AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್​

Divya Suresh | Manju Pavagada: ಬಿಗ್ ಬಾಸ್​ ಫಿನಾಲೆ ವೇದಿಕೆಯಲ್ಲಿ ಮದುವೆ ಬಗ್ಗೆ ಮಾತು ಬಂದಿದೆ. ‘ಆಗಲೇ ನಾನು ಮಂಜು ಅವರ ಅಪ್ಪ-ಅಮ್ಮನ ಹತ್ತಿರ ಮದುವೆ ಬಗ್ಗೆ ಮಾತನಾಡುತ್ತಿದ್ದೆ. ಮಂಜು ಮದುವೆ ಯಾವಾಗ ಮಾಡ್ತೀರ ಅಂತ ಕೇಳಿದೆ’ ಎಂದು ದಿವ್ಯಾ ಸುರೇಶ್​ ಹೇಳಿದರು.

‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್​
ದಿವ್ಯಾ ಸುರೇಶ್​, ಮಂಜು ಪಾವಗಡ
TV9 Web
| Edited By: |

Updated on: Aug 08, 2021 | 11:36 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆಯನ್ನು (Bigg Boss Finale) ಕಿಚ್ಚ ಸುದೀಪ್​ ಅವರು ತುಂಬಾ ಲವಲವಿಕೆಯಿಂದ ನಡೆಸಿಕೊಟ್ಟಿದ್ದಾರೆ. ಯಾರು ವಿನ್ನರ್​ ಎಂಬುದನ್ನು ತಿಳಿಸುವುದರ ಜೊತೆಗೆ ಹಲವು ವಿಚಾರಗಳು ಈ ವೇದಿಕೆಯಲ್ಲಿ ಚರ್ಚೆ ಆಗಿವೆ. ಹತ್ತು ಹಲವು ತಮಾಷೆಯ ಮಾತುಗಳ ಮೂಲಕ ಇಡೀ ವಾತಾವರಣವನ್ನು ಸುದೀಪ್​ ರಂಗಾಗಿಸಿದ್ದಾರೆ. ಈ ವೇಳೆ ಮಂಜು ಪಾವಗಡ ಮತ್ತು ಅರವಿಂದ್​ ಕೆಪಿ ಅವರ ಮದುವೆ ಬಗ್ಗೆ ಒಂದು ಪ್ರಶ್ನೆ ಎದುರಾಯಿತು. ಅದಕ್ಕೆ ಸಂಬಂಧಪಟ್ಟಂತೆ ದಿವ್ಯಾ ಸುರೇಶ್​ (Divya Suresh) ಕೂಡ ತಮ್ಮ ಅಭಿಪ್ರಾಯ ಹೇಳಿಕೊಂಡರು. ಮಂಜು (Manju Pavagada) ಮದುವೆ ಬಗ್ಗೆ ಅವರ ತಂದೆ-ತಾಯಿ ಬಳಿ ದಿವ್ಯಾ ಸುರೇಶ್​ ಮಾತನಾಡಿದ್ದಾರೆ ಎಂಬುದು ಆಗಲೇ ಗೊತ್ತಾಯಿತು.

‘ಅರವಿಂದ್​ಗಿಂತಲೂ ಮೊದಲು ಮಂಜು ಪಾವಗಡ ಮದುವೆ ಆಗುತ್ತಾರೆ. ಹೌದೋ ಅಲ್ಲವೋ’ ಎಂದು ಸುದೀಪ್​ ಪ್ರಶ್ನೆ ಕೇಳಿದರು. ಅದಕ್ಕೆ ಹಲವು ಉತ್ತರಗಳು ಬಂದವು. ‘ಮಂಜು ತುಂಬಾ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಆ ಗುರಿಯನ್ನು ಮುಟ್ಟುವವರೆಗೂ ಅವರು ಮದುವೆ ಆಗುವುದಿಲ್ಲ’ ಎಂದು ಶಂಕರ್​ ಅಶ್ವತ್ಥ್​​ ಹೇಳಿದರು. ಆ ಮಾತಿಗೆ ರಾಜೀವ್​ ಕೂಡ ಧ್ವನಿಗೂಡಿಸಿದರು. ‘ಮಂಜುಗೆ ಈಗಾಗಲೇ ಅವರ ಅಪ್ಪ-ಅಮ್ಮ ಒಂದು ಹುಡುಗಿಯನ್ನು ಫಿಕ್ಸ್​ ಮಾಡಿದ್ದಾರೆ ಅನಿಸುತ್ತದೆ. ಹಾಗಾಗಿ ಮಂಜು ಬೇಗ ಮದುವೆ ಆಗುತ್ತಾರೆ’ ಎಂದು ರಘು ಗೌಡ ಹೇಳಿದರು.

