Bigg Boss: ‘ಬಿಗ್​ ಬಾಸ್​ ನಿರೂಪಕರನ್ನು ಬದಲಾಯಿಸಿ ಪ್ಲೀಸ್​’: ಹೊಸ ಸೀಸನ್​ ಶುರುವಿಗೂ ಮುನ್ನವೇ ಜನರಿಂದ ಭಾರಿ ಒತ್ತಾಯ

ಬಿಗ್​ ಬಾಸ್​ನಲ್ಲಿ ನಿರೂಪಕರು ಯಾರು ಎಂಬುದರ ಮೇಲೆ ಇಡೀ ಶೋನ ಮಜಾ ನಿರ್ಧಾರ ಆಗಿರುತ್ತದೆ. ಹಾಗಾಗಿ ಒಳ್ಳೆಯ ನಿರೂಪಕರಿಗಾಗಿ ವೀಕ್ಷಕರ ವಲಯದಿಂದ ಬೇಡಿಕೆ ಕೇಳಿಬರುತ್ತಿದೆ.

Bigg Boss: ‘ಬಿಗ್​ ಬಾಸ್​ ನಿರೂಪಕರನ್ನು ಬದಲಾಯಿಸಿ ಪ್ಲೀಸ್​’: ಹೊಸ ಸೀಸನ್​ ಶುರುವಿಗೂ ಮುನ್ನವೇ ಜನರಿಂದ ಭಾರಿ ಒತ್ತಾಯ
ಬಿಗ್​ ಬಾಸ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 15, 2021 | 8:53 AM

ಕನ್ನಡ ಬಿಗ್​ ಬಾಸ್​ ಸೀಸನ್​ 8ಕ್ಕೆ ಇತ್ತೀಚೆಗಷ್ಟೇ ತೆರೆಬಿದ್ದಿದೆ. ಮಂಜು ಪಾವಗಡ ಅವರು ಬಿಗ್​ ಬಾಸ್​ ಟ್ರೋಫಿ ಎತ್ತಿ ಹಿಡಿದಿರುವುದು ಅವರ ಅಭಿಮಾನಿಗಳಿಗೆ ಸಖತ್​ ಖುಷಿ ನೀಡಿದೆ. ಮುಂದಿನ ಸೀಸನ್​ ಆದಷ್ಟು ಬೇಗ ಶುರುವಾಗಲಿ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಹೊಸ ಸೀಸನ್​ನಲ್ಲೂ ಕಿಚ್ಚ ಸುದೀಪ್ (Kichcha Sudeep)​ ಅವರೇ ನಿರೂಪಣೆ ಮಾಡಲಿದ್ದಾರೆ. ಆದರೆ ಬೇರೆ ಭಾಷೆಯ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ನಿರೂಪಕರ ಆಯ್ಕೆ ಬಗ್ಗೆ ವೀಕ್ಷಕರಿಗೆ ಕಿರಿಕಿರಿ ಎನಿಸಿದೆ. ತೆಲುಗು ಬಿಗ್ ಬಾಸ್​ಗೆ ಜ್ಯೂ. ಎನ್​ಟಿಆರ್​, ನಾನಿ ಮತ್ತು ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ಹೋಸ್ಟ್​ ಆಗಿ ಕೆಲಸ ಮಾಡಿದ್ದರು. ಹೊಸ ಸೀಸನ್​ನಲ್ಲಿ ದಯವಿಟ್ಟು ನಿರೂಪಕರನ್ನು ಬದಲಾಯಿಸಿ ಎಂಬ ಕೂಗು ವೀಕ್ಷಕರ ವಯಲದಿಂದ ಕೇಳಿಬರುತ್ತಿದೆ.

