ಶಿವರಾಜ್ಕುಮಾರ್ ಆಶೀರ್ವಾದ ಪಡೆದ ಮಂಜು ಪಾವಗಡ; ಇಲ್ಲಿವೆ ಫೋಟೋಗಳು
‘ಒಂದೇ ಒಂದು ಆಸೆ ಇದೆ. ಶಿವಣ್ಣ ಅಂದ್ರೆ ಇಷ್ಟ. ಅವರ ಕಡೆಯಿಂದ ಆಶೀರ್ವಾದ ಬೇಕು. ಇದು ನನ್ನ ಆಸೆ. ಪ್ಲೀಸ್, ದಯವಿಟ್ಟು ಇದನ್ನು ನೆರವೇರಿಸಿ’ ಎಂದು ಮಂಜು ಬಿಗ್ ಬಾಸ್ ಮನೆಯಲ್ಲಿ ಕೇಳಿಕೊಂಡಿದ್ದರು.
ನಟ ಶಿವರಾಜ್ಕುಮಾರ್ ಅವರ ಬಗ್ಗೆ ಮಂಜು ಪಾವಗಡ ವಿಶೇಷ ಗೌರವ ಹೊಂದಿದ್ದಾರೆ. ಶಿವರಾಜ್ಕುಮಾರ್ ಅವರ ದೊಡ್ಡ ಫ್ಯಾನ್ ನಾನು ಎಂದು ಮಂಜು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದರು. ಅಲ್ಲದೆ, ಶಿವರಾಜ್ಕುಮಾರ್ ಅವರಿಂದ ವಿಶೇಷ ವಿಶ್ ಕೂಡ ಪಡೆದುಕೊಂಡಿದ್ದರು. ಈಗ ಮಂಜು ‘ಬಿಗ್ ಬಾಸ್ ಕನ್ನಡ ಸೀಸನ್ 8ರ ವಿಜಯದ ಮಾಲೆ ಹಾಕಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಅವರು ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
1 / 5
ನಾಗಾವರದಲ್ಲಿರುವ ಶಿವರಾಜ್ಕುಮಾರ್ ಅವರ ಮನೆಗೆ ಇಂದು (ಆಗಸ್ಟ್ 11) ಮಂಜು ತೆರಳಿದ್ದಾರೆ. ವಿಶೇಷ ಎಂದರೆ, ಮಂಜು ಟ್ರೋಫಿಯೊಂದಿಗೆ ತೆರಳಿ, ಶಿವರಾಜ್ಕುಮಾರ್ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಸದ್ಯ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2 / 5
Shiva Rajkumar Wishes Manju Pavagada For Bigg Boss Kannada 8 Finale
3 / 5
‘ಹಾಯ್ ಮಂಜು ಬಿಗ್ ಬಾಸ್ ಫಿನಾಲೆಗೆ ಬಂದಿದ್ದೀರಿ. ಇದನ್ನು ಕೇಳಿ ತುಂಬಾನೇ ಖುಷಿ ಆಯ್ತು. ಗೆದ್ದು ಬನ್ನಿ. ಎಲ್ಲರಿಗೂ ಒಳ್ಳೆಯದಾಗಲಿ. ಮಂಜು ನಿಮಗೆ ಮತ್ತೊಮ್ಮೆ ಆಲ್ ದಿ ಬೆಸ್ಟ್. ಲವ್ ಯೂ’ ಎಂದು ವಿಶ್ ಮಾಡಿದ್ದರು ಶಿವಣ್ಣ. ಈ ವಿಡಿಯೋ ನೋಡಿ ಮಂಜು ಸಾಕಷ್ಟು ಖುಷಿ ಆಗಿದ್ದರು.