AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಟ್ರೇಲರ್‌ ನೋಡಿ ಪಾಕಿಸ್ತಾನಿ ಮಂದಿ ಫಿದಾ: ರಣಬೀರ್, ಯಶ್ ನಟನೆಗೆ ಮೆಚ್ಚುಗೆ

ಈ ವರ್ಷ ದೀಪಾವಳಿ ಹಬ್ಬಕ್ಕೆ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಟ್ರೇಲರ್ ನೋಡಿ ಕೇವಲ ಭಾರತದ ಸಿನಿಪ್ರಿಯರು ಮಾತ್ರವಲ್ಲದೇ, ಪಾಕಿಸ್ತಾನಿ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಹಲವರು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.

‘ರಾಮಾಯಣ’ ಟ್ರೇಲರ್‌ ನೋಡಿ ಪಾಕಿಸ್ತಾನಿ ಮಂದಿ ಫಿದಾ: ರಣಬೀರ್, ಯಶ್ ನಟನೆಗೆ ಮೆಚ್ಚುಗೆ
Yash
ಮದನ್​ ಕುಮಾರ್​
|

Updated on: Jul 31, 2026 | 4:43 PM

Share

ಮುಖ್ಯಾಂಶಗಳು

  • ದೇಶಗಳ ಗಡಿ ದಾಟಿ ಗಮನ ಸೆಳೆಯುತ್ತಿರುವ ರಾಮಾಯಣ ಸಿನಿಮಾದ ಟ್ರೇಲರ್.
  • ಸಿನಿಮಾದ ಟ್ರೇಲರ್ ನೋಡಿ ಭರಪೂರ ಮೆಚ್ಚುಗೆ ಸೂಚಿಸಿದ ಪಾಕಿಸ್ತಾನಿ ಪ್ರೇಕ್ಷಕರು.
  • ವಿಎಫ್​ಎಕ್ಸ್ ಹಾಗೂ ಸಾಹಸದ ದೃಶ್ಯಗಳನ್ನು ಕಂಡು ಬೆರಗಾಗಿದ್ದಾರೆ ಪಾಕ್ ಮಂದಿ.

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ ‘ರಾಮಾಯಣ’ ಚಿತ್ರದ ಟ್ರೇಲರ್ (Ramayana Trailer) ಬಿಡುಗಡೆಯಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಗಡಿ ದಾಟಿ ಪಾಕಿಸ್ತಾನದಲ್ಲೂ ಈ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ. ಜುಲೈ 30ರಂದು ಬಿಡುಗಡೆಯಾದ ಈ ಟ್ರೇಲರ್ ವೀಕ್ಷಿಸಿದ ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ದೃಶ್ಯ ವೈಭವಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಗ್ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ರಾಮಾಯಣ (Ramayana) ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್ ಅವರ ಲುಕ್ ಮತ್ತು ನಟನೆಯನ್ನು ಕಂಡು ಪಾಕ್ ಮಂದಿ ಬೆರಗಾಗಿದ್ದಾರೆ.

ಪಾಕ್ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದ ಟ್ರೇಲರ್:

ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್ ಮಾವಿಯಾ ಉಮರ್ ಫಾರೂಕಿ ಅವರು ‘ರಾಮಾಯಣ’ ಟ್ರೇಲರ್ ವೀಕ್ಷಿಸಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಿಯಾಕ್ಷನ್ ವಿಡಿಯೋ ಹಂಚಿಕೊಂಡಿದ್ದಾರೆ. ‘ಪಾಕಿಸ್ತಾನಿ ಪ್ರೇಕ್ಷಕನಾಗಿ ಹೇಳುವುದಾದರೆ, ರಾಮಾಯಣ ಟ್ರೇಲರ್ ಅದ್ಭುತವಾಗಿದೆ. ಭಾರತ ಮತ್ತು ಬಾಲಿವುಡ್‌ಗೆ ಇಷ್ಟೊಂದು ಹಣ ಎಲ್ಲಿಂದ ಸಿಗುತ್ತದೆ? 1,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಹಾಲಿವುಡ್ ಮಟ್ಟದ VFX ತಂತ್ರಜ್ಞಾನ ಬಳಸಲಾಗಿದೆ. ಇದು ಭಾರತೀಯ ಸಿನಿಮಾ ಹಾಗೂ ಹಿಂದೂ ಧರ್ಮದ ಇತಿಹಾಸ. ಆದರೆ ಒಬ್ಬ ಪಾಕಿಸ್ತಾನಿಯಾಗಿ ನನಗೂ ಈ ಟ್ರೇಲರ್ ನೋಡಿ ರೋಮಾಂಚನವಾಗಿದೆ’ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಈ ಚಿತ್ರದ ಒಟ್ಟು ಬಜೆಟ್ 1,000 ಕೋಟಿ ಅಲ್ಲ, ಬದಲಿಗೆ ಬರೋಬ್ಬರಿ 4,000 ಕೋಟಿ ರೂಪಾಯಿ ಎಂದು ಭಾರತೀಯ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಅವರಿಗೆ ಸರಿಯಾದ ಮಾಹಿತಿಯನ್ನು ನೀಡಿದ್ದಾರೆ. ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ದೃಶ್ಯಕಾವ್ಯದ ಮೊದಲ ಭಾಗವು ಈ ವರ್ಷದ ದೀಪಾವಳಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ರಣಬೀರ್, ಯಶ್ ಮತ್ತು ಸಾಯಿ ಪಲ್ಲವಿಗೆ ಜೈಕಾರ:

