AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Finale: ಬಿಗ್​ ಬಾಸ್​ನಿಂದ ದಿವ್ಯಾ ಉರುಡುಗ ಔಟ್​; ಆಪ್ತ ಗೆಳತಿಯನ್ನೇ ಹಿಂದಿಕ್ಕಿದ ಅರವಿಂದ್​​ ಕೆಪಿ

Divya Uruduga: ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆಗೆ ಎಂಟ್ರಿ ಪಡೆಯುವ ಮೂಲಕ ನಟಿ ದಿವ್ಯಾ ಉರುಡುಗ ಅವರು ಭರವಸೆ ಮೂಡಿಸಿದ್ದರು. ಆದರೆ ಇನ್ನೇನು ಟ್ರೋಫಿ ಕೈಯಲ್ಲಿ ಹಿಡಿಯಬೇಕು ಎನ್ನುವಷ್ಟರಲ್ಲಿ ಅವರು ಎಲಿಮಿನೇಟ್​ ಆಗಿದ್ದಾರೆ.

Bigg Boss Finale: ಬಿಗ್​ ಬಾಸ್​ನಿಂದ ದಿವ್ಯಾ ಉರುಡುಗ ಔಟ್​; ಆಪ್ತ ಗೆಳತಿಯನ್ನೇ ಹಿಂದಿಕ್ಕಿದ ಅರವಿಂದ್​​ ಕೆಪಿ
ದಿವ್ಯಾ ಉರುಡುಗ
TV9 Web
| Updated By: ಮದನ್​ ಕುಮಾರ್​|

Updated on:Aug 08, 2021 | 10:50 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆ (Bigg Boss Finale) ಎಪಿಸೋಡ್​ನಲ್ಲಿ ದಿವ್ಯಾ ಉರುಡುಗ (Divya Uruduga) ಎಲಿಮಿನೇಟ್​ ಆಗಿದ್ದಾರೆ. 120 ದಿನಗಳ ಕಾಲ ಕಠಿಣ ಪೈಪೋಟಿ ನೀಡಿದ್ದ ಅವರು ಫಿನಾಲೆ ಪ್ರವೇಶಿಸುವಲ್ಲಿ ಯಶಸ್ವಿ ಆಗಿದ್ದರು. ಟಾಪ್​ 3 ಸ್ಪರ್ಧಿಗಳಲ್ಲಿ ಸ್ಥಾನ ಪಡೆಯುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರಿಗೆ ಹಿನ್ನಡೆ ಆಗಿದೆ. ವೀಕ್ಷಕರಿಂದ ಹೆಚ್ಚು ವೋಟ್​ ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ. ಮಂಜು ಪಾವಗಡ, ಅರವಿಂದ್​ ಕೆಪಿ (Aravind KP) ಮತ್ತು ದಿವ್ಯಾ ಉರುಡುಗ ಫಿನಾಲೆ ಪ್ರವೇಶಿಸಿದ್ದರು. ದಿವ್ಯಾಗಿಂತಲೂ ಅರವಿಂದ್​ ಹೆಚ್ಚು ವೋಟ್​ ಪಡೆಯುವ ಮೂಲಕ ತಮ್ಮ ಆಪ್ತ ಸ್ನೇಹಿತೆಯನ್ನೇ ಹಿಂದಿಕ್ಕಿದ್ದಾರೆ. ಈಗ ಮಂಜು ಮತ್ತು ಅರವಿಂದ್​ ನಡುವೆ ಹಣಾಹಣಿ ಮುಂದುವರಿದಿದೆ.

ಈ ಸೀಸನ್​ನಲ್ಲಿ ಅರವಿಂದ್​ ಕೆಪಿ ಮತ್ತು ದಿವ್ಯಾ ಉರುಡುಗ ಅವರು ಬೆಸ್ಟ್​ ಜೋಡಿ ಆಗಿದ್ದರು. ಎಲ್ಲ ವಿಚಾರದಲ್ಲಿಯೂ ಒಬ್ಬರಿಗೊಬ್ಬರು ಸಪೋರ್ಟ್​ ಮಾಡಿಕೊಳ್ಳುತ್ತ ಮುಂದೆ ಸಾಗುತ್ತಿದ್ದರು. ಇಬ್ಬರೂ ರಿಯಲ್​ ಲೈಫ್​ನಲ್ಲಿ ಕೂಡ ಜೊತೆಯಾಗಿದ್ದರೆ ಚೆಂದ ಎಂದು ವೀಕ್ಷಕರು ಮಾತನಾಡಿಕೊಳ್ಳುವ ಮಟ್ಟಕ್ಕೆ ಈ ಜೋಡಿಯ ನಡುವೆ ಬಾಂಧವ್ಯ ಇತ್ತು. ಅಂತಿಮವಾಗಿ ಅವರಿಬ್ಬರ ನಡುವೆಯೇ ಬಿಗ್​ ಬಾಸ್​ ಫಿನಾಲೆಯ ಟಫ್​ ಕಾಂಪಿಟೀಷನ್​ ನಡೆಯಿತು.

