AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬದಲಾಗಲಿರುವ ‘ಸ್ಪೈಡರ್ ಮ್ಯಾನ್’, ಅಭಿಮಾನಿಗಳು ಒಪ್ಪಿಕೊಳ್ತಾರಾ?

Spider Man movie: ಈ ವರೆಗೆ ‘ಸ್ಪೈಡರ್ ಮ್ಯಾನ್’ ಪಾತ್ರದಲ್ಲಿ ನಟಿಸಿರುವ ನಟರುಗಳಲ್ಲಿ ಟಾಮ್ ಹಾಲೆಂಡ್ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟ ಎನ್ನಲಾಗುತ್ತಿದೆ. ನಿನ್ನೆ ಬಿಡುಗಡೆ ಆಗಿರುವ ‘ಸ್ಪೈಡರ್ ಮ್ಯಾನ್’ ಸಹ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನೇ ಬರೆಯುತ್ತಿದೆ. ಇಷ್ಟೆಲ್ಲ ಯಶಸ್ಸು ಬೆನ್ನಿಗಿದ್ದರೂ ಸಹ ಇದೀಗ ಟಾಮ್ ಹಾಲೆಂಡ್ ಅನ್ನು ಕೈಬಿಟ್ಟು ಹೊಸ ಸ್ಪೈಡರ್ ಮ್ಯಾನ್ ಅನ್ನು ಪರಿಚಯಿಸಲು ಮಾರ್ವೆಲ್ ಸಜ್ಜಾಗಿದೆ.

ಮತ್ತೆ ಬದಲಾಗಲಿರುವ ‘ಸ್ಪೈಡರ್ ಮ್ಯಾನ್’, ಅಭಿಮಾನಿಗಳು ಒಪ್ಪಿಕೊಳ್ತಾರಾ?
Tom Holland
ಮಂಜುನಾಥ ಸಿ.
|

Updated on: Jul 31, 2026 | 5:09 PM

Share

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ (Spider-Man: Brand New Day) ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಇದು ‘ಸ್ಪೈಡರ್ ಮ್ಯಾನ್’ ಸರಣಿಯ ಒಂಬತ್ತನೇ ಸಿನಿಮಾ ಆಗಿದೆ. ಟಾಮ್ ಹಾಲೆಂಡ್ ಅವರಿಗೆ ಇದು ಸ್ಪೈಡರ್ ಮ್ಯಾನ್ ಆಗಿ ನಾಲ್ಕನೇ ಸಿನಿಮಾ. ಈ ವರೆಗೆ ‘ಸ್ಪೈಡರ್ ಮ್ಯಾನ್’ ಪಾತ್ರದಲ್ಲಿ ನಟಿಸಿರುವ ನಟರುಗಳಲ್ಲಿ ಟಾಮ್ ಹಾಲೆಂಡ್ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟ ಎನ್ನಲಾಗುತ್ತಿದೆ. ನಿನ್ನೆ ಬಿಡುಗಡೆ ಆಗಿರುವ ‘ಸ್ಪೈಡರ್ ಮ್ಯಾನ್’ ಸಹ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನೇ ಬರೆಯುತ್ತಿದೆ. ಇಷ್ಟೆಲ್ಲ ಯಶಸ್ಸು ಬೆನ್ನಿಗಿದ್ದರೂ ಸಹ ಇದೀಗ ಟಾಮ್ ಹಾಲೆಂಡ್ ಅನ್ನು ಕೈಬಿಟ್ಟು ಹೊಸ ಸ್ಪೈಡರ್ ಮ್ಯಾನ್ ಅನ್ನು ಪರಿಚಯಿಸಲು ಮಾರ್ವೆಲ್ ಸಜ್ಜಾಗಿದೆ.

ಚಿತ್ರದ ಪ್ರಚಾರದ ಸಂದರ್ಭದಲ್ಲಿ ‘ಹ್ಯಾಪಿ ಸ್ಯಾಡ್ ಕನ್ಫ್ಯೂಸ್ಡ್’ (Happy Sad Confused) ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಟಾಮ್ ಹಾಲ್ಯಾಂಡ್, ಸ್ಪೈಡರ್ ಮ್ಯಾನ್ ಫ್ರಾಂಚೈಸಿಯಿಂದ ತಮ್ಮ ನಿರ್ಗಮನದ ಕುರಿತು ಈಗಾಗಲೇ ಚರ್ಚೆಗಳು ನಡೆದಿವೆ ಎಂದು ಖುದ್ದು ಹೇಳಿದ್ದಾರೆ. ನಟನ ಪ್ರಕಾರ, ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ (2021) ಚಿತ್ರ ಮುಗಿದ ತಕ್ಷಣವೇ ಇದರ ಮೂಲಭೂತ ತಯಾರಿಗಳು ಆರಂಭವಾಗಿದ್ದವು. ಆದರೆ ಹೇಗೋ ಈಗ ‘ಬ್ರ್ಯಾಂಡ್ ನ್ಯೂ ಡೇ’ ಸಹ ಬಿಡುಗಡೆ ಆಗಿದೆ. ಆದರೆ ಮುಂದಿನ ಸ್ಪೈಡರ್ ಮ್ಯಾನ್ ಸಿನಿಮಾನಲ್ಲಿ ಕಡ್ಡಾಯವಾಗಿ ಹೊಸ ನಟ ಇರಲಿದ್ದಾನಂತೆ.