ಟ್ರೇಲರ್‌ನಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಯಶ್ ಹಾಗೂ ಶ್ರೀರಾಮನ ಪಾತ್ರದಲ್ಲಿರುವ ರಣಬೀರ್ ಕಪೂರ್ ಅವರ ಎಂಟ್ರಿ ಸೀನ್‌ಗಳನ್ನು ಮಾವಿಯಾ ಉಮರ್ ಮುಕ್ತಕಂಠದಿಂದ ಹೊಗಳಿದ್ದಾರೆ. ರಣಬೀರ್ ಮತ್ತು ಯಶ್ ನಡುವಿನ ನಟನಾ ಜುಗಲ್ಬಂದಿ ನೋಡಲು ಕಾತುರನಾಗಿದ್ದೇನೆ ಎಂದಿದ್ದಾರೆ. ಮತ್ತೊಬ್ಬ ಪಾಕಿಸ್ತಾನಿ ಯೂಟ್ಯೂಬರ್ ಹಸ್ನಾತ್ ಖಾನ್, ‘ರಾವಣನ ಪಾತ್ರದಲ್ಲಿ ಯಶ್ ಲುಕ್ ಕ್ರೇಜಿಯಾಗಿದೆ. ಗ್ರಾಫಿಕ್ಸ್ ಹಾಗೂ ಸಾಹಸ ದೃಶ್ಯಗಳ ವಿನ್ಯಾಸ ಅದ್ಭುತವಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್: ನಟಿ ಲಾರಾ ದತ್ತಾ ಸ್ಟೈಲಿಶ್ ಲುಕ್‌ ನೋಡಿ ಟ್ರೋಲ್ ಮಾಡಿದ ಜನ

ಗಮನ ಸೆಳೆದ ಸೀತೆಯ ಪಾತ್ರ:

ಕಂಟೆಂಟ್ ಕ್ರಿಯೇಟರ್ ‘ಪಾಕಿಸ್ತಾನಿ ರಿಯಾಕ್ಷನ್ ಬಾಯ್’ ಹಾಗೂ ‘ಇಮಾನ್ ಮೊಅಜ್ಜಮ್ ಎಂಟರ್‌ಟೇನ್‌ಮೆಂಟ್’ ಚಾನೆಲ್‌ನವರು ಸಾಯಿ ಪಲ್ಲವಿ ಅವರ ಸೀತೆಯ ಪಾತ್ರವನ್ನು ಶ್ಲಾಘಿಸಿದ್ದಾರೆ. ‘ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅತ್ಯಂತ ದೈವಿಕವಾಗಿ ಹಾಗೂ ಸರಳತೆಯಿಂದ ಕಂಗೊಳಿಸುತ್ತಿದ್ದಾರೆ’ ಎಂದು ಹೊಗಳಿದ್ದಾರೆ. ಟ್ರೇಲರ್‌ನಲ್ಲಿ ಕೈಕೇಯಿ ನೀಡಿದ ಮಾತಿನಂತೆ ಶ್ರೀರಾಮ 14 ವರ್ಷಗಳ ವನವಾಸಕ್ಕೆ ತೆರಳುವುದು, ಸೀತೆ ಹಾಗೂ ಲಕ್ಷ್ಮಣ ಜೊತೆಯಾಗುವುದು ಮತ್ತು ರಾಮ-ರಾವಣರ ನಡುವಿನ ಯುದ್ಧದ ಸನ್ನಿವೇಶಗಳನ್ನು ಭವ್ಯವಾಗಿ ತೋರಿಸಲಾಗಿದೆ. ಆದರೆ, ಇಡೀ ಟ್ರೇಲರ್‌ನಲ್ಲಿ ಹನುಮಂತನ ಪಾತ್ರದ ಯಾವುದೇ ಸುಳಿವು ನೀಡದಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