ಈವರೆಗೂ ತೆಲುಗು ಬಿಗ್​ ಬಾಸ್​ ಕಾರ್ಯಕ್ರಮವು 4 ಸೀಸನ್​ಗಳನ್ನು ಪೂರ್ಣಗೊಳಿಸಿದೆ. 5ನೇ ಸೀಸನ್​ಗೆ ಸಿದ್ಧತೆಗಳು ನಡೆದಿವೆ. ಮೂರು ಮತ್ತು ನಾಲ್ಕನೇ ಸೀಸನ್​ಗೆ ನಿರೂಪಕರಾಗಿದ್ದ ನಾಗಾರ್ಜುನ ಅವರೇ 5ನೇ ಸೀಸನ್​ನಲ್ಲೂ ಮುಂದುವರಿಯಲಿದ್ದಾರೆ ಎಂಬುದು ಖುಚಿತವಾಗಿದೆ. ಆ.14ರಂದು ಹೊಸ ಸೀಸನ್​ನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಅದನ್ನು ಕಂಡು ವೀಕ್ಷಕರು ನಿರಾಶರಾಗಿದ್ದಾರೆ.

ಒಂದು ವರ್ಗದ ವೀಕ್ಷಕರಿಗೆ ನಾಗಾರ್ಜುನ ನಿರೂಪಣೆ ಮಾಡುವ ಶೈಲಿ ಇಷ್ಟವಾಗಿಲ್ಲ. ಹಾಗಾಗಿ ಈ ಬಾರಿ ದಯವಿಟ್ಟು ನಾಗಾರ್ಜುನ ಬಿಗ್​ ಬಾಸ್​ ನಿರೂಪಣೆ ಮಾಡುವುದು ಬೇಡ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಪ್ರೋಮೋದಲ್ಲಿ ನಾಗಾರ್ಜುನ ಅವರನ್ನು ಕಂಡ ಅನೇಕರು ಕಮೆಂಟ್​ಗಳ ಮೂಲಕ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಅವರ ಬದಲಿಗೆ ದಯವಿಟ್ಟು ನಟ ನಾನಿ ಅವರನ್ನು ಕರೆತನ್ನಿ ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಈಗಾಗಲೇ ನಾಗಾರ್ಜುನ ಜೊತೆ ‘ಸ್ಟಾರ್​ ಮಾ’ ಮಾಹಿನಿ ಒಪ್ಪಂದ ಮಾಡಿಕೊಂಡಿರುವುದರಿಂದ 5ನೇ ಸೀಸನ್​ನಲ್ಲೂ ಅವರೇ ನಿರೂಪಕರಾಗಿ ಮುಂದುವರಿಯಲಿದ್ದಾರೆ.

ತಮ್ಮ ಸಿನಿಮಾಗಳ ಶೂಟಿಂಗ್​ ಇದ್ದಾಗ ನಾಗಾರ್ಜುನ ಅವರು ಬಿಗ್​ ಬಾಸ್​ ನಿರೂಪಣೆಗೆ ಚಕ್ಕರ್​ ಹಾಕುತ್ತಾರೆ. ಮೂರು ಮತ್ತು ನಾಲ್ಕನೇ ಸೀಸನ್​ನಲ್ಲಿ ಅದೇ ರೀತಿ ಆಗಿತ್ತು. ಆಗ ಅವರ ಬದಲಿಗೆ ಒಮ್ಮೆ ರಮ್ಯಾ ಕೃಷ್ಣ ಹಾಗೂ ಇನ್ನೊಮ್ಮೆ ಸಮಂತಾ ಅಕ್ಕಿನೇನಿ ಬಂದು ನಿರೂಪಣೆ ಮಾಡಿದ್ದರು. ಈ ಬಾರಿ ಕೂಡ ಅದು ಮರುಕಳಿಸಿದರೆ ಅಚ್ಚರಿ ಏನಿಲ್ಲ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಹೆಸರು ಹೇಳಿಕೊಂಡು ಹಣ ಲೂಟಿ; ಸಿಕ್ಕಿ ಬಿದ್ದ ಇಬ್ಬರು ಖದೀಮರು

‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