AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರವೇ ಹಾಲಿವುಡ್​ಗೆ ಹಾರಲಿದ್ದಾರೆ ಕಂಗನಾ? ಬಾಲಿವುಡ್​ ಅಂಗಳದಲ್ಲಿ ಹೊಸ ಸುದ್ದಿ

ಹಾಲಿವುಡ್​ ನಟ ರಸೆಲ್ ಕ್ರೋವ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಸಾಕಷ್ಟು ಜನರಿಗೆ ಅವರ ನಟನೆ ಇಷ್ಟವಾಗುತ್ತದೆ. ಕಂಗನಾ ರಣಾವತ್​ ಟ್ವಿಟರ್​ನಲ್ಲಿಲ್ಲ. ಆದರೆ, ಅವರ ಅಭಿಮಾನಿಗಳು ಟ್ವಿಟರ್​ನಲ್ಲಿ ಆ್ಯಕ್ಟಿವ್​ ಆಗಿದ್ದಾರೆ.

ಶೀಘ್ರವೇ ಹಾಲಿವುಡ್​ಗೆ ಹಾರಲಿದ್ದಾರೆ ಕಂಗನಾ? ಬಾಲಿವುಡ್​ ಅಂಗಳದಲ್ಲಿ ಹೊಸ ಸುದ್ದಿ
ಶೀಘ್ರವೇ ಹಾಲಿವುಡ್​ಗೆ ಹಾರಲಿದ್ದಾರೆ ಕಂಗನಾ? ಬಾಲಿವುಡ್​ ಅಂಗಳದಲ್ಲಿ ಹೊಸ ಸುದ್ದಿ
TV9 Web
| Edited By: |

Updated on:Aug 14, 2021 | 3:51 PM

Share

ನಟಿ ಕಂಗನಾ ರಣಾವತ್​ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ನಟನೆ ಜತೆಗೆ ನಿರ್ದೇಶನದಲ್ಲೂ ಅವರು ಬ್ಯುಸಿ. ಈ ಮಧ್ಯೆ ಸಾಕಷ್ಟು ಸಿನಿಮಾ ಆಫರ್​ಗಳು ಅವರ ಕೈಯಲ್ಲಿವೆ. ಹಲವು ಸ್ಕ್ರಿಪ್ಟ್​ಗಳನ್ನು ಕಂಗನಾ ಕೇಳುತ್ತಿದ್ದಾರೆ. ಈ ಮಧ್ಯೆ ಕಂಗನಾಗೆ ಹಾಲಿವುಡ್​ನಿಂದ ಆಫರ್ ಬರುವ ಸೂಚನೆ ಸಿಕ್ಕಿದೆ. ಖ್ಯಾತ ಹಾಲಿವುಡ್​ ನಟ ಕಂಗನಾ ಜತೆ ನಟಿಸೋಕೆ ಪರೋಕ್ಷವಾಗಿ ಓಕೆ ಎಂದಿದ್ದಾರೆ.

ಹಾಲಿವುಡ್​ ನಟ ರಸೆಲ್ ಕ್ರೋವ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಸಾಕಷ್ಟು ಜನರಿಗೆ ಅವರ ನಟನೆ ಇಷ್ಟವಾಗುತ್ತದೆ. ಕಂಗನಾ ರಣಾವತ್​ ಟ್ವಿಟರ್​ನಲ್ಲಿಲ್ಲ. ಆದರೆ, ಅವರ ಅಭಿಮಾನಿಗಳು ಟ್ವಿಟರ್​ನಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಇತ್ತೀಚೆಗೆ ರಸೆಲ್ ಕ್ರೋವ್ ಅವರನ್ನು ಟ್ಯಾಗ್​ ಮಾಡಿ ಕಂಗನಾ ಅಭಿಮಾನಿಗಳು ಟ್ವೀಟ್​ ಒಂದನ್ನು ಮಾಡಿದ್ದರು. ಅಲ್ಲದೆ, ಕಂಗನಾ-ರಸೆಲ್​ ತೆರೆ ಹಂಚಿಕೊಳ್ಳಬೇಕು ಎನ್ನುವ ಇಚ್ಛೆ ಹೊರ ಹಾಕಿದ್ದರು.

‘ಎರಡು ಭಿನ್ನ ಚಿತ್ರರಂಗದ ಕಲಾವಿದರು ಒಟ್ಟಿಗೆ ಕೆಲಸ ಮಾಡಿದರೆ ಹೇಗಿರುತ್ತದೆ? ಅಕಾಡೆಮಿ ವಿನ್ನರ್​ ರಸೆಲ್​ ಹಾಗೂ ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಕಂಗನಾ ಒಟ್ಟಾಗಿ ಸಿನಿಮಾದಲ್ಲಿ ನಟಿಸಬೇಕು’ ಎಂದು ಅಭಿಮಾನಿಯೋರ್ವ ಟ್ವೀಟ್​ ಮಾಡಿದ್ದ. ಇದಕ್ಕೆ ರಸೆಲ್​ ಕೂಡ ಸಮ್ಮತಿ ಸೂಚಿಸಿದ್ದಾರೆ. ಅವರು ಈ ಟ್ವೀಟ್​ಅನ್ನು ರೀಟ್ವೀಟ್​ ಮಾಡಿಕೊಂಡಿದ್ದು, ಸಾಕಷ್ಟು ಅಚ್ಚರಿ ಮೂಡಿಸಿದೆ.

‘ಥಾರ್: ಲವ್ ಆ್ಯಂಡ್​ ಥಂಡರ್’ ಸಿನಿಮಾ ಕೆಲಸಗಳಲ್ಲಿ ರಸೆಲ್ ಬ್ಯುಸಿಯಾಗಿದ್ದಾರೆ. ಇನ್ನು, ಕಂಗನಾ, ‘ಥಲೈವಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕೆಲಸ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ರಿಲೀಸ್​ಗೆ ರೆಡಿ ಇದೆ. ಕೊವಿಡ್​ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗಿದೆ. ಇದಲ್ಲದೆ, ಧಾಕಡ್​ ಹಾಗೂ ತೇಜಸ್​ ಸಿನಿಮಾಗಳು ಅವರ ಕೈಯಲ್ಲಿವೆ. ಕಂಗನಾ ರಣಾವತ್​ ಅವರ ಟ್ವಿಟರ್​ ಖಾತೆಯನ್ನು ಟ್ಟಿಟರ್ ಬ್ಲಾಕ್​ ಮಾಡಿದೆ. ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಟ್ವೀಟ್​ ಮಾಡಲಾಗುತ್ತಿದೆ ಎನ್ನುವ ಕಾರಣಕ್ಕೆ ಟ್ವಿಟರ್​ ಈ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿ: ಚಿತ್ರಮಂದಿರದಲ್ಲೇ ರಿಲೀಸ್​ ಆಗಲಿದೆ ಜಯಲಲಿತಾ ಬಯೋಪಿಕ್​ ತಲೈವಿ; ಗಾಸಿಪ್​ಗೆ ಕಂಗನಾ ಫುಲ್​ಸ್ಟಾಪ್​

ಪ್ರೇಮಿಗಳೆಲ್ಲಾ ಸಾಚಾನಾ? ಪ್ರೀತಿ ನಿಜನಾ? ನಟಿ ಕಂಗನಾ ಮಾಡ್ತಾರೆ ಕಠಿಣ ಪರೀಕ್ಷೆ

Published On - 3:42 pm, Sat, 14 August 21

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?