AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Radhika Apte: ನಗ್ನವಾಗಿ ಕಾಣಿಸಿಕೊಂಡ ರಾಧಿಕಾ ಆಪ್ಟೆ; ಅವರನ್ನು ಬ್ಯಾನ್​ ಮಾಡಿ ಎಂದ ನೆಟ್ಟಿಗರು

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರ ಹಳೆಯ ಚಿತ್ರವೊಂದು ಮತ್ತೆ ವೈರಲ್ ಆಗಿದ್ದು, ಅವರನ್ನು ಚಿತ್ರರಂಗದಿಂದ ಬಾಯ್ಕಾಟ್ ಮಾಡಿ ಎಂಬ ಕೂಗು ಟ್ವಿಟರ್​ನಲ್ಲಿ ಜೋರಾಗಿದೆ.

Radhika Apte: ನಗ್ನವಾಗಿ ಕಾಣಿಸಿಕೊಂಡ ರಾಧಿಕಾ ಆಪ್ಟೆ; ಅವರನ್ನು ಬ್ಯಾನ್​ ಮಾಡಿ ಎಂದ ನೆಟ್ಟಿಗರು
ನಟಿ ರಾಧಿಕಾ ಆಪ್ಟೆ
TV9 Web
| Updated By: shivaprasad.hs|

Updated on: Aug 13, 2021 | 6:21 PM

Share

ಒಟಿಟಿ ವೇದಿಕೆಯ ಮೂಲಕ ಸೀರೀಸ್ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ರಾಧಿಕಾ ಆಪ್ಟೆ ವಿರುದ್ಧ ನೆಟ್ಟಿಗರು ‘ಬಾಯ್ಕಾಟ್ ರಾಧಿಕಾ ಆಪ್ಟೆ’(Boycott Radhika Apte)  ಎಂಬ ಹ್ಯಾಶ್ ಟ್ಯಾಗ್​ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೆಲವು ದಿನಗಳಿಂದ ಇದು ಟ್ರೆಂಡಿಂಗ್​ನಲ್ಲಿದೆ. ರಾಧಿಕಾ ನಟಿಸಿರುವ ‘ಪಾರ್ಚ್ಡ್’(Parched) ಚಿತ್ರದ ಕೆಲವೊಂದು ಚಿತ್ರಗಳು ಈಗ ಮತ್ತೆ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಅದನ್ನು ಮುಂದಿಟ್ಟುಕೊಂಡು ನೆಟ್ಟಿಗರು ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಅವರ ಪ್ರಕಾರ, ರಾಧಿಕಾ ಆಪ್ಟೆ ನಗ್ನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರತದ ಘನತೆಗೆ ಭಂಗ ಉಂಟುಮಾಡುತ್ತಿದ್ದಾರೆ. ಅವರ ಚಿತ್ರಗಳು ದೇಶದ ಉನ್ನತ ಸಂಸ್ಕೃತಿಯನ್ನು ಅಣಕಿಸುತ್ತಿದೆ ಮತ್ತು ಪತನದತ್ತ ಕೊಂಡೊಯ್ಯುತ್ತಿದೆ. ಆದ್ದರಿಂದ ಅವರನ್ನು ಚಿತ್ರರಂಗದಿಂದ ಬಾಯ್ಕಾಟ್ ಮಾಡಬೇಕು ಎಂಬುದು ಟ್ವಿಟರ್​ನಲ್ಲಿ ಕೇಳಿಬರುತ್ತಿರುವ ವಾದ.

