ಪ್ರೇಮಿಗಳೆಲ್ಲಾ ಸಾಚಾನಾ? ಪ್ರೀತಿ ನಿಜನಾ? ನಟಿ ಕಂಗನಾ ಮಾಡ್ತಾರೆ ಕಠಿಣ ಪರೀಕ್ಷೆ

ಅಮೆರಿಕದ ‘ಟೆಂಪ್ಟೇಶನ್​ ಐಲ್ಯಾಂಡ್​’ ರಿಯಾಲಿಟಿ ಶೋ ಅನ್ನು ಭಾರತದ ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತಿದೆ. ಓಟಿಟಿಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದ್ದು, ಅದನ್ನು ನಟಿ ಕಂಗನಾ ರಣಾವತ್​ ನಡೆಸಿಕೊಡಲಿದ್ದಾರೆ.

ಪ್ರೇಮಿಗಳೆಲ್ಲಾ ಸಾಚಾನಾ? ಪ್ರೀತಿ ನಿಜನಾ? ನಟಿ ಕಂಗನಾ ಮಾಡ್ತಾರೆ ಕಠಿಣ ಪರೀಕ್ಷೆ
ಪ್ರೇಮಿಗಳೆಲ್ಲಾ ಸಾಚಾನಾ? ಪ್ರೀತಿ ನಿಜನಾ? ನಟಿ ಕಂಗನಾ ಮಾಡ್ತಾರೆ ಕಠಿಣ ಪರೀಕ್ಷೆ

ಒಂದೆಡೆ ಸಿನಿಮಾ ಮಾಡುತ್ತ, ಇನ್ನೊಂದೆಡೆ ವಿವಾದ ಮಾಡಿಕೊಳ್ಳುತ್ತ ಸದಾ ಬ್ಯುಸಿ ಆಗಿರುತ್ತಾರೆ ನಟಿ ಕಂಗನಾ ರಣಾವತ್​. ಈ ನಡುವೆ ಅವರು ಇನ್ನೊಂದು ಕೆಲಸಕ್ಕೂ ಕೈ ಹಾಕುತ್ತಿದ್ದಾರೆ. ಮೂಲಗಳ ಪ್ರಕಾರ ಅವರು ಓಟಿಟಿಗೆ ಎಂಟ್ರಿ ನೀಡುತ್ತಿದ್ದಾರೆ. ಆದರೆ ನಟನೆ, ನಿರ್ದೇಶನ ಅಥವಾ ನಿರ್ಮಾಣದ ಮೂಲಕ ಅಲ್ಲ. ಮತ್ತಿನ್ನೇನು? ಓಟಿಟಿಯಲ್ಲಿ ಪ್ರಸಾರ ಆಗಲಿರುವ ಹೊಸದೊಂದು ಕಾರ್ಯಕ್ರಮವನ್ನು ಕಂಗನಾ ನಿರೂಪಣೆ ಮಾಡಲಿದ್ದಾರೆ. ನಿರೂಪಕಿಯಾಗಿ ಅವರು ಓಟಿಟಿಗೆ ಎಂಟ್ರಿ ನೀಡಲಿದ್ದಾರೆ. ಇದು ಲವ್​, ರಿಲೇಷನ್​ಶಿಪ್​ಗೆ ಸಂಬಂಧಿಸಿದ ರಿಯಾಲಿಟಿ ಶೋ ಎಂಬುದು ವಿಶೇಷ.

ಬಿಗ್​ ಬಾಸ್​, ಹು ವಾಂಟ್ಸ್​ ಟು ಬಿ ಎ ಮಿಲಿಯನೇರ್​ ಸೇರಿದಂತೆ ವಿದೇಶಿ ಕಿರುತೆರೆಯ ಅನೇಕ ಕಾರ್ಯಕ್ರಮಗಳು ಭಾರತಕ್ಕೆ ಕಾಲಿಟ್ಟಿವೆ. ಅದೇ ರೀತಿ ಈಗ ಅಮೆರಿಕದ ‘ಟೆಂಪ್ಟೇಶನ್​ ಐಲ್ಯಾಂಡ್​’ ರಿಯಾಲಿಟಿ ಶೋ ಅನ್ನು ಭಾರತದ ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತಿದೆ. ಓಟಿಟಿಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದ್ದು, ಅದನ್ನು ನಟಿ ಕಂಗನಾ ರಣಾವತ್​ ನಡೆಸಿಕೊಡಲಿದ್ದಾರೆ.

