Bigg Boss Finale: ಬಿಗ್​ ಬಾಸ್​​ ಸ್ಕ್ರಿಪ್ಟೆಡ್ ಶೋ ಹೌದೋ ಅಲ್ಲವೋ? ಸುದೀಪ್​ ಎದುರು ನೇರವಾಗಿ ಉತ್ತರ ಕೊಟ್ಟ ವೈಷ್ಣವಿ

Vaishnavi Gowda: ವೈಷ್ಣವಿ ಟಾಪ್​ 4ರ ಸ್ಥಾನಕ್ಕೆ ಬರುತ್ತಾರೆ ಎಂದು ಹೆಚ್ಚಿನ ಜನರು ನಿರೀಕ್ಷಿಸಿರಲಿಲ್ಲ. ಅವರಿಗೆ ಬಿಗ್​ ಬಾಸ್​ ಶೋ ಸೂಕ್ತ ಅಲ್ಲ ಎಂಬ ಅಭಿಪ್ರಾಯ ಇಟ್ಟುಕೊಂಡಿದ್ದ ಅನೇಕರಿಗೆ ವೈಷ್ಣವಿ ಈಗ ಉತ್ತರ ನೀಡಿದ್ದಾರೆ.

Bigg Boss Finale: ಬಿಗ್​ ಬಾಸ್​​ ಸ್ಕ್ರಿಪ್ಟೆಡ್ ಶೋ ಹೌದೋ ಅಲ್ಲವೋ? ಸುದೀಪ್​ ಎದುರು ನೇರವಾಗಿ ಉತ್ತರ ಕೊಟ್ಟ ವೈಷ್ಣವಿ
ವೈಷ್ಣವಿ ಗೌಡ
Follow us
| Updated By: ಮದನ್​ ಕುಮಾರ್​

Updated on: Aug 08, 2021 | 8:18 PM

ನಟಿ ವೈಷ್ಣವಿ ಗೌಡ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ತುಂಬ ಭಿನ್ನವಾಗಿ ಗುರುತಿಸಿಕೊಂಡಿದ್ದರು. ಆರಂಭದಲ್ಲಿ ಅವರು ಇದ್ದ ರೀತಿಗೂ ನಂತರದಲ್ಲಿ ಅವರು ಕಾಣಿಸಿಕೊಂಡ ರೀತಿಗೂ ತುಂಬಾ ವ್ಯತ್ಯಾಸ ಇತ್ತು. ಬಿಗ್​ ಬಾಸ್​ ಶೋಗೆ ಬರುವುದಕ್ಕಿಂತಲೂ ಮುನ್ನ ವೈಷ್ಣವಿ (Vaishnavi Gowda) ಯಾವುದೇ ವಿವಾದಕ್ಕೆ ಸಿಲುಕಿಕೊಂಡಿರಲಿಲ್ಲ. ಆದರೆ ಬಿಗ್​ ಬಾಸ್​ ಎಂದರೆ ಒಂದು ವಿವಾದಾತ್ಮಕ ಶೋ ಎನ್ನುವ ಭಾವನೆ ಬಹುತೇಕರಲ್ಲಿ ಇದೆ. ಹಾಗಾಗಿ ಇದು ವೈಷ್ಣವಿಯಂಥವರಿಗೆ ಸೂಕ್ತ ಆಗುವ ಕಾರ್ಯಕ್ರಮ ಅಲ್ಲ ಎಂದು ಅನೇಕರು ಹೇಳಿದ್ದರಂತೆ. ಅಲ್ಲದೆ, ಇದು ಒಂದು ಸ್ಕ್ರಿಪ್ಟೆಡ್​ ಶೋ ಎಂದು ಸಹ ಹಲವರು ಜರಿದಿದ್ದರು. ಅದಕ್ಕೆಲ್ಲ ಈಗ ವೈಷ್ಣವಿ ಗೌಡ ಉತ್ತರ ನೀಡಿದ್ದಾರೆ.

ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ವೈಷ್ಣವಿ ಅವರನ್ನು ವೇದಿಕೆಗೆ ಕರೆದು ಸುದೀಪ್​ ಮಾತನಾಡಿಸಿದರು. ಆಗ ಈ ಎಲ್ಲ ವಿಚಾರಗಳು ಚರ್ಚೆಗೆ ಬಂದವು. ‘ಈ ಶೋ ನನ್ನಂಥವಳಿಗೆ ಅಲ್ಲ ಎಂಬ ಭಾವನೆ ಹಲವರಿಗೆ ಇತ್ತು. ಇಂದು ಅವರಿಗೆ ಅರಿವಾಗಿದೆ. ನಾನು ಭಿನ್ನವಾಗಿದ್ದೇನೆ ಎಂಬುದನ್ನು ತೋರಿಸಿದ್ದೇನೆ. ಎಲ್ಲರ ಪ್ರೀತಿ ಗಳಿಸಿದ್ದೇನೆ. ಅದು ಎಷ್ಟು ಕೋಟಿ ಕೊಟ್ಟರೂ ಸಿಗುವುದಿಲ್ಲ. ಸ್ವಾತಂತ್ರ್ಯದ ನಿಜವಾದ ರುಚಿ ಸಿಕ್ಕಿದ್ದೇ ನನಗೆ ಈ ಮನೆಯಲ್ಲಿ. ನಾನು ಸ್ವಂತಿಕೆಯಿಂದ ಇದ್ದೆ. ಯಾರ ಪ್ರಭಾವವೂ ನನ್ನ ಮೇಲೆ ಇರಲಿಲ್ಲ. ಇಲ್ಲಿ ಯಾವುದೂ ಸ್ಕ್ರಿಪ್ಟೆಡ್​ ಆಗಿರಲಿಲ್ಲ. ಇದನ್ನೆಲ್ಲ ಸ್ಕ್ರಿಪ್ಟ್​ ಮಾಡಲು ಸಾಧ್ಯವೇ ಇಲ್ಲ’ ಎಂದು ವೈಷ್ಣವಿ ಹೇಳಿದ್ದಾರೆ.

‘ಈ ಶೋಗೆ ಬರುವಾಗ ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಎಷ್ಟು ದಿನ ಸಾಧ್ಯವೋ ಅಷ್ಟು ಖುಷಿಯಾಗಿ ಇರಬೇಕು ಎಂದುಕೊಂಡಿದ್ದೆ. 120 ದಿನ ಪೂರ್ಣಗೊಳಿಸಿದ್ದಕ್ಕೆ ನನಗೆ ಖುಷಿ ಇದೆ. ಟಾಪ್​ 4ರವರೆಗೆ ಬಂದಿದ್ದಕ್ಕೆ ನನಗೆ ಹೆಮ್ಮೆ ಇದೆ. ಫಲಿತಾಂಶ ನಮ್ಮ ಕೈಯಲ್ಲಿ ಇಲ್ಲ. ನಾನು ನನ್ನ ಪ್ರಯತ್ನ ಮಾಡಿದ್ದೇನೆ’ ಎಂದು ತಮ್ಮ ಎಲಿಮಿನೇಷನ್​ ಬಗ್ಗೆ ವೈಷ್ಣವಿ ಮಾತನಾಡಿದ್ದಾರೆ.

ಇದನ್ನೂ ಓದಿ:

Vaishnavi Gowda: ದೊಡ್ಮನೆಯೊಳಗೆ ವೈಷ್ಣವಿ ಜೊತೆ ಚೆನ್ನಾಗಿದ್ದ ರಘು ಗೌಡ ಫಿನಾಲೆ ವೇಳೆಗೆ ಪ್ರಚಾರ ಮಾಡಿದ್ದು ಯಾರ ಪರವಾಗಿ?

‘ನಾನು ಮನುಷ್ಯಳೇ’; ಸುದೀಪ್​ ಎದುರು ವೈಷ್ಣವಿ ಹೀಗೆ ಹೇಳಿದ್ದೇಕೆ?

ಬಿಗ್​ ಬಾಸ್​ ಮನೆಯಲ್ಲಿ ಕೊನೇ ದಿನದ ವೇಕ್​ಅಪ್​ ಸಾಂಗ್​ ಯಾವುದು? ವೀಕ್ಷಕರಿಂದ ಬಗೆಬಗೆಯ ಕಮೆಂಟ್​

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್