‘ಕರ್ಮ ನಿಮ್ಮನ್ನು ಖಂಡಿತವಾಗಿಯೂ ಕಾಡುತ್ತೆ’; ಪ್ರೇರಣಾಗೆ ಅಭಿನವ್​ ಹೀಗೆ ಶಾಪ ಹಾಕಿದ್ದೇಕೆ?

‘ಕರ್ಮ ನಿಮ್ಮನ್ನು ಖಂಡಿತವಾಗಿಯೂ ಕಾಡುತ್ತೆ’; ಪ್ರೇರಣಾಗೆ ಅಭಿನವ್​ ಹೀಗೆ ಶಾಪ ಹಾಕಿದ್ದೇಕೆ?
‘ಕರ್ಮ ನಿಮ್ಮನ್ನು ಖಂಡಿತವಾಗಿಯೂ ಕಾಡುತ್ತೆ’; ಪ್ರೇರಣಾಗೆ ಅಭಿನವ್​ ಹೀಗೆ ಶಾಪ ಹಾಕಿದ್ದೇಕೆ?

ಅಭಿನವ್​ ಹಾಗೂ ಪ್ರೇರಣಾ ಇಬ್ಬರೂ ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಸ್ಪರ್ಧಿಗಳಾಗಿ ತೆರಳಿದ್ದಾರೆ. 17 ಸ್ಪರ್ಧಿಗಳು ಆರು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಇರಲಿದ್ದು ಸ್ಪರ್ಧಿಗಳನ್ನು ರಂಜಿಸಲಿದ್ದಾರೆ

TV9kannada Web Team

| Edited By: Rajesh Duggumane

Aug 14, 2021 | 8:01 PM

ಅಭಿನವ್​ ಅವರು ಅಗಸ್ತ್ಯ ಪಾತ್ರದ ಮೂಲಕ ಹೆಚ್ಚು ಗುರುತಿಸಿಕೊಂಡವರು. ನನ್ನರಸಿ ರಾಧೆ ಧಾರಾವಾಹಿ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಈ ಮಧ್ಯೆ ಅವರು ಕಿರುತೆರೆ ನಟಿ ಪ್ರೇರಣಾಗೆ ಕರ್ಮ ನಿಮ್ಮನ್ನು ಖಂಡಿತವಾಗಿಯೂ ಕಾಡುತ್ತೆ ಎಂದು ಶಾಪ ಹಾಕಿದ್ದಾರೆ. ಅಷ್ಟಕ್ಕೂ ಅಭಿನವ್​ ಹೀಗೆ ಹೇಳೋಕೆ ಕಾರಣವೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಭಿನವ್​ ಹಾಗೂ ಪ್ರೇರಣಾ ಇಬ್ಬರೂ ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಸ್ಪರ್ಧಿಗಳಾಗಿ ತೆರಳಿದ್ದಾರೆ. 17 ಸ್ಪರ್ಧಿಗಳು ಆರು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಇರಲಿದ್ದು ಸ್ಪರ್ಧಿಗಳನ್ನು ರಂಜಿಸಲಿದ್ದಾರೆ. ಇಂದು (ಆಗಸ್ಟ್​ 14) ಬಿಗ್​ ಬಾಸ್​ ಆರಂಭಗೊಂಡಿದೆ. ಎಲ್ಲಾ ಸ್ಪರ್ಧಿಗಳು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಅದರಲ್ಲಿ ಅಭಿನವ್ ಹಾಗೂ ಪ್ರೇರಣಾ ಕೂಡ ಇದ್ದಾರೆ.

ಸ್ಪರ್ಧಿಗಳಿಗೆ ಬಿಗ್​ ಬಾಸ್​ ಟಾಸ್ಕ್​ ಒಂದನ್ನು ನೀಡಿದ್ದರು. ಇದರನ್ವಯ ‘ಬಿಗುಮಾನ ಬಿಟ್ಟರೆ ಬಿದರಕ್ಕಿಯೂ ಚಿನ್ನವಾಗಬಹುದು​’ ಎನ್ನುವ ಮಾತನ್ನು ಅಕುಲ್ ಕೌಸ್ತುಭಗೆ ಹೇಳಿದರು. ಈ ಮಾತನ್ನು ಕೌಸ್ತುಭ ಅವರು ತಮ್ಮ ಮುಂದಿನ ಸ್ಪರ್ಧಿಗೆ ಹೇಳಬೇಕು. ಈ ಸರ್ಕಲ್​ ಸಾಗಿಯೇ ಇತ್ತು.

ಬಿಗ್​ ಬಾಸ್​ ಮನೆಗೆ ಕಿರುತೆರೆ ನಟಿ ಪ್ರೇರಣಾ ಅವರು ಆಗಮಿಸಿದರು. ಅವರ ಕಿವಿಗೆ ಈ ಸಾಲನ್ನು ಹೇಳಲಾಯಿತು. ಅವರು ಇದನ್ನು ‘ನನ್ನರಸಿ ರಾಧೆ’ ಧಾರಾವಾಹಿ ನಟ ಅಭಿನವ್​​ಗೆ ಹೇಳಬೇಕಿತ್ತು. ಪ್ರೇರಣಾಗೆ ಈ ಸಾಲುಗಳು ಮರೆತೇ ಹೋಗಿದ್ದವು. ಹೀಗಾಗಿ, ಈ ಸಾಲುಗಳನ್ನು ಬಾಯಿಗೆ ಬಂದಂತೆ ಹೇಳಿದ್ದರು. ಇದು ಅಭಿನವ್​ಗೆ ಕೇಳಿಲ್ಲ. ಈ ಕಾರಣಕ್ಕೆ, ‘ಕರ್ಮ ನಿಮ್ಮನ್ನು ಖಂಡಿತವಾಗಿಯೂ ಕಾಡುತ್ತೆ’ ಎಂದು ಶಾಪ ಹಾಕಿದ್ದಾರೆ.

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಂಡ ಬೆನ್ನಲ್ಲೇ ಮಿನಿ ಬಿಗ್​ ಬಾಸ್​ ಆರಂಭವಾಗಿದೆ. ಕಲರ್ಸ್​ ಕನ್ನಡ ವಾಹಿನಿ ಸೀರಿಯಲ್​ನಲ್ಲಿ ನಟಿಸುತ್ತಿರುವ ಕಲಾವಿದರು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿರೋದು ವಿಶೇಷ. ಕೊನೆಯ ಎಪಿಸೋಡ್​ಅನ್ನು ಕಿಚ್ಚ ಸುದೀಪ್​ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: ‘ನನ್ನರಸಿ ರಾಧೆ’ ನಟಿ ಕೌಸ್ತುಭ ಅವರ ಮೈನಸ್​ ಪಾಯಿಂಟ್​ ಏನು? ಬಿಗ್​ ಬಾಸ್​ ಮನೆಯಲ್ಲಿ ಸತ್ಯ ಬಾಯ್ಟಿಟ್ಟ ಇಂಚರ

Follow us on

Related Stories

Most Read Stories

Click on your DTH Provider to Add TV9 Kannada