‘ಪಾರ್ಚ್ಡ್’ ಚಿತ್ರವನ್ನು ಅಜಯ್ ದೇವಗನ್ ನಿರ್ಮಿಸಿದ್ದು, 2016ರಲ್ಲಿ ಬಿಡುಗಡೆಯಾಗಿತ್ತು. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿಕೊಂಡಿದ್ದ ಈ ಚಿತ್ರ, ಗುಜರಾತ್​ನ ಗ್ರಾಮೀಣ ಭಾಗದ ನಾಲ್ವರು ಹೆಣ್ಣ ಮಕ್ಕಳ ಕತೆಯನ್ನು ಒಳಗೊಂಡಿದೆ. ಬಾಲ್ಯ ವಿವಾಹ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ವೈವಾಹಿಕ ಅತ್ಯಾಚಾರ(Marital rape) ಮೊದಲಾದ ಸಮಸ್ಯೆಗಳನ್ನು ಚಿತ್ರವು ಚರ್ಚಿಸುತ್ತದೆ. ಈ ಚಿತ್ರವನ್ನು ಲೀನಾ ಯಾದವ್ ನಿರ್ದೇಶಿಸಿದ್ದು, ತನಿಷ್ಟಾ ಚಟರ್ಜಿ, ಸುರ್ವೀನ್ ಚಾವ್ಲಾ, ಆದಿಲ್ ಹುಸೈನ್ ಮೊದಲಾದವರು ಅಭಿನಯಿಸಿದ್ದಾರೆ. ಪ್ರಸ್ತುತ ರಾಧಿಕಾ ಆಪ್ಟೆ ಅವರ ವೈರಲ್ ಆಗಿರುವ ಚಿತ್ರ ಇದೇ ಚಿತ್ರದ್ದಾಗಿದೆ. ಈ ಕುರಿತು ರಾಧಿಕಾ ಆಪ್ಟೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಟ್ವಿಟರ್​ನಲ್ಲಿ ಟ್ರೆಂಡ್ ಆಗಿರುವ ಟ್ವೀಟ್​ಗಳು:

ಟ್ವಿಟರ್​ನಲ್ಲಿ ರಾಧಿಕಾ ವಿರುದ್ಧ ಕಂಡುಬಂದ ಅಭಿಪ್ರಾಯಗಳು

ಈ ಹಿಂದೆ ಅನುರಾಗ್ ಕಶ್ಯಪ್ ನಿರ್ದೇಶನದ ‘ಕ್ಲೀನ್ ಶೇವ್’ ಚಿತ್ರದ ಸಮಯದಲ್ಲೂ ರಾಧಿಕಾ ಅವರದ್ದೆನ್ನಲಾದ ಚಿತ್ರಗಳು ಲೀಕ್ ಆಗಿದ್ದವು. ಆ ಸಂದರ್ಭದ ಮಾನಸಿಕ ತಲ್ಲಣಗಳನ್ನು ಹೇಳಿಕೊಂಡಿದ್ದ ರಾಧಿಕಾ ಆಪ್ಟೆ, ‘‘ಆ ಚಿತ್ರದಲ್ಲಿದ್ದದ್ದು ನಾನಾಗಿರಲಿಲ್ಲ. ಆದರೆ ಆ ಸಮಯದಲ್ಲಿ ನಾನೇನು ಮಾಡುವಂತೆಯೂ ಇರಲಿಲ್ಲ. ನಾಲ್ಕು ದಿನ ಮನೆಯಲ್ಲೇ ಇದ್ದೆ; ಜಗತ್ತಿಗೆ ಹೆದರಿಕೊಂಡಲ್ಲ. ಆದರೆ ನನ್ನ ಡ್ರೈವರ್ ಹಾಗೂ ಸಮೀಪದವರಿಗೂ ವಿಷಯ ತಿಳಿದ ಕಾರಣ ಮುಜುಗರವಾಗಿತ್ತು.’’ ಎಂದಿದ್ದರು. ಅದರ ನಂತರ ಅವರು ‘ಪಾರ್ಚ್ಡ್’ ಚಿತ್ರವನ್ನು ಒಪ್ಪಿಕೊಂಡಿದ್ದು. ಆ ಸಂದರ್ಭದಲ್ಲಿ ತನಗೆ ಇಂತಹ ಚಿತ್ರದ ಅವಶ್ಯಕತೆ ಇತ್ತು. ಬಯಕೆಗಳನ್ನು ಅನ್ವೇಷಿಸುವ, ಹೊಸ ಹೊಳಹುಗಳನ್ನು ನೀಡುವ ಇಂತಹ ಚಿತ್ರಕ್ಕಾಗಿ ತಾನು ಕಾಯುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ:

Viral Video: ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ ವಿಡಿಯೋ ವೈರಲ್; ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿ ಎಂದ ನೆಟ್ಟಿಗರು

Fighter: ಹೃತಿಕ್, ದೀಪಿಕಾ ಅಭಿನಯದ ಬಹುನಿರೀಕ್ಷಿತ ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್; ಆದರೂ ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್

(Boycott Radhika Apte is trending on twitter here is why)