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗಗೆ ಹೋಲಿಸಿದರೆ ಅರವಿಂದ್​​ ಅವರಿಗೆ ಜನಪ್ರಿಯತೆ ಜಾಸ್ತಿ ಇತ್ತು. ಅವರು ಮನರಂಜನೆ ಕ್ಷೇತ್ರದಿಂದ ಬಾರದಿದ್ದರೂ ಹೆಚ್ಚು ವೋಟ್​ ಪಡೆಯುವಲ್ಲಿ ಯಶಸ್ವಿ ಆದರು. ಟಾಸ್ಕ್​ನಲ್ಲಿಯೂ ಅವರು ಹಿಂದೆ ಬಿದ್ದಿರಲಿಲ್ಲ. ಅವರ ಜೊತೆ ಹೆಚ್ಚು ಆಪ್ತವಾಗಿ ಗುರುತಿಸಿಕೊಂಡಿದ್ದೇ ದಿವ್ಯಾಗೆ ಮುಳುವಾಗಿರಬಹುದು ಎಂಬ ಅಭಿಪ್ರಾಯ ವೀಕ್ಷಕರ ವರ್ಗದಿಂದ ಕೇಳಿಬರುತ್ತಿದೆ.

ತಾವು ಔಟ್​ ಎಂದು ಗೊತ್ತಾದ ತಕ್ಷಣ ದಿವ್ಯಾ ಉರುಡುಗ ಭಾವುಕರಾದರು. ಅವರಿಗಿಂತಲೂ ಹೆಚ್ಚಾಗಿ ಅರವಿಂದ್​ ಅವರು ಎಮೋಷನಲ್​ ಆದರು. ಕಣ್ಣೀರು ಹಾಕುತ್ತಲೇ ದಿವ್ಯಾ ಅವರು ತಮ್ಮ ಬಿಗ್​ ಬಾಸ್​ ಜರ್ನಿಗೆ ಅಂತ್ಯ ಹಾಡಿದರು. ಅವರ ಕಣ್ಣೀರು ಒರೆಸಿ ಅರವಿಂದ್​ ಮತ್ತು ಮಂಜು ಬೀಳ್ಕೊಟ್ಟರು. ‘ಇದು ನನ್ನ ಅದ್ಭುತ ಅನುಭವ. ಇದನ್ನು ನಾನು ಜೀವನ ಪರ್ಯಂತ ಕಾಪಾಡಿಕೊಳ್ಳುತ್ತೇನೆ’ ಎಂದು ದೊಡ್ಮನೆಯೊಳಗೆ ದಿವ್ಯಾ ಕೊನೇ ಮಾತುಗಳನ್ನು ಆಡಿದರು.​

ಇದನ್ನೂ ಓದಿ:

Bigg Boss Finale: ಬಿಗ್​ ಬಾಸ್​​ ಸ್ಕ್ರಿಪ್ಟೆಡ್ ಶೋ ಹೌದೋ ಅಲ್ಲವೋ? ಸುದೀಪ್​ ಎದುರು ನೇರವಾಗಿ ಉತ್ತರ ಕೊಟ್ಟ ವೈಷ್ಣವಿ

ಬಿಗ್​ ಬಾಸ್​ ಪ್ರಶಸ್ತಿ ಮೊತ್ತದಲ್ಲಿ ಏರಿಕೆ; ಟಾಪ್​ 5ನಲ್ಲಿರುವ ಎಲ್ಲರಿಗೂ ಸಿಗುತ್ತಿದೆ ಪ್ರೈಜ್​​​ ಅಮೌಂಟ್​

Published On - 10:33 pm, Sun, 8 August 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