ಆದರೆ ಈ ಬಗ್ಗೆ ತಮಗೆ ಬೇಸರ ಇಲ್ಲ ಎಂದಿರುವ ಟಾಮ್ ಹಾಲೆಂಡ್, ‘ನನಗೆ ಇದು ಬಹಳ ಖುಷಿ ಕೊಡುವ ವಿಷಯ ಆಗಿದೆ. ನಾನು ಸಂಸ್ಥೆಯವರ ಜೊತೆಗೆ ಈ ಬಗ್ಗೆ ಮಾತನಾಡಿದಾಗಲೆಲ್ಲ ಬಹಳ ಉತ್ಸಾಹಗೊಳ್ಳುತ್ತೇನೆ. ಹೊಸ ಮತ್ತು ಉತ್ತಮವಾದ ವ್ಯಕ್ತಿಯನ್ನು ಆಯ್ಕೆ ಮಾಡಿ, ಆ ಮೂಲಕ ಸ್ಪೈಡರ್ ಮ್ಯಾನ್ ಪಾತ್ರದ ಭವಿಷ್ಯವನ್ನು ಭದ್ರಗೊಳಿಸುವುದು ನನ್ನ ಜವಾಬ್ದಾರಿ ಎಂದು ನಾನು ನಂಬಿದ್ದೇನೆ’ ಎಂದು ಟಾಮ್ ಹಾಲೆಂಡ್ ಹೇಳಿದ್ದಾರೆ.

ಇದನ್ನೂ ಓದಿ:‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

2016ರಲ್ಲಿ ಬಿಡುಗಡೆಯಾದ ‘ಕ್ಯಾಪ್ಟನ್ ಅಮೆರಿಕ: ಸಿವಿಲ್ ವಾರ್’ ಚಿತ್ರದಲ್ಲಿ ಮೊದಲ ಬಾರಿಗೆ ಸ್ಪೈಡರ್ ಮ್ಯಾನ್ ಆಗಿ ಟಾಮ್ ಹಾಲ್ಯಾಂಡ್ ಕಾಣಿಸಿಕೊಂಡಿದ್ದರು. ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ (MCU) ಹಲವಾರು ಸ್ಪೈಡರ್ ಮ್ಯಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. ಟೋಬಿ ಮ್ಯಾಗೈರ್ ಮತ್ತು ಆಂಡ್ರ್ಯೂ ಗಾರ್ಫೀಲ್ಡ್ ನಂತರ ಪೀಟರ್ ಪಾರ್ಕರ್ ಪಾತ್ರವನ್ನು ನಿರ್ವಹಿಸಿದ ಮೂರನೇ ನಟ ಇವರಾಗಿದ್ದಾರೆ. ತಮ್ಮ ಸ್ವಂತ ಅನುಭವವನ್ನು ಮೆಲುಕು ಹಾಕುತ್ತಾ, ರಾಬರ್ಟ್ ಡೌನಿ ಜೂನಿಯರ್ (ಐರನ್ ಮ್ಯಾನ್ ಪಾತ್ರಧಾರಿ) ಅವರು ತಮ್ಮ ಮೊದಲ ಮೂರು ಚಿತ್ರಗಳಲ್ಲಿ ತನಗೆ ಹೇಗೆ ಮಾರ್ಗದರ್ಶಕರಾಗಿದ್ದರೋ, ಅದೇ ರೀತಿಯಲ್ಲಿ ಮುಂದಿನ ಪಾತ್ರಕ್ಕೆ ಬರುವ ನಟನಿಗೂ ತಾನು ಸಹಾಯ ಮಾಡಲು ಬಹಳ ಖುಷಿಪಡುತ್ತೇನೆ ಎಂದು ಅವರು ಹೇಳಿದ್ದಾರೆ.

ತಮ್ಮ ನಂತರ ಸ್ಪೈಡರ್ ಮ್ಯಾನ್ ಉಡುಪನ್ನು ಧರಿಸಲು ಯಾರನ್ನು ಬಯಸುತ್ತೀರಿ ಎಂದು ಕೇಳಿದಾಗ, ನೆಟ್‌ಫ್ಲಿಕ್ಸ್ ಸರಣಿ ‘ಅಡೋಲೆಸೆನ್ಸ್’ ನಲ್ಲಿನ ಅಭಿನಯಕ್ಕಾಗಿ ವ್ಯಾಪಕ ಮೆಚ್ಚುಗೆ ಗಳಿಸಿದ್ದ ಯುವ ನಟ ಓವನ್ ಕೂಪರ್ ಅವರ ಹೆಸರನ್ನು ಟಾಮ್ ಹಾಲೆಂಡ್ ಸೂಚಿಸಿದ್ದರು. ಓವನ್ ಕೂಪರ್, ತನ್ನ ಅದ್ಭುತ ನಟನೆಯಿಂದ ಈಗಾಗಲೇ ಗ್ರಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ಕಮ್ಮಗೊಂಡನಹಳ್ಳಿಯ ಅಂಗಡಿಯಲ್ಲಿ ಏಕಕಾಲಕ್ಕೆ 23 ಸಿಲಿಂಡರ್ ಸ್ಫೋಟ
ಕಮ್ಮಗೊಂಡನಹಳ್ಳಿಯ ಅಂಗಡಿಯಲ್ಲಿ ಏಕಕಾಲಕ್ಕೆ 23 ಸಿಲಿಂಡರ್ ಸ್ಫೋಟ
ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ!
ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ!
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?