ಈ ವೇಳೆ ದಿವ್ಯಾ ಮಾತು ಗಮನ ಸೆಳೆಯಿತು. ‘ಆಗಲೇ ನಾನು ಮಂಜು ಅವರ ಅಪ್ಪ-ಅಮ್ಮನ ಹತ್ತಿರ ಮದುವೆ ಬಗ್ಗೆ ಮಾತನಾಡುತ್ತಿದ್ದೆ. ಮಂಜು ಮದುವೆ ಯಾವಾಗ ಮಾಡ್ತೀರ ಅಂತ ಕೇಳಿದೆ. ಅವನು ಆಡ್ತಾ ಇರೋದು ನೋಡಿದರೆ ಬಿಗ್​ ಬಾಸ್​ನಿಂದ ಹೊರಬಂದ ತಕ್ಷಣ ಮದುವೆ ಆಗ್ತಾನೆ ಅನಿಸುತ್ತೆ ಅಂದ್ರು. ಮದುವೆ ಆಗ್ಬೇಕು ಅಂತ ಆಗಾಗ ಹೇಳ್ತಾ ಇರೋದರಿಂದ ತಕ್ಷಣ ಮದುವೆ ಆಗಬಹುದು ಎನಿಸುತ್ತದೆ’ ಎಂದು ದಿವ್ಯಾ ಸುರೇಶ್​ ಹೇಳಿದರು.

ಬಿಗ್​ ಬಾಸ್​ ಮನೆಯಲ್ಲಿ ಇದ್ದಷ್ಟು ದಿನವೂ ದಿವ್ಯಾ ಸುರೇಶ್​ ಮತ್ತು ಮಂಜು ಪಾವಗಡ ನಡುವೆ ಒಂದು ರೀತಿಯ ಆತ್ಮೀಯತೆ ಇತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಇಬ್ಬರೂ ತುಂಬಾ ಆಪ್ತವಾಗಿ ನಡೆದುಕೊಳ್ಳುತ್ತಿದ್ದರು. ಪರಸ್ಪರ ಹೆಚ್ಚು ಸಮಯ ಜೊತೆಯಾಗಿ ಕಳೆಯುತ್ತಿದ್ದರು. ಅದು ಕೆಲವರಿಂದ ಟೀಕೆಗೂ ಒಳಗಾಯಿತು. ಸೆಕೆಂಡ್​ ಇನ್ನಿಂಗ್ಸ್​ ಮುಗಿಯುವಾಗ ದಿವ್ಯಾ ಅವರು ‘ಮಂಜು ನನ್ನ ಬೆಸ್ಟ್​ ಫ್ರೆಂಡ್​’ ಎಂದು ಹೇಳಿದ್ದು ಮಾತ್ರವಲ್ಲದೇ ಬಿಗ್​ ಬಾಸ್​ ಬಳಿ ಮನವಿ ಮಾಡಿಕೊಂಡು ವಿಶೇಷ ಕೇಕ್​ ತರಿಸಿ ಫ್ರೆಂಡ್​ಶಿಪ್​ ಡೇ ಆಚರಿಸಿದ್ದರು.

ಇದನ್ನೂ ಓದಿ:

Bigg Boss Finale: ಬಿಗ್​ ಬಾಸ್​ನಿಂದ ದಿವ್ಯಾ ಉರುಡುಗ ಔಟ್​; ಆಪ್ತ ಗೆಳತಿಯನ್ನೇ ಹಿಂದಿಕ್ಕಿದ ಅರವಿಂದ್​​ ಕೆಪಿ

‘ಅಂದು ನನ್ನ ಜೀವನ ಮುಗಿಯಿತು ಅಂದುಕೊಂಡಿದ್ದೆ’; ಭೀಕರ ಅಪಘಾತ ನೆನಪಿಸಿಕೊಂಡ ಮಂಜು ಪಾವಗಡ

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