ಕನ್ನಡ ಮಿನಿ ಬಿಗ್​ ಬಾಸ್​ ಬಗ್ಗೆ ಹೊಸ ಅಪ್​ಡೇಟ್​; ನೀವಂದುಕೊಂಡಂತಿರಲ್ಲ ಸ್ಪರ್ಧಿಗಳು

ಕಳೆದ ಭಾನುವಾರ (ಆಗಸ್ಟ್​ 8) ‘ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಂಡಿತ್ತು. ಮಂಜು ಪಾವಗಡ ವಿನ್ನರ್ ಹಾಗೂ ಅರವಿಂದ್​ ಕೆ.ಪಿ. ರನ್ನರ್​ ಅಪ್​ ಎಂದು ಘೋಷಣೆ ಮಾಡಲಾಗಿತ್ತು.

ಕನ್ನಡ ಮಿನಿ ಬಿಗ್​ ಬಾಸ್​ ಬಗ್ಗೆ ಹೊಸ ಅಪ್​ಡೇಟ್​; ನೀವಂದುಕೊಂಡಂತಿರಲ್ಲ ಸ್ಪರ್ಧಿಗಳು
ಕನ್ನಡ ಮಿನಿ ಬಿಗ್​ ಬಾಸ್​ ಬಗ್ಗೆ ಹೊಸ ಅಪ್​ಡೇಟ್​; ನೀವಂದುಕೊಂಡಂತಿರಲ್ಲ ಸ್ಪರ್ಧಿಗಳು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 12, 2021 | 2:48 PM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಂಡಿತಲ್ಲ ಎಂದು ಬೇಸರ ಮಾಡಿಕೊಂಡವರಿಗೆ ಕಲರ್ಸ್​ ಕನ್ನಡ ವಾಹಿನಿ ಸಿಹಿ ಸುದ್ದಿ ನೀಡಿದೆ. ಕಿರುತೆರೆಯ ತಾರೆಗಳನ್ನೇ ಇಟ್ಟುಕೊಂಡು ಒಂದು ವಾರಗಳ ಕಾಲ ಮಿನಿ ಬಿಗ್​ ಬಾಸ್​ ನಡೆಸಲಾಗುತ್ತಿದೆ. ಈಗ ಈ ಶೋ ಬಗ್ಗೆ ಹೊಸ ಅಪ್​ಡೇಟ್ ಒಂದು ಸಿಕ್ಕಿದೆ.

ಕಳೆದ ಭಾನುವಾರ (ಆಗಸ್ಟ್​ 8) ‘ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಂಡಿತ್ತು. ಮಂಜು ಪಾವಗಡ ವಿನ್ನರ್ ಹಾಗೂ ಅರವಿಂದ್​ ಕೆ.ಪಿ. ರನ್ನರ್​ ಅಪ್​ ಎಂದು ಘೋಷಣೆ ಮಾಡಲಾಗಿತ್ತು. ನಿತ್ಯ ಒಂದೂವರೆ ಗಂಟೆ ಮನರಂಜನೆ ನೀಡುತ್ತಿದ್ದ ಶೋ ಪೂರ್ಣಗೊಂಡಿತಲ್ಲ ಎಂದು ಅನೇಕರು ಬೇಸರ ಮಾಡಿಕೊಂಡಿದ್ದರು. ಹೀಗಿರುವಾಗಲೇ ಕಲರ್ಸ್​ ಕನ್ನಡ ವಾಹಿನಿ ಖುಷಿ ಸುದ್ದಿ ನೀಡಿದೆ.

ಒಂದು ವಾರಗಳ ಕಾಲ ಬಿಗ್​ ಬಾಸ್​ ಮನೆ ತುಂಬಲಿದೆ. ಕಲರ್ಸ್​ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರೇ ಈ ಬಾರಿಯ ಬಿಗ್​ ಬಾಸ್​ ಸ್ಪರ್ಧಿಗಳು. ಕಿರಣ್​ ರಾಜ್​, ಅಕುಲ್​ ಸೇರಿ ಸಾಕಷ್ಟು ಜನರು ಮನೆ ಒಳಗೆ ಸೇರಿದ್ದಾರೆ. ಎಲ್ಲರಿಗೂ ನಾನಾ ರೀತಿಯ ಟಾಸ್ಕ್ ನೀಡಲಾಗುತ್ತಿದೆ.

ತಮ್ಮಿಷ್ಟದ ನಟ-ನಟಿಯರನ್ನು ಧಾರಾವಾಹಿಗಳಲ್ಲಿ ಕೇವಲ ಕಲಾವಿದರಾಗಿ ನೋಡುತ್ತಾರೆ ವೀಕ್ಷಕರು. ಆದರೆ, ಈಗ ಎಲ್ಲಾ ಕಲಾವಿದರು ಬಿಗ್​ ಬಾಸ್​ ಮನೆ ಸೇರಿರುವುದರಿಂದ ಅವರ ನಿಜವಾದ ವ್ಯಕ್ತಿತ್ವ ಅನಾವರಣಗೊಳ್ಳಲಿದೆ.  ಹೀಗಾಗಿ, ಇಂದು ಹಂಚಿಕೊಂಡಿರುವ ಪ್ರೋಮೋಗೆ ‘ನೆಚ್ಚಿನ ಟೆಲಿವಿಶನ್ ಪಾತ್ರಗಳ ರಿಯಲ್ ಲೈಫ್’ ಎನ್ನುವ ಕ್ಯಾಪ್ಶನ್​ ನೀಡಲಾಗಿದೆ.

ಅಂದಹಾಗೆ, ಈ ಮಿನಿ ಬಿಗ್​ ಬಾಸ್​ ಹೇಗಿರುತ್ತದೆ? ಅದರ ರೂಪುರೇಷೆ ಏನು ಎಂಬುದನ್ನು ಕಲರ್ಸ್​ ಕನ್ನಡ ವಾಹಿನಿ ಬಿಟ್ಟುಕೊಟ್ಟಿಲ್ಲ. ವೇದಿಕೆ ಮೇಲೆ ಕಿಚ್ಚ ಸುದೀಪ್​ ಇರುತ್ತಾರಾ? ಎಂಬಿತ್ಯಾದಿ ಪ್ರಶ್ನೆಗೆ ಶನಿವಾರ ಉತ್ತರ ಸಿಗಲಿದೆ.

ಇದನ್ನೂ ಓದಿ: ‘ಅರವಿಂದ್​ ಜತೆ ಮದುವೆ ಆಗ್ತೀರಾ? ಕನ್ನಡದಲ್ಲೇ ಉತ್ತರ ಕೊಡಿ’; ದಿವ್ಯಾಗೆ ಪಟ್ಟು ಹಿಡಿದು ಪ್ರಶ್ನೆ ಕೇಳಿದ ಮಂಜು

ಬಿಗ್​ ಬಾಸ್ ಪಾಸ್​ ಆದ ಮಂಜು ಕಾಲೇಜಿನಲ್ಲಿ 9 ಬಾರಿ ಪರೀಕ್ಷೆ ಕಟ್ಟಿದರೂ ಪಾಸ್​ ಆಗಲಿಲ್ಲ; ಅವರ ವಿದ್ಯಾರ್ಹತೆ ಏನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