ಶಿವರಾಜ್ಕುಮಾರ್ ಮನೆ ಮುಂದೆ ನಿಂತು ಮನದ ಮಾತು ಹಂಚಿಕೊಂಡ ಬಿಗ್ ಬಾಸ್ ವಿನ್ನರ್ ಮಂಜು
ಬಿಗ್ ಬಾಸ್ ಟ್ರೋಫಿ ಗೆದ್ದಿರುವ ಮಂಜು ಪಾವಗಡ ಅವರು ತಮ್ಮ ನೆಚ್ಚಿನ ಹೀರೋ ಶಿವರಾಜ್ಕುಮಾರ್ ನಿವಾಸಕ್ಕೆ ಹೋಗಿ ಸಿಹಿ ತಿನಿಸಿದ್ದಾರೆ. ಆ ಖುಷಿಯಲ್ಲಿ ‘ಹ್ಯಾಟ್ರಿಕ್ ಹೀರೋ’ ಅವರ ಮನೆ ಮುಂದೆ ನಿಂತು ಮಾತನಾಡಿದ್ದಾರೆ.
ಬಿಗ್ ಬಾಸ್ (Bigg Boss ) ಕನ್ನಡ ಸೀಸನ್ 8ರ ವಿನ್ನರ್ ಮಂಜು ಪಾವಗಡ (Manju Pavagada) ಅವರಿಗೆ ಶಿವರಾಜ್ಕುಮಾರ್ (Shivarajkumar) ಅವರು ಮಾಡಿದ ಒಂದೇ ಒಂದು ಹಾರೈಕೆ ದೊಡ್ಡ ವರವಾಯಿತು. ಶಿವಣ್ಣ ಅವರಿಂದ ವಿಶ್ ಮಾಡಿಸಿಕೊಳ್ಳಬೇಕು ಎಂಬುದು ಮಂಜು ಆಸೆ ಆಗಿತ್ತು. ಅದನ್ನು ಬಿಗ್ ಬಾಸ್ ಈಡೇರಿಸಿದ್ದರು ಕೂಡ. ಅಂತಿಮವಾಗಿ ಮಂಜು ಟ್ರೋಫಿ ಗೆಲ್ಲಲು ಶಿವಣ್ಣನ ಆ ಹಾರೈಕೆಯ ವಿಡಿಯೋ ಕೂಡ ಕಾರಣ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಹಾಗಾಗಿ, ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ ಬಳಿಕ ಶಿವರಾಜ್ಕುಮಾರ್ ಅವರ ಮನೆಗೆ ತೆರಳಿ ಮಂಜು ಆಶೀರ್ವಾದ ಪಡೆದುಕೊಂಡಿದ್ದಾರೆ.
‘ನಾನೊಬ್ಬ ಸಾಮಾನ್ಯ ವ್ಯಕ್ತಿ. ಪುಟ್ಟ ಕಲಾವಿದ. ನನ್ನಂತಹ ಕೋಟ್ಯಂತರ ಅಭಿಮಾನಿಗಳು ಶಿವಣ್ಣನಿಗೆ ಇದ್ದಾರೆ. ಹುಷಾರಿಲ್ಲ ಅಂದರೂ ಕೂಡ ನಾನು ಕೇಳಿದ ತಕ್ಷಣ ವಿಡಿಯೋ ಮಾಡಿ ಶುಭಕೋರಿದ್ದರು. ಅಷ್ಟು ದೊಡ್ಡ ವ್ಯಕ್ತಿತ್ವ ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಇಂದು ಒಬ್ಬ ಅಭಿಮಾನಿಯಾಗಿ ಅವರ ಮನೆಗೆ ಬಂದು, ಅವರಿಗೆ ಸಿಹಿ ತಿನಿಸಿದ್ದಕ್ಕೆ ಖುಷಿ ಆಗತ್ತಿದೆ. ಅಭಿಮಾನಿ ಆಗಿದ್ದಕ್ಕೂ ಸಾರ್ಥಕ ಆಯ್ತು’ ಎಂದು ಮಂಜು ಪಾವಗಡ ಹೇಳಿದ್ದಾರೆ.
ಇದನ್ನೂ ಓದಿ:
‘ಮಂಜು ಹೇಳಿದ ಆ ಮಾತನ್ನು ನಾನು ಎಂದಿಗೂ ಒಪ್ಪಿಕೊಳ್ಳಲ್ಲ’; ದಿವ್ಯಾ ಉರುಡುಗ
‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್