ್ನು ಮಾಡಿದ್ದಾರೆ.

ಮದುವೆ ಸ್ಥಳ ಮತ್ತು ಆಗಮಿಸುವ ಅತಿಥಿಗಳ ಮಾಹಿತಿಯನ್ನು ಬಲು ಗುಟ್ಟಾಗಿ ಇರಿಸಿದ್ದರು ರಶ್ಮಿಕಾ ಮತ್ತು ವಿಜಯ್. ಮದುವೆಯ ಹಿಂದಿನ ದಿನದ ವರೆಗೂ ಮದುವೆ ನಡೆಯುತ್ತಿರುವ ರೆಸಾರ್ಟ್ ಯಾವುದು ಎಂಬದರ ಬಗ್ಗೆ ಮಾಧ್ಯಮದವರಿಗೇ ಗೊಂದಲ ಇತ್ತು. ಆದರೆ ರಿಸೆಪ್ಷನ್ ಲೊಕೇಶನ್ ಮಾಹಿತಿಯನ್ನು ಗುಟ್ಟಾಗಿರಿಸುವಲ್ಲಿ ರಶ್ಮಿಕಾ-ವಿಜಯ್ ಜೋಡಿ ವಿಫಲವಾಯ್ತು. ಹೈದರಾಬಾದ್​ನ ತಾಜ್ ಕೃಷ್ಣನಲ್ಲಿ ನಾಳೆ ಸಂಜೆ ರಶ್ಮಿಕಾ-ವಿಜಯ್ ಆರತಕ್ಷತೆ ಬಲು ಅದ್ಧೂರಿಯಾಗಿ ನಡೆಯಲಿದೆ.

ಆದರೆ ಇದೀಗ ರಶ್ಮಿಕಾ-ವಿಜಯ್ ತುಸು ಆತಂಕಕ್ಕೆ ಒಳಗಾಗಿದ್ದು, ಆರತಕ್ಷತೆ ದಿನದಂದು ಭದ್ರತೆ ಸಮಸ್ಯೆ ಆಗುವ ಭೀತಿ ಅವರನ್ನು ಕಾಡುತ್ತಿರುವಂತಿದೆ. ಆರತಕ್ಷತೆಗೆ ತೆಲುಗು ಚಿತ್ರರಂಗದ ಹಲವಾರು ಗಣ್ಯರು, ಬಾಲಿವುಡ್ ನ ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸೇರಿದಂತೆ ಆಂಧ್ರ-ತೆಲಂಗಾಣದ ಪ್ರಮುಖ ರಾಜಕಾರಣಿಗಳು, ಕೇಂದ್ರದ ಕೆಲವು ಪ್ರಮುಖ ರಾಜಕಾರಣಿಗಳು ಸಹ ಇವರ ವಿವಾಹ ಆರತಕ್ಷತೆಗೆ ಹಾಜರಿ ಹಾಕಲಿದ್ದು, ಭಾರಿ ಭದ್ರತೆಯ ಅವಶ್ಯಕತೆ ಇದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ-ವಿಜಯ್ ಧರಿಸಿದ್ದ ಚಿನ್ನದ ಬೆಲೆ ಎಷ್ಟು ಕೋಟಿ ರೂಪಾಯಿ?

ಅಲ್ಲದೆ, ಇದೀಗ ಆರತಕ್ಷತೆಯ ಸ್ಥಳದ ಮಾಹಿತಿ ಬಹಿರಂಗ ಆಗಿರುವ ಕಾರಣ ಸಾವಿರಾರು ಮಂದಿ ಅಭಿಮಾನಿಗಳು ಸಹ ಆಗಮಿಸುವ ಸಾಧ್ಯತೆ ಇದೆ. ಇದರಿಂದ ಭದ್ರತೆ ಕಠಿಣವಾಗಲಿದೆ. ಇದೀಗ ರಶ್ಮಿಕಾ ಮತ್ತು ವಿಜಯ್ ಮೊದಲೇ ಅಭಿಮಾನಿಗಳಲ್ಲಿ ಮನವಿ ಮಾಡಿದ್ದು, ‘ನಿಮ್ಮ ಸುರಕ್ಷತೆ ಮತ್ತು ಸಂತೋಷ ನಮಗೆ ಮುಖ್ಯ. ನಿಮ್ಮ ಆಶೀರ್ವಾದ ಮತ್ತು ಬೆಂಬಲಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ ಮತ್ತು ಈ ಆಚರಣೆಯನ್ನು ಎಲ್ಲರಿಗೂ ಸುರಕ್ಷಿತವಾಗಿ ಮತ್ತು ಸಂತೋಷದಿಂದ ಇರಿಸಲು ನಮಗೆ ಸಹಾಯ ಮಾಡುವಲ್ಲಿ ನಿಮ್ಮ ಸಹಕಾರವನ್ನು ನಾವು ಕೋರುತ್ತೇವೆ’ ಎಂದಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ಅವರ ಆರತಕ್ಷತೆಗೆ ಪೊಲೀಸ್ ಇಲಾಖೆ ಭಾರಿ ಬಂದೋಬಸ್ತ್ ನೀಡುತ್ತಿದೆ. ಸೆಕ್ಯೂರಿಟಿ ಚೆಕ್ ವ್ಯವಸ್ಥೆ, ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆಗಳ ಬಗ್ಗೆ ಈಗಾಗಲೇ ಯೋಜನೆ ಸಿದ್ಧವಾಗಿದೆ. ಜೊತೆಗೆ ರಶ್ಮಿಕಾ ಮತ್ತು ವಿಜಯ್ ಅವರು ವಿದೇಶಿ ಸಂಸ್ಥೆಯೊಂದರಿಂದ ವಿಶೇಷ ಸೆಕ್ಯೂರಿಟಿ ಮೆನ್​​ಗಳ ದೊಡ್ಡ ತಂಡವನ್ನೇ ಕರೆಸಿಕೊಂಡಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!