Fighter: ಹೃತಿಕ್, ದೀಪಿಕಾ ಅಭಿನಯದ ಬಹುನಿರೀಕ್ಷಿತ ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್; ಆದರೂ ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್

Hritthik Roshan and Deepika Padukone: ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದಲ್ಲಿ ತಯಾರಾಗುತ್ತಿರುವ ‘ಫೈಟರ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಿಸಲಾಗಿದೆ.

Fighter: ಹೃತಿಕ್, ದೀಪಿಕಾ ಅಭಿನಯದ ಬಹುನಿರೀಕ್ಷಿತ ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್; ಆದರೂ ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್
ಹೃತಿಕ್ ರೋಷನ್, ದೀಪಿಕಾ ಪಡುಕೋಣೆ
Follow us
TV9 Web
| Updated By: shivaprasad.hs

Updated on: Aug 13, 2021 | 4:27 PM

ಬಾಲಿವುಡ್​ನಲ್ಲಿ ಈಗಾಗಲೇ ‘ಬ್ಯಾಂಗ್ ಬ್ಯಾಂಗ್’, ‘ವಾರ್’ ಮೊದಲಾದ ಆಕ್ಷನ್ ಚಿತ್ರಗಳಿಂದ ಹೆಸರು ಮಾಡಿರುವ ನಿರ್ದೇಶಕ ಸಿದ್ಧಾರ್ಥ್ ಆನಂದ್, ‘ಫೈಟರ್’ ಚಿತ್ರದ ಮೂಲಕ ಮತ್ತೊಂದು ಅದ್ದೂರಿ ಬಜೆಟ್​ನ ಮೈ ನವಿರೇಳಿಸುವ ಆಕ್ಷನ್ ಚಿತ್ರವನ್ನು ಉಣಬಡಿಸಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ನ ಖ್ಯಾತ ನಟ ಹೃತಿಕ್ ರೋಷನ್ ಹಾಗೂ ನಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಭಾರತದ ಚಿತ್ರರಂಗದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವೈಮಾನಿಕ ಸಾಹಸಗಳನ್ನು ಒಳಗೊಂಡ ಚಿತ್ರ ಇದಾಗಿರಲಿದೆ ಎಂದು ಈ ಹಿಂದೆ ಚಿತ್ರತಂಡ ತಿಳಿಸಿತ್ತು. ಇಂದು ಚಿತ್ರಬಿಡುಗಡೆಯ ದಿನಾಂಕವನ್ನು ಚಿತ್ರತಂಡ ನಿಗದಿಪಡಿಸಿದೆ. ಅದಾಗ್ಯೂ ಅಭಿಮಾನಿಗಳಿಗೆ ಬೇಸರವಾಗಿದೆ.

ಫೈಟರ್ ಚಿತ್ರವನ್ನು 2023ರ ಗಣಾಜ್ಯೋತ್ಸವದಂದು ಅಂದರೆ ಜನವರಿನ 26ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಇಂದು ಘೋಷಣೆ ಮಾಡಿದೆ. ಈ ಮೊದಲು ಚಿತ್ರತಂಡ ತಿಳಿಸಿದ್ದ ಮಾಹಿತಿಯ ಪ್ರಕಾರ 2022ರಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣಗಳಿಂದಾಗಿ ಚಿತ್ರೀಕರಣ ಪ್ರಾರಂಭ ಮುಂದೂಡಲಾಗಿತ್ತು. ಇದೀಗ ಚಿತ್ರೀಕರಣ ಪ್ರಾರಂಭಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಚಿತ್ರಕ್ಕೆ ತಯಾರಾಗುತ್ತಿರುವ ಕುರಿತು ಇತ್ತೀಚೆಗೆ ಹೃತಿಕ್ ರೋಷನ್ ಚಿತ್ರವನ್ನು ಹಂಚಿಕೊಂಡಿದ್ದರು.

ಹೃತಿಕ್ ಹಂಚಿಕೊಂಡ ಚಿತ್ರ:

ಅದ್ದೂರಿ ಬಜೆಟ್​ನ, ಮೈ ನವಿರೇಳಿಸುವ ಆಕ್ಷಬನ್ ದೃಶ್ಯಗಳಿರುವ ‘ಫೈಟರ್’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದರೂ ಫ್ಯಾನ್ಸ್​ಗೆ ತುಸು ಬೇಸರವಾಗಿದೆ. ಕಾರಣ, ಅಭಿಮಾನಿಗಳು ಚಿತ್ರ 2022ರಲ್ಲಿ ತೆರೆಗೆ ಬರುತ್ತದೆ ಎಂದು ಭಾವಿಸಿದ್ದರು. ಆದರೆ ಈಗ 2023ರಲ್ಲಿ ಎಂದಾಗ ಮತ್ತಷ್ಟು ದಿನ ಕಾಯಬೇಕಲ್ಲಾ ಎಂದು ಬೇಸರವಾಗಿದ್ದಾರೆ. ಹೃತಿಕ್, ದೀಪಿಕಾ ಮೊದಲ ಬಾರಿಗೆ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಹಾಗೂ ವೈಮಾನಿಕ  ಸಾಹಸ ದೃಶ್ಯಗಳಿವೆ ಎಂಬ ಸುದ್ದಿಗಳಿಂದಾಗಿ ಅಭಿಮಾನಿಗಳಿಗೆ ಈ ಚಿತ್ರದ ಕುರಿತು ಬಹಳಷ್ಟು ನಿರೀಕ್ಷೆ ಇದೆ.

ಚಿತ್ರವನ್ನು ವಯೊಕಾಮ್ 18 ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಅಂದಾಧುನ್, ಭಾಗ್ ಮಿಲ್ಖಾ ಭಾಗ್, ಸ್ಪೆಷಲ್ ಛಬ್ಬೀಸ್ ಮೊದಲಾದ ಖ್ಯಾತ ಹಿಟ್ ಚಿತ್ರಗಳನ್ನು ವಯೊಕಾಮ್ 18 ನಿರ್ಮಾಣ ಮಾಡಿತ್ತು. ‘ಫೈಟರ್’ ಚಿತ್ರದಲ್ಲಿ ಭಾರತದ ಚಿತ್ರರಂಗದಲ್ಲಿ ಹಿಂದೆಂದೂ ಕಾಣದಂತಹ ಸಾಹಸ ದೃಶ್ಯಗಳನ್ನು ಸಂಯೋಜಿಸಲಾಗುವುದು. ಆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡುವಂತೆ ಚಿತ್ರ ನಿರ್ಮಿಸಲಾಗುವುದು ಎಂದು ಈ ಹಿಂದೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮಾಧ್ಯಮವೊಂದಕ್ಕೆ ತಿಳಿಸಿದ್ದರು.

ಇದನ್ನೂ ಓದಿ:

Jaggesh: ಶೂಟಿಂಗ್​ ವೇಳೆ ಜಗ್ಗೇಶ್​ ಮೈಮೇಲಿತ್ತು ನಿಜವಾದ ಹಾವು; ಭಯದಲ್ಲಿ ಬಾಯಿಗೆ ಬಂದಂತೆ ಡೈಲಾಗ್​ ಹೇಳಿದ್ದ ನವರಸ ನಾಯಕ

ದುನಿಯಾ ವಿಜಯ್​ ನಟನೆಯ ಸಲಗ ರಿಲೀಸ್​ ಡೇಟ್​ ಬಗ್ಗೆ ಇಲ್ಲಿದೆ ಲೇಟೆಸ್ಟ್​ ನ್ಯೂಸ್​

(Hrithik Roshan and Deepika Padukone starring Fighter Movie will release on Republic day of 2023)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