ಇದು ಪ್ರೇಮಿಗಳಿಗೆ ಮತ್ತು ಸಿಂಗಲ್​ ಆಗಿರುವವರಿಗೆ ಸಂಬಂಧಪಟ್ಟ ರಿಯಾಲಿಟಿ ಶೋ. ಕಪಲ್​ಗಳನ್ನು ಸಿಂಗಲ್​ ಆಗಿರುವವರ ಜೊತೆ ಸೇರಿಸಿ ಒಂದಷ್ಟು ದಿನ ಕಾಲ ಕಳೆಯುವಂತೆ ಮಾಡಲಾಗುತ್ತದೆ. ಆ ಮೂಲಕ ಪ್ರೇಮಿಗಳ ಪ್ರೀತಿ, ನಂಬಿಕೆ ಎಷ್ಟು ಸಾಚಾ ಎಂಬುದನ್ನು ಪರೀಕ್ಷೆ ಮಾಡಲಾಗುತ್ತದೆ. ಅಂತಿಮವಾಗಿ ಯಾರು ಹೊಸ ಪ್ರೀತಿ ಕಂಡುಕೊಳ್ಳುತ್ತಾರೆ? ಯಾರು ತಮ್ಮ ಪ್ರೀತಿ ಕಳೆದುಕೊಳ್ಳುತ್ತಾರೆ ಎಂಬುದು ಈ ಕಾರ್ಯಕ್ರಮದ ಮೂಲಕ ಬಯಲಾಗಲಿದೆ.

ಶೀಘ್ರದಲ್ಲೇ ಕಂಗನಾ ಈ ಕಾರ್ಯಕ್ರಮದ ಶೂಟಿಂಗ್​ನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಕಂಗನಾ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಶೋನಲ್ಲಿ ಪಾಲ್ಗೊಳ್ಳಲಿರುವ ಸ್ಪರ್ಧಿಗಳು ಯಾರು ಎಂಬುದನ್ನು ತಿಳಿದುಕೊಳ್ಳುವ ಕೌತುಕ ಕೂಡ ಮನೆ ಮಾಡಿದೆ. ಯಾವ ಓಟಿಟಿ, ಪ್ರಸಾರ ದಿನಾಂಕ ಯಾವುದು? ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಕಂಗನಾ ನಟಿಸಿರುವ ‘ತಲೈವಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ತೇಜಸ್​’, ‘ಮಣಿಕರ್ಣಿಕಾ ರಿಟರ್ನ್ಸ್​’ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಾಧಾರಿತ ಸಿನಿಮಾದಲ್ಲೂ ಕಂಗನಾ ನಟಿಸುತ್ತಿದ್ದಾರೆ. ಇಂದಿರಾ ಗಾಂಧಿ ಬಯೋಪಿಕ್​ಗೆ ‘ಎಮರ್ಜೆನ್ಸಿ’ ಎಂದು ಹೆಸರು ಇಡಲಾಗಿದೆ.

ಇದನ್ನೂ ಓದಿ:

ಚಿತ್ರಮಂದಿರದಲ್ಲೇ ರಿಲೀಸ್​ ಆಗಲಿದೆ ಜಯಲಲಿತಾ ಬಯೋಪಿಕ್​ ತಲೈವಿ; ಗಾಸಿಪ್​ಗೆ ಕಂಗನಾ ಫುಲ್​ಸ್ಟಾಪ್​

ಹಿಂದು-ಮುಸ್ಲಿಂ ಮದುವೆಯಾದ್ರೆ ಮಕ್ಕಳು ಮುಸ್ಲಿಂ ಆಗ್ತಾರೆ; ಹಿಂದು ಆಗಲ್ಲ ಯಾಕೆ? ಕಂಗನಾ ಪ್ರಶ್ನೆ