‘ಬೇರೆ ವಿಚಾರಗಳಲ್ಲಿ ಮನಸ್ತಾಪ ಬೇಡ’; ಬಿಗ್ ಬಾಸ್ ಮುಗಿದ್ಮೇಲೆ ಮೊದಲ ಬಾರಿಗೆ ಅಭಿಮಾನಿಗಳೆದರು ಬಂದ ಅರವಿಂದ್
Aravind KP: ಬಿಗ್ ಬಾಸ್ ಪೂರ್ಣಗೊಂಡು ನಾಲ್ಕು ದಿನ ಕಳೆದರೂ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಯಾವುದೇ ಮಾಧ್ಯಮಕ್ಕೆ ಸಂದರ್ಶನ ನೀಡಿರಲಿಲ್ಲ. ಈಗ ಅವರು ಇದೇ ಮೊದಲ ಬಾರಿಗೆ ಪ್ರತ್ಯಕ್ಷರಾಗಿದ್ದಾರೆ.
ಅರವಿಂದ್ ಕೆ.ಪಿ. ಅವರು ಬಿಗ್ ಬಾಸ್ ಕನ್ನಡ ಸೀಸನ್ 8ರ (Bigg Boss Kannada) ರನ್ನರ್ಅಪ್ ಆಗಿ ಹೊರ ಹೊಮ್ಮಿದ್ದಾರೆ. ಮಂಜು ವಿರುದ್ಧ ಅವರು ಕೆಲವೇ ಮತಗಳ ಅಂತರದಲ್ಲಿ ಸೋತಿದ್ದಾರೆ. ನಾನು ಗೆಲ್ಲೋಕೆ ಅರವಿಂದ್ ಅವರೇ ಸ್ಫೂರ್ತಿ ಎಂದು ಮಂಜು ಹೇಳಿದ್ದರು. ಇದು ಅರವಿಂದ್ಗೆ (Aravind KP) ಖುಷಿ ನೀಡಿದೆ. ಬಿಗ್ ಬಾಸ್ ಪೂರ್ಣಗೊಂಡು ನಾಲ್ಕು ದಿನ ಕಳೆದರೂ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಯಾವುದೇ ಮಾಧ್ಯಮಕ್ಕೆ ಸಂದರ್ಶನ ನೀಡಿರಲಿಲ್ಲ. ಈಗ ಅವರು ಇದೇ ಮೊದಲ ಬಾರಿಗೆ ಪ್ರತ್ಯಕ್ಷರಾಗಿದ್ದಾರೆ.
‘ನೀವು ನನಗೆ ತೋರಿಸಿದ ಪ್ರೀತಿ ಸಾಕಷ್ಟು ಖುಷಿ ನೀಡಿದೆ. ಕೊವಿಡ್ ಮತ್ತೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಸೇಫ್ ಆಗಿರಿ. ಬೇರೆಬೇರೆ ವಿಚಾರಕ್ಕೆ ಮನಸ್ತಾಪಗಳು ಬೇಡ’ ಎಂದು ಅರವಿಂದ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕನ್ನಡ ಮಿನಿ ಬಿಗ್ ಬಾಸ್ ಬಗ್ಗೆ ಹೊಸ ಅಪ್ಡೇಟ್; ನೀವಂದುಕೊಂಡಂತಿರಲ್ಲ ಸ್ಪರ್ಧಿಗಳು
Published on: Aug 13, 2021 12:27 PM
Latest Videos