ಬಿಗ್ ಬಾಸ್ ಸ್ಪರ್ಧಿಗೆ ಸಾರ್ವಜನಿಕವಾಗಿಯೇ ಕಿಸ್ ಕೊಟ್ಟ ಅಭಿಮಾನಿ; ಶಾಕ್ ಆದ ನಟಿ
ಜಾಸ್ಮಿನ್ ಮಾಸ್ಕ್ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದರು. ಈ ವೇಳೆ ಅಭಿಮಾನಿಯೋರ್ವಳು ಜಾಸ್ಮಿನ್ ಅವರನ್ನು ಗುರುತಿಸಿದ್ದಾರೆ. ಅಲ್ಲದೆ, ಸೆಲ್ಫಿ ತೆಗೆದುಕೊಳ್ಳೋಕೆ ಅನುಮತಿ ಕೇಳಿದ್ದಾರೆ.
ಅಭಿಮಾನಿಗಳು ತಮ್ಮಿಷ್ಟದ ನಟ-ನಟಿಯರನ್ನು ಕಂಡರೆ ಸೆಲ್ಫಿಗೆ ಮುಗಿಬೀಳುತ್ತಾರೆ. ಅನೇಕ ಕಲಾವಿದರಿಗೆ ಇದು ಇಷ್ಟವಾಗುವುದಿಲ್ಲ. ಸೆಲ್ಫಿ ತೆಗೆದುಕೊಳ್ಳುವ ವೇಳೆ ಕೆಲವೊಮ್ಮೆ ಮುಜುಗರ ಆಗುವಂತಹ ಘಟನೆ ನಡೆದ ಉದಾಹರಣೆ ಕೂಡ ಸಾಕಷ್ಟಿದೆ. ಈಗ ಬಿಗ್ ಬಾಸ್ ಸೀಸನ್ 14ರ ಸ್ಪರ್ಧಿ ಜಾಸ್ಮಿನ್ ಭಾಸಿನ್ಗೆ ಅಭಿಮಾನಿಯೊಬ್ಬಳು ಕಿಸ್ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.
ಜಾಸ್ಮಿನ್ ಮಾಸ್ಕ್ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದರು. ಈ ವೇಳೆ ಅಭಿಮಾನಿಯೋರ್ವಳು ಜಾಸ್ಮಿನ್ ಅವರನ್ನು ಗುರುತಿಸಿದ್ದಾರೆ. ಅಲ್ಲದೆ, ಸೆಲ್ಫಿ ತೆಗೆದುಕೊಳ್ಳೋಕೆ ಅನುಮತಿ ಕೇಳಿದ್ದಾರೆ. ಆಗ ಜಾಸ್ಮಿನ್ ಇದಕ್ಕೆ ಬೇಡ ಎನ್ನಲಿಲ್ಲ. ಸೆಲ್ಫಿ ತೆಗೆದುಕೊಳ್ಳೋಕೆ ಅವರು ಅವಕಾಶ ನೀಡಿದ್ದಾರೆ. ಜಾಸ್ಮಿನ್ ಜತೆ ನಿಂತ ಅಭಿಮಾನಿ ಸೆಲ್ಫಿ ತೆಗೆದುಕೊಂಡಿದ್ದಾಳೆ. ಹೊರಡುವಾಗ ಜಾಸ್ಮಿನ್ಗೆ ಕಿಸ್ ಮಾಡಿ ತೆರಳಿದ್ದಾಳೆ ಯುವತಿ. ಇದು ಜಾಸ್ಮಿನ್ಗೆ ಇರಿಸುಮುರುಸು ಉಂಟು ಮಾಡಿದೆ.
ಈ ವಿಡಿಯೋಗೆ ಸಾಕಷ್ಟು ಜನರು ಕಮೆಂಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ‘ಅವರು ಕೂಡ ಮನುಷ್ಯರೇ. ಯಾರೋ ಬಂದು ಕಿಸ್ ಮಾಡಿ ಹೋದರೆ ಅವರಿಗೆ ಹೇಗನ್ನಿಸಬೇಡ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಅಸೂಯೆಪಟ್ಟುಕೊಂಡಿದ್ದಾರೆ. ‘ನನ್ನ ಜಾಸ್ ಒಪ್ಪಿಗೆ ಇಲ್ಲದೆ ನೀವು ಅದೇಗೆ ಕಿಸ್ ಮಾಡುತ್ತೀರಿ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಜಾಸ್ಮಿನ್ ಅವರು ಬಿಗ್ ಬಾಸ್ ಸೀಸನ್ 14ರಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ‘ಬಿಗ್ ಬಾಸ್ 14’ ಪೂರ್ಣಗೊಂಡಿತ್ತು. ಜಾಸ್ಮಿನ್ ಬಾಯ್ಫ್ರೆಂಡ್ ಅಲಿ ಗೋನಿ ಕೂಡ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದರು. ಮನೆ ಒಳಗೆ ಹೋಗುವುದಕ್ಕೂ ಮೊದಲು ಇವರು ತಮ್ಮ ರಿಲೇಶನ್ಶಿಪ್ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೆ, ಮನೆ ಒಳಗೆ ತೆರಳಿದ ನಂತರದಲ್ಲಿ ಇಬ್ಬರೂ ತುಂಬಾನೇ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು.
View this post on Instagram
ಇನ್ನು, ಮದುವೆ ವಿಚಾರದ ಬಗ್ಗೆ ಸಾಕಷ್ಟು ಬಾರಿ ಜಾಸ್ಮಿನ್ ಮಾತನಾಡಿದ್ದರು. ‘ಈಗಂತು ಮದುವೆ ಸಾಧ್ಯವಿಲ್ಲ. ನಾವು ಕೂಡ ಚರ್ಚಿಸಿಲ್ಲ. ಇದು ಹೊಸ ಹೊಸ ಪ್ರಣಯ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ‘ಬೇರೆ ವಿಚಾರಗಳಲ್ಲಿ ಮನಸ್ತಾಪ ಬೇಡ’; ಬಿಗ್ ಬಾಸ್ ಮುಗಿದ್ಮೇಲೆ ಮೊದಲ ಬಾರಿಗೆ ಅಭಿಮಾನಿಗಳೆದರು ಬಂದ ಅರವಿಂದ್