ವೆಬ್ ಸೀರಿಸ್ ಡೈರೆಕ್ಷನ್ ಮಾಡೋಕೆ ಬನ್ಸಾಲಿ ಪಡೆಯೋ ಹಣ ಇಷ್ಟೊಂದಾ?; ಸ್ಟಾರ್ ನಟರ ಸಂಭಾವನೆಯನ್ನೂ ಹಿಂದಿಕ್ಕಿದ ನಿರ್ದೇಶಕ
‘ಹೀರಾ ಮಂಡಿ’ ಹೆಸರಿನ ವೆಬ್ ಸೀರಿಸ್ ಡೈರೆಕ್ಷನ್ ಮಾಡೋಕೆ ಸಂಜಯ್ ಲೀಲಾ ಬನ್ಸಾಲಿ ರೆಡಿ ಆಗಿದ್ದಾರೆ. ಇದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ. ಇದು ಬನ್ಸಾಲಿ ಪಾಲಿಗೆ ವಿಶೇಷ ಪ್ರಾಜೆಕ್ಟ್.
ಭಾರತ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕರ ಪೈಕಿ ಸಂಜಯ್ ಲೀಲಾ ಬನ್ಸಾಲಿ ಮುಂಚೂಣಿಯಲ್ಲಿರುತ್ತಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಅವರ ಸಿನಿಮಾದಲ್ಲಿ ಯಾವಾಗಲೂ ಭಾವನೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಅವರು ಯಾವುದೇ ಸಿನಿಮಾ ಕೈಗೆತ್ತಿಕೊಳ್ಳಲಿ, ಅದಕ್ಕಾಗಿ ಅವರು ಸಾಕಷ್ಟು ಕೆಲಸ ಮಾಡುತ್ತಾರೆ. ಪ್ರತಿ ದೃಶ್ಯವೂ ಅಚ್ಚುಕಟ್ಟಾಗಿ ಮೂಡಿ ಬರೋಕೆ ಎನೆಲ್ಲ ಬೇಕೋ ಅದೆಲ್ಲವನ್ನೂ ಮಾಡುತ್ತಾರೆ ಸಂಜಯ್ ಲೀಲಾ ಬನ್ಸಾಲಿ. ಈ ಕಾರಣಕ್ಕೆ ಅವರು ಪಡೆಯೋ ಸಂಭಾವನ ಕೂಡ ಅಧಿಕವೇ. ಈಗ ಅವರ ಮೊದಲ ಒಟಿಟಿ ವೆಬ್ ಸೀರಿಸ್ಗಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ವಿಚಾರ ಗೊತ್ತಾಗಿದೆ.
‘ಹೀರಾ ಮಂಡಿ’ ಹೆಸರಿನ ವೆಬ್ ಸೀರಿಸ್ ಡೈರೆಕ್ಷನ್ ಮಾಡೋಕೆ ಸಂಜಯ್ ಲೀಲಾ ಬನ್ಸಾಲಿ ರೆಡಿ ಆಗಿದ್ದಾರೆ. ಇದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ. ಇದು ಬನ್ಸಾಲಿ ಪಾಲಿಗೆ ವಿಶೇಷ ಪ್ರಾಜೆಕ್ಟ್. ಏಕೆಂದರೆ, ಬೆಳ್ಳಿ ಪರದೆಯಲ್ಲಿ ಛಾಪು ಮೂಡಿಸಿರುವ ಅವರಿಗೆ ಇದು ಮೊದಲ ಒಟಿಟಿ ಪ್ರಾಜೆಕ್ಟ್. ಈ ವೆಬ್ ಸೀರಿಸ್ ಅನ್ನು ನೆಟ್ಫ್ಲಿಕ್ಸ್ ನಿರ್ಮಾಣ ಮಾಡುತ್ತಿದೆ.
ಹೀರಾ ಮಂಡಿ ಕಥೆ ಸ್ವಾತಂತ್ರ್ಯ ಪೂರ್ವದ ಹಿನ್ನೆಲೆಯಲ್ಲಿ ಸಾಗಲಿದೆ. ಇಡೀ ಕಥೆ ನಡೆಯುವುದು ಲಾಹೋರ್ನಲ್ಲಿ. ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್, ದೀಪಿಕಾ ಪಡುಕೋಣೆ, ಪರಿಣೀತಿ ಚೋಪ್ರಾ, ವಿದ್ಯಾ ಬಾಲನ್ ಮೊದಲಾದವರನ್ನು ಪಾತ್ರವರ್ಗಕ್ಕೆ ಸೇರಿಸಬೇಕು ಎಂಬುದು ಬನ್ಸಾಲಿ ಆಲೋಚನೆ.
ಹೀರಾ ಮಂಡಿ 7 ಎಪಿಸೋಡ್ಗಳಲ್ಲಿ ಮೂಡಿ ಬರುತ್ತಿದೆ. ಈ ಏಳು ಎಪಿಸೋಡ್ಗೆ ಬನ್ಸಾಲಿ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 35 ಕೋಟಿ. ಅಂದರೆ, ಒಂದು ಎಪಿಸೋಡ್ಗೆ ಅವರು ಪಡೆಯೋ ಸಂಭಾವನೆ 5 ಕೋಟಿ ರೂಪಾಯಿ. ಸದ್ಯ, ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗೆ ಗುಡ್ ಬೈ ಹೇಳಿದ ರಣಬೀರ್; ಕಾರಣವೇನು?
ಸಂಜಯ್ ಲೀಲಾ ಬನ್ಸಾಲಿ ಚಿತ್ರರಂಗದ ಪಯಣಕ್ಕೆ 25 ವರ್ಷ; ಇಲ್ಲಿದೆ ಅವರ ಸಿನಿ ಜರ್ನಿ ಬಗ್ಗೆ ಮಾಹಿತಿ